1-8-2021. ರವಿವಾರ.
E-ಯಲ್ಲಾಪುರ.
ಸೋಮವಾರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ತೆರಳಿ ಮಳೆಯಿಂದ ಆದ ಹಾನಿಯನ್ನು ವೀಕ್ಷಿಸಲಿರುವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯ ಅವರು ಕಾರವಾರಕ್ಕೆ ತೆರಳುವ ಮಾರ್ಗ ಮಧ್ಯೆ ರವಿವಾರ ರಾತ್ರಿ ಯಲ್ಲಾಪುರಕ್ಕೆ ಆಗಮಿಸಿದ್ದರು.

–ADVT–

ಪಟ್ಟಣಕ್ಕೆ ಆಗಮಿಸಿದ ಅವರನ್ನು ಸಂಭ್ರಮ ಹೊಟೇಲ್ ಸಮೀಪ ಕಾಂಗ್ರೆಸ್ ಮುಖಂಡರು, ನೂರಾರು ಕಾರ್ಯಕರ್ತರು ಆತ್ಮೀಯವಾಗಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಮುಖಂಡರು,ಕಾರ್ಯಕರ್ತರತ್ತ ನಸುನಗುತ್ತ ಆತ್ಮೀಯತೆಯಿಂದ ಕುಶಲೋಪರಿ ವಿಚಾರಿಸಿದ ಅವರು ಎಲ್ಲರತ್ತ ಕೈಮುಗಿದು ಕಾರವಾರಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮುಖಂಡ ಪ್ರಶಾಂತ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕಾರ್, ಮುಖಂಡರಾದ ಪ್ರಶಾಂತ ಸಭಾಹಿತ, ಅನೀಲ್ ಮರಾಠೆ, ಶಿವಾನಂದ ನಾಯ್ಕ ನಂದೊಳ್ಳಿ, ರವಿ ನಾಯ್ಕ್ ಹಾಗೂ ಮಹಿಳಾ ಘಟಕದ ಪ್ರಮುಖರು, ಕಾರ್ಯಕರ್ತರು ಇದ್ದರು

–ADVT–

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading