ಯಲ್ಲಾಪುರ ಪಟ್ಟಣದ ಸಬಗೇರಿ ಗ್ರಾಮದ ನಾರಾಯಣಪುರದ ಗಸ್ತು ಬ್ಲಾಕ್ ನಂ.XXXI 33ರ ಸ.ನಂ. 4Aರಲ್ಲಿ ಇನ್ನೂ ಬಲಿಯದ, ತಿರುಳಿಲ್ಲದ ಶ್ರಿಗಂಧದ ಮರಗಳನ್ನು ಕಡಿದ ಘಟನೆ ನಡೆದಿದೆ.

ಗಂಧದ ಮರದ ತುದಿಯ ಭಾಗವನ್ನು ಹಾಗೂ ಬುಡಚಿಗಳನ್ನು ಬಿಟ್ಟು, ಉಳಿದ ಭಾಗಗಳನ್ನು ಕದ್ದೊಯ್ದಿದ್ದಾರೆ. ಅರಣ್ಯ ಇಲಾಖೆಯವರು ಈ ಕುರಿತು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದ್ದು, ಅಂದಾಜು 44 ಕೆಜಿ ಗಂಧದ ಮರದ ಬುಡಚಿ ಹಾಗೂ 85 ಕೆಜಿ ತಿರುಳಿರದ, ಹಸಿ ಸಿಪ್ಪೆ ಸಹಿತ ಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಗಂದಧ ಮರ ಕಡಿದ ಆರೋಪಿಗಳು ಯಾರು ಎಂದು ಇನ್ನೂ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿಯೇ ಇಂತಹ ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.

=================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading