29-7-2021.ಗುರುವಾರ.

E-ಯಲ್ಲಾಪುರ
ಭೂಕುಸಿತ ಹಾಗೂ ನೆರೆ ಹಾವಳಿಯಿಂದ ಹಾನಿಗೊಳಗಾದ ಯಲ್ಲಾಪುರ ತಾಲೂಕಿನ ತಳಕೇಬೈಲ್,ಅರಬೈಲ್‍ಘಟ್ಟ, ಪ್ರವಾಹಕ್ಕೆ ಕೊಚ್ಚಿಹೋದ ಗುಳ್ಳಾಪುರ ಸೇತುವೆ ಪ್ರದೇಶಕ್ಕೆ ಗುರುವಾರ ಸಿ.ಎಂ.ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿ ವರು ಭೂ ಕುಸಿತ ಹಾಗೂ ಮಳೆಹಾನಿಗೊಳಗಾದ ಪ್ರದೇಶಗಳಲ್ಲಿ ರಸ್ತೆ, ಸೇತುವೆ,ಕುಡಿಯುವ ನೀರು ಬೆಳಕು ಮುಂತಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು. ಮನೆ ಕಳೆದುಕೊಂಡವರಿಗೆ, ಸಂತ್ರಸ್ತರಿಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ಯಲ್ಲಾಪುರಕ್ಕೆ ಆಗಮಿಸಿದ ಮುಖ್ಯಮಂತ್ರಿಯವರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಘಟಕವನ್ನು ಉಧ್ಘಾಟಿಸಿದರು.ಶಾಸಕರಾದ ಶಿವರಾಮ ಹೆಬ್ಬಾರ್, ದಿನಕರ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ವಿ.ಪಸದಸ್ಯಶಾಂತಾರಾಮ ಸಿದ್ದಿ, ಪಂ.ರಾ.ಯೋಜನಾ ಉಪಾಧ್ಯಕ್ಷ ಪ್ರಮೋದ ಹೆಗಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯ್ಕ ಹಾಗೂ ಪ್ರಮುಖರು ಇದ್ದರು.

—advt—

ಬಾಡಿಗೆ ಮನೆ ಲಭ್ಯವಿದೆ.
ಯಲ್ಲಾಪುರ ಪಟ್ಟಣದ ಉದ್ಯಮನಗರದಲ್ಲಿ ಬಾಡಿಗೆಮನೆ ಲಭ್ಯವಿದೆ.( ಸಸ್ಯಾಹಾರಿಗಳಿಗೆ ಮಾತ್ರ ) ಸಂಪರ್ಕ ; 7899588538

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt *****************************************************

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur ——————————–

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading