ಯಲ್ಲಾಪುರ ಪಟ್ಟಣದ ಎಲ್.ಎಸ್.ಎಂ.ಪಿ. ಸೊಸೈಟಿಯ ವಾರ್ಷಿಕ ಸರ್ವಸಾಧಾರಣ ಸಭೆಯು ಸೊಸೈಟಿಯ ಸಭಾಭವನದಲ್ಲಿ ಸೋಮವಾರ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೇರಿ ಮಾತನಾಡಿ, ಈವರ್ಷ ಸೊಸೈಟಿಯ ನೂತನ ಸಭಾಭವನದಲ್ಲಿ ಸರ್ವ ಸಾಧಾರಣ ಸಭೆ ನಡೆಸುತ್ತಿರುವುದು ಸಂತಸದ ವಿಷಯವಾಗಿದೆ, ನಮ್ಮ ಸಂಸ್ಥೆಗೆ ವಾಣಿಜ್ಯ ಸಂಕೀರ್ಣದಿಂದ 23 ಲಕ್ಷ ಆದಾಯ ಬಂದಿದೆ, ಆದಾಯದ ಮೂಲ ಉತ್ತಮವಾಗಿದೆ, ಸಂಸ್ಥೆಗೆ ಭದ್ರವಾದ ಬುನಾದಿ ಇದೆ, ಸರ್ವ ಸದಸ್ಯರ ಪ್ರೋತ್ಸಾಹವೇ ಸಂಸ್ಥೆಯ ಪ್ರಗತಿಗೆ ಕಾರಣವಾಗಿದ್ದು ಕಳೆದ ಆರ್ಥಿಕ ವರ್ಷದಲ್ಲಿ ನಮ್ಮ ಸೊಸೈಟಿಗೆ 53,57015 ರೂ ನಿವ್ವಳ ಲಾಭವಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಆದಾಯ ಬಂದಿದೆ ಎಂದರು.

ಈಬಾರಿ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಸೇರಿದಂತೆ ನಾನಾ ರೋಗಬಾಧೆ ತಗುಲಿ ಬೆಳೆಗಾರರಿಗೆ ತೀವ್ರ ನಷ್ಟವಾಗಿದೆ. ರೈತರು ಅಡಿಕೆಯ ಜೊತೆ ಪರ್ಯಾಯ ಬೆಳೆ ಬೆಳೆಯುವ ಚಿಂತನೆಯನ್ನು ಮಾಡಬೇಕು ಎಂದರು. ನಮ್ಮ ಸೊಸೈಟಿಯಿಂದ ಅಂತ್ಯ ಸಂಸ್ಕಾರ ನಿಧಿ, ಆಪತ್ ಠೇವು, ಅಪಘಾತ ವಿಮೆ, ವಿದ್ಯಾರ್ಥಿ ವೇತನ ವಿತರಣೆ ಮುಂತಾದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಟಿ.ಆರ್.ಹೆಗಡೆ ತೊಂಡೇಕೆರೆ, ನಿರ್ದೇಶಕರಾದ ಆರ್.ಎಸ್.ಭಟ್ಟ, ತಿಮ್ಮಣ್ಣ ಘಟ್ಟಿ, ಸುಬ್ರಾಯ ಭಟ್ಟ ದಾನ್ಯಾನಕೊಪ್ಪ, ಅಪ್ಪು ಆಚಾರಿ, ಗಾಬ್ರಿಯಲ್ ಫರ್ನಾಂಡಿಸ್, ಹನುಮಂತ ಕೊರವರ್, ಬ್ಯಾಂಕ್ ಪ್ರತಿನಿಧಿ ಎಂ.ಎನ್.ಭಟ್ಟ, ಮಹಿಳಾ ಪ್ರತಿನಿಧಿಗಳಾದ ಶ್ಯಾಮಲಾ ಹೆಗಡೆ, ಪ್ರಭಾ ಭಾಗ್ವತ್, ವೃತ್ತಿಪರ ನಿರ್ದೇಶಕರಾದ ಗೋಪಾಲಕೃಷ್ಣ ಬಾಳೆಗದ್ದೆ, ಮಹಾಬಲೇಶ್ವರ ಭಟ್ಟ ಮಾಲದಮನೆ, ರಾಘವೇಂದ್ರ ಭಟ್ಟ ಕಬ್ಬಿನಗದ್ದೆ, ಗಣಪತಿ ಭಟ್ಟ ಕವಡಿಕೇರಿ, ಟಿ.ಎಂ.ಎಸ್ ನಿರ್ದೇಶಕ ವೆಂಕಟ್ರಮಣ ಭಟ್ಟ ಮುಂತಾದವರು ಇದ್ದರು. ನಿರ್ದೇಶಕ ಸುಬ್ರಾಯ ಭಟ್ಟ ದಾನ್ಯಾನಕೊಪ್ಪ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಎಂಎಸ್.ಹೆಗಡೆ ನಿರ್ವಹಿಸಿದರು.

=======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading