Latest from the Blog

ಯಕ್ಷಗಾನವು ಸಮೃದ್ಧವಾದ ಮತ್ತು ಪರಿಪೂರ್ಣವಾದ ರಾಜಕಲೆಯಾಗಿದೆ : ಸ್ವರ್ಣವಲ್ಲೀ ಶ್ರೀ
ಯಕ್ಷಗಾನವು ಸಮೃದ್ಧವಾದ ಮತ್ತು ಪರಿಪೂರ್ಣವಾದ ರಾಜಕಲೆಯಾಗಿದೆ : ಸ್ವರ್ಣವಲ್ಲೀ ಶ್ರೀ ಯಲ್ಲಾಪುರ ಪಟ್ಟಣದ ಗಾಂಧಿಕುಟೀರದಲ್ಲಿ ರವಿವಾರ ರಾತ್ರಿ 40 ನೇ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಯಕ್ಷಗಾನವು ನೃತ್ಯ, ಅಭಿನಯ, ಗಾನ,ತಾಳ,ವೇಷ, ಅರ್ಥಗಾರಿಕೆಯನ್ನು ಒಳಗೊಂಡ ಸಮೃದ್ಧವಾದ ಕಲೆಯಾಗಿದೆ. ಯಕ್ಷಗಾನವನ್ನು ಕಲೆಗಳ ರಾಜ ಎನ್ನಬಹುದು. ಯಕ್ಷಗಾನ ಪ್ರದರ್ಶನದಲ್ಲಿ ತಪಸ್ವಿಗಳ, ಮಹಾತ್ಮರ, ತ್ಯಾಗಿಗಳ ಕಥಾನಕಗಳು ಹೆಚ್ಚು ಬರುವಂತಾಗಬೇಕು, ಈ ಮೂಲಕ ಸಾಧಕರ, ಮಹಾತ್ಮರ ಬದುಕಿನ ಚಿತ್ರಣಗಳು ರಂಗಕ್ಕೆ ಬರುವ ಮೂಲಕ ಪ್ರೇಕ್ಷಕರಲ್ಲಿ ಸದ್ಭಾವನೆ ಬೆಳೆಯಬೇಕು, ಈ…
ಅರಬೈಲ್ ಶಾಲೆಯಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ
ಅರಬೈಲ್ ಶಾಲೆಯಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ ಈ ನಿಮಿತ್ತ ನಡೆದ ಭವ್ಯ ಮೆರವಣಿಗೆಯಲ್ಲಿ ಶಾಲಾಮಕ್ಕಳು ವಿವಿಧ ವೇಷಭೂಷಣ ಧರಿಸಿ ಕನ್ನಡಾಂಬೆಯ ಜಯಘೋಷ ಮೊಳಗಿಸಿದರು. ಕನ್ನಡ ನಾಡು ನುಡಿಯ ಕುರಿತು ಸಾಹಿತಿ, ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿ ಮಾತನಾಡಿ, ಕನ್ನಡ ನಮ್ಮ ನಾಡು, ಕನ್ನಡ ನಮ್ಮ ನುಡಿ, ಕನ್ನಡ ನಮ್ಮ ಹೆಮ್ಮೆ,ನಮ್ಮ ಉಸಿರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದ ಭಾಷೆಯಾಗಿದೆ. ಕವಿರಾಜಮಾರ್ಗದಿಂದ ಹಿಡಿದು ಇಂದಿನ ಆಧುನಿಕ ಸಾಹಿತ್ಯದವರೆಗೆ ಕನ್ನಡ ಸಾಹಿತ್ಯವು ತನ್ನದೇ ಆದ…
ಹೆದ್ದಾರಿ ತಡೆ ಪ್ರತಿಭಟನೆಗೆ ಸಕಲ ಸಿದ್ಧತೆ
ಹೆದ್ದಾರಿ ತಡೆ ಪ್ರತಿಭಟನೆಗೆ ಸಕಲ ಸಿದ್ಧತೆ ಅವರು ಸಮೀತಿಯ ಪ್ರಮುಖರೊಂದಿಗೆ ರವಿವಾರ ಯಲ್ಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಹಲವು ಹಂತಗಳಲ್ಲಿ ನದಿ ತಿರುವು ಯೋಜನೆ ವಿರುದ್ಧ ಪ್ರತಿಭಟನೆ ನಡೆದಿದೆ. ಆದರೆ ನಮ್ಮ ಬೆಡಿಕೆಗೆ ಸರ್ಕಾರಗಳು ಸ್ಪಂದಿಸಿಲ್ಲ, ನಮ್ಮ ಪ್ರತಿಭಟನೆಯ ಕಾವು ಹೆಚ್ಚಾದಂತೆ ಸರ್ಕಾರಗಳು ಯೋಜನೆಯ ಪರವಾಗಿ ಒಂದು ಹೆಜ್ಜೆ ಮುಂದಿಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಯೋಜನೆಯನ್ನು ವಿರೋಧಿಸಿ ಇತ್ತೀಚೆಗೆ ಶಿರಸಿ, ಬೆಂಗಳೂರಿನಲ್ಲಿ ನಡೆದ ಹೋರಾಟಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯಲಿಲ್ಲ, ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಹೋರಾಟ ನಡೆಯುತ್ತಿದ್ದು, ಈಗಾಗಲೇ…
ಹೆದ್ದಾರಿ ತಡೆ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಯ ಬೆಂಬಲ
ಹೆದ್ದಾರಿ ತಡೆ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಯ ಬೆಂಬಲ ವಿಲ್ಸನ್ ಫರ್ನಾಂಡಿಸ್ ಈ ಕುರಿತು ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ರವಿವಾರ ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿ, ನಮ್ಮ ಜಿಲ್ಲೆಯ ಉಳಿವಿಗಾಗಿ ನದಿತಿರುವು ಯೋಜನೆಯನ್ನು ತಕ್ಷಣ ಕೈಬಿಡಬೇಕು, ಅವೈಜ್ಞಾನಿಕ ಈ ಯೋಜನೆಯು ಜಿಲ್ಲೆಯ ಜನಜೀವನ ಮತ್ತು ಪರಿಸರದ ಮೇಲೆ ಪ್ರತೀಕೂಲವಾದ ಪರಿಣಾಮ ಬೀರಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ. ನದಿ ತಿರುವು ಯೋಜನೆಯ ವಿರುದ್ಧ ನ.3 ರಂದು ಯಲ್ಲಾಪುರದಲ್ಲಿ…
ಜಯಕರ್ನಾಟಕ ಸಂಘಟನೆಯ ವತಿಯಿಂದ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವ
ಜಯಕರ್ನಾಟಕ ಸಂಘಟನೆಯ ವತಿಯಿಂದ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವ ವಿಲ್ಸನ್ ಫರ್ನಾಂಡಿಸ್ ಜಯಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಮಾತನಾಡಿ, ನಮ್ಮ ಕನ್ನಡ ಭಾಷೆ, ನಮ್ಮ ನೆಲ, ನಮ್ಮ ಸಂಸ್ಕೃತಿ ಮತ್ತು ನಮ್ಮ ನಾಡಿನ ಮಹೋನ್ನತ ಇತಿಹಾಸದ ಬಗ್ಗೆ ನಾವೆಲ್ಲರೂ ಅರಿತುಕೊಂಡು, ನಾಡುನುಡಿಯ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಪಡಬೇಕು. ಜಯಕರ್ನಾಟಕ ಸಂಘಟನೆಯು ನಿರಂತರವಾಗಿ ನಾಡು ನುಡಿಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ, ನಾಡಿನ ಸಮಸ್ತ ಜನರ ಅಭ್ಯುದಯಕ್ಕೆ ನಮ್ಮ ಸಂಘಟನೆ ಅನೇಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದರು. ಕಾರ್ಯಕ್ರಮದಲ್ಲಿ…
ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರೋಣ: ಸಚಿವ ಲಕ್ಷ್ಮಣ ಸವದಿ
ಕನ್ನಡ ಭಾಷೆ, ಸಂಸ್ಕೃತಿ ಮತ್ತು ನೆಲ-ಜಲದ ರಕ್ಷಣೆಗೆ ಬದ್ಧರಾಗಿರೋಣ: ಸಚಿವ ಲಕ್ಷ್ಮಣ ಸವದಿ ಅವರು ಭಾನುವಾರ ಉತ್ತರ ಕನ್ನಡ ಜಿಲ್ಲಾಡಳಿತ ವತಿಯಿಂದ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕರ್ನಾಟಕವು ತನ್ನ ವೈವಿಧ್ಯಮಯ ಸಂಸ್ಕೃತಿ, ಜನಪದ ಕಲೆಗಳಿಂದ ಶ್ರೀಮಂತವಾಗಿದ್ದು, ಕನ್ನಡವು ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದಿದೆ. ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಸಿ, ಕನ್ನಡದಲ್ಲಿ ವ್ಯವಹರಿಸಿ ಕನ್ನಡದ ಕಲೆ ಮತ್ತು ಸಾಹಿತ್ಯವನ್ನು ಗೌರವಿಸಬೇಕು. ನಮ್ಮ ನಾಡಿನ ಏಕತೆ, ಸೌಹಾರ್ದತೆ ಮತ್ತು…
ಓದುವ ಅಭಿರುಚಿಯು ಭಾಷಾ ಬೆಳವಣಿಗೆಗೆ ಸಹಕಾರಿ: ದತ್ತಾತ್ರೇಯ ಕಣ್ಣೀಪಾಲ
ಓದುವ ಅಭಿರುಚಿಯು ಭಾಷಾ ಬೆಳವಣಿಗೆಗೆ ಸಹಕಾರಿ: ದತ್ತಾತ್ರೇಯ ಕಣ್ಣೀಪಾಲ ಬರಹಗಾರ ದತ್ತಾತ್ರೇಯ ಕಣ್ಣೀಪಾಲ ಉಪನ್ಯಾಸ ನೀಡಿ ಮಾತನಾಡಿ, ಆಧುನಿಕ ಭರಾಟೆಯಲ್ಲಿ ಕನ್ನಡ ಭಾಷೆಯ ಅಂತಃಸತ್ವ ಕ್ಷಿಣವಾಗುತ್ತಿದೆ, ಕನ್ನಡ ಭಾಷೆಯು ಮೂಲ ಸತ್ವವನ್ನು ಬಿಟ್ಟು ಪಲ್ಲಟವಾಗುತ್ತಿರುವುದು ಆತಂಕದ ಸಂಗತಿಯಾಗಿದೆ, ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿ ಬೆಳೆಸಿಕೊಂಡರೆ ನಮ್ಮ ಮಾತೃಭಾಷೆಯ ಉಳಿವಿಗೆ ಮತ್ತು ಭಾಷಾ ಬೆಳವಣಿಗೆಗೆ ಹೆಚ್ಚು ಅನುಕೂಲವಾಗುತ್ತದೆ. ಇಂದಿನ ಎಐ ಯುಗದಲ್ಲಿ ಕನ್ನಡ ಭಾಷೆಯ ಬಳಕೆಯು ಸಂಕ್ಷಿಪ್ತವಾಗುತ್ತಿದೆ, ಭಾಷಾಪ್ರೀತಿ ದೂರವಾಗುತ್ತಿದೆ, ಮಾತೃಭಾಷೆಯಲ್ಲಿ ಸಂವಹನ ನಡೆಸುವುದು ವಿರಳವಾಗುತ್ತಿದೆ, ಇದು ಇನ್ನಷ್ಟು…
ಯಲ್ಲಾಪುರದಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ
ಯಲ್ಲಾಪುರದಲ್ಲಿ ಸಂಭ್ರಮದಿಂದ ನಡೆದ ಕನ್ನಡ ರಾಜ್ಯೋತ್ಸವ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ, ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ರವಿವಾರ ಬೆಳಿಗ್ಗೆ ತಹಶಿಲ್ದಾರ ಕಚೇರಿಯಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಆಕರ್ಷಕ, ವಿವಿಧ ಸ್ಥಬ್ದ ಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಿದ್ದಿ ಸಮುದಾಯದ ಮಹಿಳೆಯರು ಡಮಾಮಿ ನೃತ್ಯ ಪ್ರದರ್ಶಿಸಿದರು. ತಹಶಿಲ್ದಾರ್ ಕಚೇರಿಯಿಂದ ಹೊರಟ ಮೆರವಣಿಗೆಯು ತಾಲೂಕಾ ಪಂಚಾಯತಿ ಆವರಣದ ಗಾಂಧಿ ಕುಟೀರದಲ್ಲಿ ಸಂಪನ್ನಗೊಂಡಿತು. ಗಾಂಧಿ ಕುಟೀರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಮಾತನಾಡಿ,…
ಭಗವದ್ಗೀತೆಯ ಸೇವೆಯು ಭಗವಂತನ ಸೇವೆಯಾಗಿದೆ: ಸ್ವರ್ಣವಲ್ಲೀ ಶ್ರೀ
ಭಗವದ್ಗೀತೆಯ ಸೇವೆಯು ಭಗವಂತನ ಸೇವೆಯಾಗಿದೆ: ಸ್ವರ್ಣವಲ್ಲೀ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಮಹಿಳಾ ಸಮಾಜ ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಭಗವದ್ಗೀತಾ ಉಪನ್ಯಾಸಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಗವದ್ಗೀತಾ ಅಭಿಯಾನಕ್ಕೆ ನಿರ್ಧಿಷ್ಟವಾದ ಗುರಿ, ಉದ್ದೇಶ ಇದೆ. ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆ ಇವುಗಳಿಗಾಗಿ ಅಭಿಯಾನ ನಡೆಯುತ್ತಿದೆ. ಎಲ್ಲೆಡೆಯೂ ಗೀತೆಯ ಪ್ರಸಾರ, ಪಠಣ ಆಗಬೇಕು, ಭಕ್ತಿಯ ಭಾವುಕತೆ ಮತ್ತು ವೈಚಾರಿಕ, ವೈಜ್ಞಾನಿಕ ಹಿನ್ನೆಲೆಯಲ್ಲಿ ಗೀತೆಗೆ ಮಹತ್ವದ…
ಯಲ್ಲಾಪುರದ ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಯಲ್ಲಾಪುರದ ಸುರೇಶ ಬೋರ್ಕರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಸುರೇಶ ಬೋರ್ಕರ್ ಕನ್ನಡ ರಾಜ್ಯೋತ್ಸವದ ನಿಮಿತ್ತ ಈ ಪ್ರಶಸ್ತಿಯನ್ನು ಕನ್ನಡ ನಾಡು, ನುಡಿಗೆ, ಕಲೆ, ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಮಹನೀಯರಿಗೆ ನೀಡಲಾಗುತ್ತಿದೆ. ನ.3 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನ.3 ರಂದು ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಕನ್ನಡಭವನ, ನಯನ ಸಭಾಂಗಣದಲ್ಲಿ ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಮಾದರಿ ಸಮಾಜ ಸೇವಕ…
ನಮ್ಮ ಪರಿಸರಕ್ಕೆ ಧಕ್ಕೆಯಾಗುವಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ: ಹರಿಪ್ರಕಾಶ ಕೋಣೆಮನೆ
ನಮ್ಮ ಪರಿಸರಕ್ಕೆ ಧಕ್ಕೆಯಾಗುವಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ: ಹರಿಪ್ರಕಾಶ ಕೋಣೆಮನೆ ಅವರು ಗುರುವಾರ ಪಟ್ಟಣದ ಎಲ್.ಎಸ್.ಎಂ.ಪಿ ಸೊಸೈಟಿ ಸಭಾಭವನದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂಸದ ಬೊಮ್ಮಾಯಿ ಯೋಜನೆ ಜಾರಿಯಾಗಬೇಕೆಂದು ಮತ್ತೆ ಒತ್ತಾಯಿಸಿದ್ದಾರೆ. ಅವರಿಗೆ ಸಮಯ ಬಂದಾಗ ತಕ್ಕ ಉತ್ತರ ನೀಡಲಿದ್ದೇವೆ. ಬಯಲುಸೀಮೆಗೆ ನೀರು ಕೊಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ನಮ್ಮನ್ನು ಒಕ್ಕಲೆಬ್ಬಿಸಿ, ನಮ್ಮ ಪರಿಸರಕ್ಕೆ ಧಕ್ಕೆಯಾಗುಂತಹ ಯೋಜನೆ ಜಾರಿಗೆ ತರಲು ನಾವು ಬಿಡುವುದಿಲ್ಲ. ಅದಕ್ಕಾಗಿಯೇ ಸ್ವರ್ಣವಲ್ಲೀ ಶ್ರೀಗಳ…
ವಿವಿದೆಡೆ ಭಗವದ್ಗೀತಾ ಅಭಿಯಾನ ಸಂಪರ್ಕ ಸಭೆ
ವಿವಿದೆಡೆ ಭಗವದ್ಗೀತಾ ಅಭಿಯಾನ ಸಂಪರ್ಕ ಸಭೆ ಆತ್ಮೀಯ ಓದುಗರೇ..ಯಲ್ಲಾಪುರ ತಾಲೂಕಾ ವ್ಯಾಪ್ತಿಯಲ್ಲಿ ನಡೆಯುವ ಭಗವದ್ಗೀತಾ ಅಭಿಯಾನದ ಫೋಟೋಗಳನ್ನು ಹಾಗೂ ಅಭಿಯಾನದ ಮಾಹಿತಿಯನ್ನು ನಮಗೆ ಕಳುಹಿಸಿ, ಸಮೀತಿಯ ದಾಖಲೆಗಳಲ್ಲಿ ನಮೂದಿಸುವ ಜೊತೆಗೆ, ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸುತ್ತೇವೆ. ಫೋಟೋ ಮತ್ತು ಮಾಹಿತಿ ಕಳಿಸಬೇಕಾದ ನಂಬರ್ : 7899588538 ಆನಗೋಡ ಭಾಗದಲ್ಲಿ ಸಂಪರ್ಕ ಸಭೆ ತಾಲೂಕಿನ ಆನಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ಭಗವದ್ಗೀತಾ ಅಭಿಯಾನದ ಸಂಪರ್ಕ ಸಭೆ ನಡೆಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ತಾಲೂಕಾ ಭಗವದ್ಗೀತಾ ಅಭಿಯಾನ ಸಮೀತಿಯ ಅಧ್ಯಕ್ಷ ಜಿ.ಎನ್.ಭಟ್…
ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕ ಹೆಬ್ಬಾರ್ ಕರೆ
ನದಿ ತಿರುವು ಯೋಜನೆ ವಿರೋಧಿಸಿ ನಡೆಯುವ ಹೆದ್ದಾರಿ ತಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಾಸಕ ಹೆಬ್ಬಾರ್ ಕರೆ ಈ ಕುರಿತು ಬುಧವಾರ ಮಾತನಾಡಿದ ಅವರು, ಸ್ವರ್ಣವಲ್ಲಿ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಸಂಪತ್ತು, ಪರಿಸರ ಹಾಗೂ ಜನಜೀವನದ ಹಿತದೃಷ್ಟಿಯಿಂದ ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಒತ್ತಾಯಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ…
ಪರಿಷತ್ ಚುನಾವಣಾ ಫಲಿತಾಂಶ ಮುಂದಿನ ರಾಜ್ಯ ರಾಜಕಾರಣದ ದಿಕ್ಸೂಚಿ: ಹರಿಪ್ರಕಾಶ ಕೋಣೆಮನೆ
ಪರಿಷತ್ ಚುನಾವಣಾ ಫಲಿತಾಂಶ ಮುಂದಿನ ರಾಜ್ಯ ರಾಜಕಾರಣದ ದಿಕ್ಸೂಚಿ: ಹರಿಪ್ರಕಾಶ ಕೋಣೆಮನೆ ಪಶ್ಚಿಮ ಪದವೀಧರ ಕ್ಷೇತ್ರ,ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಉಳಿಸುಕೊಂಡಿದೆ,ಅಷ್ಟು ಮಾತ್ರವಲ್ಲ ಮತಗಳಿಕೆ ಪ್ರಮಾಣವನ್ನು ಬಿಜೆಪಿ ಹೆಚ್ಚಿಸಿಕೊಂಡಿದೆ. ಬೆಂಗಳೂರು ಶಿಕ್ಷಕ ಕ್ಷೇತ್ರವನ್ನು ಕಾಂಗ್ರೆಸ್ ನಿಂದ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಗೆದ್ದುಕೊಂಡಿರುವುದು ಪ್ರಜ್ಞಾವಂತ ಮತದಾರರು ಕಾಂಗ್ರೇಸ್ ಪಕ್ಷವನ್ನು ಸ್ಪಷ್ಟವಾಗಿ ತಿರಸ್ಕರಿಸಿರುವುದರ ಸಂಕೇತ ಎಂದು ಹರಿಪ್ರಕಾಶ ಕೋಣೆಮನೆ ವಿಶ್ಲೇಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದ ಬಳಿಕ ಒಂದೇ…
ನದಿ ಜೋಡಣೆ ವಿರುದ್ಧದ ಹೋರಾಟಕ್ಕೆ ಸ್ಪಂದಿಸದ ಸರ್ಕಾರ, ಹೆದ್ದಾರಿ ತಡೆ ಅನಿವಾರ್ಯ
ನದಿ ಜೋಡಣೆ ವಿರುದ್ಧದ ಹೋರಾಟಕ್ಕೆ ಸ್ಪಂದಿಸದ ಸರ್ಕಾರ, ಹೆದ್ದಾರಿ ತಡೆ ಅನಿವಾರ್ಯ ಅವರು, ಮಂಗಳವಾರ ಪಟ್ಟಣದ ಅಡಿಕೆಭವನದಲ್ಲಿ ನ.3 ರಂದು ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆಯುವ ಚಳುವಳಿಯ ಪೂರ್ವಸಿದ್ಧತಾ ಸಭೆಯಲ್ಲಿ ಚಳುವಳಿಯ ರೂಪುರೇಷೆ ಕುರಿತು ಮಾಹಿತಿ ನೀಡಿದರು.ರಾಷ್ಟ್ರೀಯ ಹೆದ್ದಾರಿಯ ಮೇಲೆ ಚಳುವಳಿ ಮಾಡುವುದು ಕಾನೂನು ಪ್ರಕಾರ ಅಲ್ಲವಾದರೂ ಸರ್ಕಾರ ನಮ್ಮ ಒಂದೂವರೆ ವರ್ಷದ ಹೋರಾಟಕ್ಕೆ ಬೆಲೆ ಕೊಡದೇ ಇರುವುದರಿಂದ ಅನಿವಾರ್ಯವಾಗಿ ಈ ಹೋರಾಟಕ್ಕೆ ಮುಂದಾಗಬೇಕಾಯಿತು. ನಮ್ಮ ಪೂರ್ಣಪ್ರಮಾಣದ ಹೋರಾಟದ ಶಕ್ತಿಯೇ ಸ್ವರ್ಣವಲ್ಲಿ ಶ್ರೀಗಳು. ಅವರ ಮಾರ್ಗದರ್ಶನದಲ್ಲಿ ಈ…
ಬೈಕಿಗೆ ಲಾರಿ ಡಿಕ್ಕಿ: ಬೈಕ್ ಸವಾರನಿಗೆ ಗಾಯ
ಬೈಕಿಗೆ ಲಾರಿ ಡಿಕ್ಕಿ: ಬೈಕ್ ಸವಾರನಿಗೆ ಗಾಯ ಆರೋಪಿ ಲಾರಿ ಚಾಲಕ ಮಧ್ಯಪ್ರದೇಶ ರಾಜ್ಯದ, ಶಿಹೋರ ಜಿಲ್ಲೆಯ ಕುರವರ ಗ್ರಾಮದ ನಿವಾಸಿ ಜಿತೇಂದ್ರ ಸಿಂಗ ಠಾಕೂರ್ ಎಂಬಾತ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಅರಬೈಲ್ ಘಟ್ಟದ ಗಣಪತಿಕಟ್ಟೆ ತಿರುವಿನಲ್ಲಿ, ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಹೋಗುತ್ತಿದ್ದ ಬೈಕಿಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸೂರ್ಯ ತಂದೆ ಮಹಾಬಲೇಶ್ವರ ಭಂಡಾರಿಯವರ ಬಲಕಾಲಿನ ಮಂಡಿಯ ಹತ್ತಿರ ಹಾಗೂ ಬಲಕಾಲಿನ…
ರೂಪಕಾಭಿನಯದಲ್ಲಿ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ
ರೂಪಕಾಭಿನಯದಲ್ಲಿ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಹಿಂದಿ ಭಾಷೆಯಲ್ಲಿ ಸಿದ್ಧಪಡಿಸಿದ ಆರು ನಿಮಿಷದ ಈ ರೂಪಕದ ಅಭಿನಯದಲ್ಲಿ ಗಹನಶ್ರೀ ಹುಲಸ್ವಾರ ,ಚೈತ್ರಾ ಭಟ್ ,ಮೈತ್ರಿ ಭಟ್ , ಧಾತ್ರಿ ಭಟ್ಟ,ಅಪೂರ್ವ ಭಾಗವತ ಭಾಗವಹಿಸಿದ್ದರು. ಹಿಂದಿ ಶಿಕ್ಷಕ ಗಿರೀಶ ಹೆಬ್ಬಾರ್ ಮಾರ್ಗದರ್ಶನ ಮಾಡಿದ್ದರು. ===============
ನಾವೆಲ್ಲರೂ ಒಂದು ಎಂಬ ಭಾವನೆ ಬರಬೇಕು: ಬ್ರಹ್ಮಾನಂದ ಭಾರತೀ ಸ್ವಾಮೀಜಿ
ನಾವೆಲ್ಲರೂ ಒಂದು ಎಂಬ ಭಾವನೆ ಬರಬೇಕು: ಬ್ರಹ್ಮಾನಂದ ಭಾರತೀ ಸ್ವಾಮೀಜಿ ತಾಲೂಕಿನ ಕುಚಗುಂಡಿಯಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಯೋಚನೆ ಬರುವುದು ಸಹ ಪೂರ್ವ ಜನ್ಮದ ಪುಣ್ಯ. ಇನ್ನೊಬ್ಬರ ಯಶಸ್ಸನ್ನು ನೋಡಿ ಖುಷಿ ಪಡುವವರ ಸಂಖ್ಯೆ ಅತೀ ವಿರಳ. ಇನ್ನೊಬ್ಬರ ಏಳಿಗೆಗೆ ಅಡ್ಡಗಾಲು ಹಾಕುವುದು ಧರ್ಮವಲ್ಲ. ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರೆ…
ಮತದಾರರ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರು
ಮತದಾರರ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರು ಖಾಸಗಿ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ ಯೋಜನಾ ಉದ್ಯೋಗ ವಿನಿಮಯ ಕಚೇರಿ ಕಾರವಾರ ಇವರ ವತಿಯಿಂದ ಪಿಯುಸಿ, ಡಿಪ್ಲೋಮಾ ಹಾಗೂ ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳಿಗೆ ಖಾಸಗಿ ಕಂಪನಿಯಾದ ಡಿಬಿಎಸ್ ಬ್ಯಾಂಕ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅ.29 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನೇರ ಸಂದರ್ಶನವನ್ನು ಯೋಜನಾ ಉದ್ಯೋಗ ವಿನಿಮಯ ಕಚೇರಿ, ಶ್ರೀಮತಿ…
ನದಿ ಜೋಡಣೆ ಯೋಜನೆ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು, ಕೇಂದ್ರದ ಪಾತ್ರ ತಾಂತ್ರಿಕ ಬೆಂಬಲಕ್ಕಷ್ಟೇ ಸೀಮಿತ:
ನದಿ ಜೋಡಣೆ ಯೋಜನೆ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು, ಕೇಂದ್ರದ ಪಾತ್ರ ತಾಂತ್ರಿಕ ಬೆಂಬಲಕ್ಕಷ್ಟೇ ಸೀಮಿತ: ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಸ್ಪಷ್ಟನೆ ಪ್ರಸ್ತಾವಿತ ಬೇಡ್ತಿ-ಹಿರೇವಡ್ಡಟ್ಟಿ (ಮಾರ್ಪಡಿಸಿದ ಬೇಡ್ತಿ, ವರದಾ) ನದಿ ಜೋಡಣೆ ಯೋಜನೆಯು ಕಾರ್ಯಸಾಧುವಲ್ಲ ಹಾಗೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ; ಆದ್ದರಿಂದ ಇದನ್ನು ಅನುಷ್ಠಾನಗೊಳಿಸಬಾರದು, ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಮುಂದಿನ ಎಲ್ಲಾ ಚಟುವಟಿಕೆಗಳನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಲೋಕಸಭಾ…
ಯಲ್ಲಾಪುರದಲ್ಲಿ ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭ
ಯಲ್ಲಾಪುರದಲ್ಲಿ ಅದ್ದೂರಿಯಾಗಿ ನಡೆದ ಶ್ರೀಕೃಷ್ಣಾರ್ಪಣಂ ಸಮಾರಂಭ ಸುಜ್ಞಾನ ಸೇವಾ ಸಂಸ್ಥೆ ಉತ್ತರಕನ್ನಡ, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಪತ್ರಿಕೆಯ ವತಿಯಿಂದ, ಗೌತಮ ಜುವೆಲ್ಲರ್ಸ್ ಯಲ್ಲಾಪುರ, ಹಾಂಗ್ಯೋ ಐಸ್ ಕ್ರೀಂ, ವಂದನಾ ಮೆಗಾ ಮಾರ್ಟ್ ಸಹಯೋಗದಲ್ಲಿ ರಂಗ ಸಹ್ಯಾದ್ರಿ ಮತ್ತು ಜ್ಞಾನೇಶ್ವರಿ ಮಹಿಳಾ ಮಂಡಳ ಟ್ರಸ್ಟ್ ಇವುಗಳ ಸಹಕಾರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ ನಡೆಯಿತು. ಈ ಸಮಾರಂಭವನ್ನು ಉದ್ಘಾಟಿಸಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಭಾರತೀಯ ಭವ್ಯ ಸಂಸ್ಕೃತಿಯನ್ನು ಮತ್ತು ಸನಾತನ ಪರಂಪರೆಯನ್ನು ಉಳಿಸುವ…
Something went wrong. Please refresh the page and/or try again.
website created by – JYOTRADITYA BHAT YELLAPUR
9481781038
Get new content delivered directly to your inbox.
