ಸೆ.26ರಂದು ಲಯನ್ಸ್ ಕ್ಲಬ್ ವತಿಯಿಂದ ಯಲ್ಲಾಪುರದಲ್ಲಿ ಗುರುವಂದನಾ ಕಾರ್ಯಕ್ರಮ
ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಸೆ.26 ಶನಿವಾರದಂದು ಸಂಜೆ 4.30 ಗಂಟೆಗೆ ಯಲ್ಲಾಪುರ ಪಟ್ಟಣದ ಎಪಿಎಂಸಿ ಆವರಣದ ಅಡಿಕೆ ಭವನದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶಿಕ್ಷಕರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಗುವುದು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ MJF ಶೇಷಗಿರಿ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ಲಯನ್ಸ್ ಕ್ಲಬ್ ಸಂಘಟನೆಯ ಪ್ರಮುಖರಾದ MJF ಸತ್ಯಾನಂದ ಖೈರನ್, PMJF ರಾಜೇಶ ಸಾಲೆಹಿತ್ತಲ್, PMJF ಡಾ.ಅಶೋಕ ಹೆಗಡೆ, MJF ಡಾ.ಶೇಖರ ಹಚಿನಾಲಮಠ್ ಮುಂತಾದವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಾಳಗಿಮನೆ ಶಾಲಾ ಶಿಕ್ಷಕಿ ಸವಿತಾ ನಾಯ್ಕ, ಕೊಡಸೆ ಶಾಲೆಯ ಶಿಕ್ಷಕಿ ಶ್ವೇತಾ ದೇಶಭಂಡಾರಿ, ವಿಶ್ವದರ್ಶನ ಶಾಲೆಯ ಶಿಕ್ಷಕಿ ಮಹಾದೇವಿ ಭಟ್ಟ, ಸ್ನೇಹಸಾಗರ ಶಾಲೆಯ ಶಿಕ್ಷಕಿ ವೀಣಾ ರಮೇಶ, ಮಲವಳ್ಳಿ ಶಾಲೆಯ ಶಿಕ್ಷಕ ಎಂ.ವಿ.ಭಟ್ಟ, ಯೋಗಿ ಕೋಚಿಂಗ್ ಸೆಂಟರ್ ನ ಯೋಗೇಶ ಶಾನಭಾಗ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.