ಸಾರ್ವಜನಿಕ ಸ್ಥಳದಲ್ಲಿ ಜೂಜಾಟ: 10 ಜನರ ವಿರುದ್ಧ ಪ್ರಕರಣ ದಾಖಲು
ಯಲ್ಲಾಪುರ ಪಟ್ಟಣದ ನಾರಾಯಣಪುರಕ್ಕೆ ಹೋಗುವ ರಸ್ತೆಯ ಪಿಎಲ್‍ಡಿ ಬ್ಯಾಂಕ್ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ, ತಮ್ಮ ಲಾಭಕ್ಕಾಗಿ ಇಸ್ಪಿಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ, ಅಂದರ್ ಬಾಹರ್ ಜುಗಾರಾಟ ಆಡುತ್ತಿದ್ದ ಸಂದರ್ಭದಲ್ಲಿ ಪಿಎಸ್ಸೈ ರಾಜಶೇಖರ ವಂದಲಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ, ಅಂದರ್ ಬಾಹರ್ ಆಡುತ್ತಿದ್ದ 10 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಾದ ಯಲ್ಲಾಪುರ ಪಟ್ಟಣದನಾಗರಾಜ, ಮನೋಜ, ಉದಯ, ವೆಂಕಟೇಶ, ಶಂಕರ, ಸೂರಜ್, ಕಿರಣ, ನಾಗರಾಜ, ಚಂದ್ರು, ಪವನ್ ಎಂಬುವವರ ವಿರುದ್ಧ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರೆಲ್ಲರೂ ಕೂಲಿ, ಗೌಂಡಿ, ಸೆಂಟ್ರಿಂಗ್ ಕೆಲಸ ನಿರ್ವಹಿಸುವವರಾಗಿದ್ದಾರೆ. ದಾಳಿಯ ಸಂದರ್ಭದಲ್ಲಿ ಆರೋಪಿಗಳಿಂದ 3400 ರೂ ನಗದುಹಣ ಹಾಗೂ ಜೂಜಾಟದ ಪರಿಕರಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.