

2-8-2021. ಸೋಮವಾರ. ಯಲ್ಲಾಪುರ ;
ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹದ ಹಿನ್ನೆಲೆಯಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಡಳಿತ ಮಂಡಳಿ ತುರ್ತು ಸಭೆ ನಡೆಯಿತು. ಪರಮಪೂಜ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮಾರ್ಗದರ್ಶನ ನೀಡಿ ಉ.ಕ ಜಿಲ್ಲೆಯ ಭಾರಿ ಪ್ರಕೃತಿ ಅವಘಡಗಳನ್ನುರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು. ನಾಶವಾದ ಮನೆಗಳನ್ನು ಬೇರೆ ಸ್ಥಳಗಳಲ್ಲಿ ಪುನರ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು, ತೋಟ-ಗದ್ದೆ ಸಂಪೂರ್ಣ ನಾಶವಾದ ರೈತರಿಗೆ ಬೇರೆ ಸ್ಥಳದಲ್ಲಿ ಕೃಷಿ ಜಮೀನು ನೀಡಬೇಕು, ರಸ್ತೆ ಪುನರ್ನಿರ್ಮಾಣ ಆಗಬೇಕು, ಮತ್ತಿಘಟ್ಟ-ಹಳವಳ್ಳಿ ರಸ್ತೆ ನಿರ್ಮಾಣ ಅತ್ಯವಶ್ಯಕ. ಪ್ರವಾಹ, ಭೂಕುಸಿತ ಸಂತ್ರಸ್ತರಿಗೆ ಸಮಾಜ ಅಪಾರ ನೆರವಿನ ಹಸ್ತ ಚಾಚಬೇಕು ಎಂದು ಮನವಿಮಾಡಿದರು.
—advt–
ಯಲ್ಲಾಪುರ ನಗರದ ಉದ್ಯಮನಗರದಲ್ಲಿ ನೂತನವಾಗಿ ನಿರ್ಮಿಸಲಾದ, ಸುಸಜ್ಜಿತ ಆರ್.ಸಿ.ಸಿ. ಮನೆ ಬಾಡಿಗೆಗೆ ಕೊಡುವುದಿದೆ. ( ಸಸ್ಯಾಹಾರಿಗಳಿಗೆ ಮಾತ್ರ )
ಸಂಪರ್ಕಿಸಿ ; ಫೋನ್ ನಂ ; 7899588538

ಶ್ರೀಮಠದ ವಿವಿಧ ಸೀಮಾ ಮುಖ್ಯಸ್ಥರು, ಶ್ರೀಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಉಪಸಮಿತಿಗಳ ಕಾರ್ಯಕರ್ತರು ತಮ್ಮ ಸೀಮೆಯಲ್ಲಿ ಆಗಿರುವ ಭೂಕುಸಿತ, ಪ್ರವಾಹ ಹಾನಿ ವಿವರ ಮಂಡಿಸಿದರು. ಈಗಾಗಲೇ ಸ್ವರ್ಣವಲ್ಲೀ ಮಠದ ಅಂಗ ಸಂಸ್ಥೆಯಾದ ಹವ್ಯಕ ಜಾಗೃತಿ ಕಾರ್ಯಪಡೆಯು ಹಳವಳ್ಳಿ,ಕಲ್ಲೇಶ್ವರ, ಕಳಚೆ,ಕೊಡ್ಲಗದ್ದೆ ಭಾಗಗಳಿಗೆ ಆಹಾರ ಧಾನ್ಯ, ವಸ್ತ್ರ,ಔಷಧ ವಿತರಣೆ ಮಾಡಲಾಯಿತು. ಐ.ಎಂ.ಎ ಶಿರಸಿ ಸಹಯೋಗದೊಂದಿಗೆ ಮೆಡಿಕಲ್ ಕ್ಯಾಂಪ್ ಮಾಡಿದ ನೆರವಿನ ವಿವರ ನೀಡಿದರು.
–ADVT–

ಶ್ರೀಮಠದ ಮುಖ್ಯ ವ್ಯವಸ್ಥಾಪಕರು ಎಸ್ ಎನ್ ಗಾಂವ್ಕಾರ ಹಾನಿಯ ಸಂಗ್ರಹ ವರದಿ ಸಭೆಯ ಮುಂದೆ ಮಂಡಿಸಿದರು. ಕಳಚೆ ಪ್ರದೇಶದಲ್ಲಿ ಮನೆ ನೆಲಸಮವಾದ 20 ಕುಟುಂಬಗಳು ಮನೆ ತೊರೆದಿದ್ದಾರೆ. ಇನ್ನೂ 30 ಮನೆಗಳು ಕುಸಿದು ಬೀಳುವ ಹಂತದಲ್ಲಿವೆ. ಇಲ್ಲಿನ ಅರವತ್ತು ಮನೆಗಳಿಗೆ ಯಾವುದೇ ನಾಗರಿಕ ಸೌಲಭ್ಯ ಇಲ್ಲವಾಗಿದೆ. ರಸ್ತೆ, ವಿದ್ಯುತ್, ನೀರು, ದೂರವಾಣಿ ಸಂಪರ್ಕ ಕಡಿದಿದೆ. ಹಳವಳ್ಳಿ, ಸುಂಕಸಾಳ, ಆಚವೆ, ಹಿಲ್ಲೂರು ಹಳ್ಳಿಗಳ ಕೃಷಿಕಾರ್ಮಿಕರ 300 ಮನೆಗಳು ಹಾನಿಗೆ ಒಳಗಾಗಿವೆ. ಬಾಳೂರು,ಕರೂರು,ಮತ್ತೀಘಟ್ಟ ಪ್ರದೇಶದಲ್ಲಿ ಹತ್ತು ಮನೆಗಳು ನಾಶವಾಗಿವೆ. ಸುಮಾರು 25 ಎಕರೆ ತೋಟ ನೆಲಸಮವಾಗಿದೆ. ಕಳಚೆ ಸೇರಿದಂತೆ ಯಲ್ಲಾಪುರ, ಸಿದ್ದಾಪುರ, ಶಿರಸಿ ಪ್ರದೇಶಗಳ ಐದುನೂರು ಎಕರೆಗಿಂತಲೂ ಹೆಚ್ಚು ಅಡಿಕೆ ತೋಟಗಳು ಸಂಪೂರ್ಣ ನಾಶವಾಗಿದೆ ಎಂಬ ವಿವರ ನೀಡಿದರು.
—ADVT–

ಈ ಸಭೆಯಲ್ಲಿ ಪಾಲ್ಗೊಂಡ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸರ್ಕಾರಕ್ಕೆ ಭೂಕುಸಿತ ಅಧ್ಯಯನ ಸಮೀತಿ ಎಪ್ರಿಲ್ ನಲ್ಲಿ ವರದಿ ಸಲ್ಲಿಸಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ತಾಲೂಕುಗಳ ಸೇರ್ಪಡೆಯಾಗಿದೆ. ಕೃಷಿಭೂಮಿ ಸಂಪೂರ್ಣ ನಾಶವಾಗಿದ್ದಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು.
—ADVT–

ಆಡಳಿತ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ್ ಹೆಗಡೆಯವರು ಸರ್ಕಾರ ನೆರವು ಘೋಷಿಸಿದೆ. ಇನ್ನಷ್ಟು ಹಾನಿ ವಿವರ ಸೇರ್ಪಡೆಯಾಗಬೇಕು. ಪುನರ್ವಸತಿ ಬಗ್ಗೆ ಇನ್ನಷ್ಟು ಒತ್ತಡ ತರಬೇಕು. ರಾಷ್ಟ್ರದ ಗಮನ ಸೆಳೆಯಬೇಕು ಎಂದರು.
—-ADVT–


ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಸ್ವಾಗತಿಸಿದರು.ಜಿ.ವಿ ಹೆಗಡೆ ವಂದಿಸಿದರು. ವೆಂಕಟರಮಣ ಬೆಳ್ಳಿ, ಗಂಗಾಧರ ಕಡಕಿನಬೈಲು, ಸೀತಾರಾಮ ನೀರ್ನಳ್ಳಿ, ಎನ್.ಕೆ ಭಟ್ಟ ಅಗ್ಗಾಶಿಕುಂಬ್ರಿ,ಡಿ ಶಂಕರ ಭಟ್ಟ, ಸದಾನಂದ ಹಳವಳ್ಳಿ ಇನ್ನಿತರರು ಮಾತನಾಡಿದರು.
ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur
FACEBOOK GROUP – https://www.facebook.com/groups/593852164946589
