ಸ್ವಿಫ್ಟ್ ಕಾರು ಸಮೇತ ಕಾರಿನಲ್ಲಿದ್ದ ಕೋಟ್ಯಾಂತರ ರೂ ಹಣವನ್ನು ಏಳೆಂಟು ಜನ ಆರೋಪಿಗಳು ದರೋಡೆ ಮಾಡಿದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ. ಈ ಕುರಿತು ಕೊಲ್ಲಾಪುರದ ನೀಲೇಶ ನಾಯ್ಕ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎರಡು ಕಾರುಗಳಲ್ಲಿ ಬಂದ ಆರೋಪಿಗಳು, ತಮಗೆ ಹೊಡೆದು, ತಮ್ಮ 2 ಲಕ್ಷ ರೂ ಬೆಲೆಬಾಳುವ ಸ್ವಿಫ್ಟ್ ವಿ.ಡಿ.ಐ. ಕಾರು ಸಮೇತ ಕಾರಿನಲ್ಲಿದ್ದ 2,11,86,000 ರೂ ಹಣವನ್ನು ಮತ್ತು 10 ಸಾವಿರ ರೂ ಬೆಲೆಯ ಎರಡು ಮೊಬೈಲ್ ಗಳನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ . ಶಾರದಾಂಬಾ ದೇವಾಲಯದಲ್ಲಿ ವಿದ್ಯಾರಂಭ ಕಾರ್ಯಕ್ರಮ ಸಂಪನ್ನ

ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw

ಶಕ್ತಿಗಣಪತಿ ದೇವಾಲಯದ ಬಾಗಿಲಿನ ಬೀಗ ಮುರಿದು ಕಾಣಿಕೆಹುಂಡಿ ಕದ್ದ ಕಳ್ಳರು.

ಯಲ್ಲಾಪುರ ಪಟ್ಟಣದ ರವೀಂದ್ರನಗರದ ಶಕ್ತಿಗಣಪತಿ ದೇವಾಲಯದ ಬಾಗಿಲಿನ ಬೀಗವನ್ನು ಮುರಿದು ದೇವಾಲಯದ ಒಳಗಡೆ ಇದ್ದ ಕಾಣಿಕೆ ಹುಂಡಿಯನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ. ಕಾಣಿಕೆ ಹುಂಡಿಯಲ್ಲಿದ್ದ ಅಂದಾಜು 7 ಸಾವಿರ ರೂ ಹಾಗೂ 10 ಸಾವಿರ ರೂ ಮೌಲ್ಯದ ಕಾಣಿಕೆ ಹುಂಡಿಯನ್ನು ಕಳ್ಳರು ಕದ್ದೊಯ್ದಿರುವುದಾಗಿ ಸುಬ್ರಾಯ ಭಟ್ಟ ರವೀಂದ್ರನಗರ ಅವರು ಯಲ್ಲಾಪುರ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ facebook group – https://www.facebook.com/groups/593852164946589/ join ಆಗಿ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading