E – ಯಲ್ಲಾಪುರ. ಎಜ್ಯುಕೇಷನ್ ನ್ಯೂಸ್:

( ಪ್ರಾಯೋಜಿತ )

ದ್ವಿತೀಯ ಪಿಯುಸಿ ಕಲಿಕೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಧಾನ ಘಟ್ಟವಾಗಿದ್ದು, ಇದು ವಿದ್ಯಾರ್ಥಿಯ ಮುಂದಿನ ಜೀವನವನ್ನು  ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.  ಈ ನಿಟ್ಟಿನಲ್ಲಿ ಧಾರವಾಡದ ಅರ್ಜುನ್ ಎಜ್ಯುಕೇಷನಲ್ ಇನ್ಸ್ಟಿಟ್ಯೂಶನ್ಸ  ವಿದ್ಯಾರ್ಥಿಗಳ ಕಲಿಕೆಗೆ ಮಹತ್ವದ ಅವಕಾಶ ನೀಡುತ್ತಿದ್ದು, ಸಂಸ್ಕಾರಯುಕ್ತ ಶಿಕ್ಷಣವನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಕೋಚಿಂಗ್ ಪಡೆದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿಶೇಷ ಸಾಧನೆಯನ್ನು ಮಾಡಲು ಉತ್ತಮ ಅವಕಾಶ ಇದೆ. ಇಲ್ಲಿನ ವಿಧ್ಯಾರ್ಥಿಗಳ  ಭವಿಷ್ಯ ಹಾಗೂ ಶೈಕ್ಷಣಿಕ ಸಾಧನೆಯಲ್ಲಿ ಹೆಚ್ಚಿನ ಪಾಲು ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜನದ್ದು. `ವಿದ್ಯಾರ್ಥಿಗಳ ವೈಯುಕ್ತಿಕ ಕಾಳಜಿಯೇ ಸಂಸ್ಥೆಯ ಸಂಸ್ಕೃತಿ’ ಎಂಬ ಧ್ಯೇಯಯೊಂದಿಗೆ ಈ ಅಕಾಡೆಮಿಯು ಕಾರ್ಯನಿರ್ವಹಿಸುತ್ತಿದೆ.

ಈ ಕಾಲೇಜಿನಲ್ಲಿ ಭೋಧಕ ಸಿಬ್ಬಂದಿಗಳು ಸ್ವತಃ IIT/NIT/M.Sc  ಪಧವೀಧರರಾಗಿದ್ದು, ವಿಜ್ಞಾನ ವಿಷಯಗಳಲ್ಲಿ ನುರಿತವರಿದ್ದಾರೆ.  ಸ್ಪರ್ಧಾತ್ಮಕ ಪರೀಕ್ಷೆಗಳಾದ JEE Mains/JEE Advanced/NEET/KVPY/KCET ಗಳಿಗೆ ಪ್ರಥಮ ಪಿಯುಸಿಯಿಂದಲೇ ತರಬೇತಿಯನ್ನು ನೀಡುತ್ತಾರೆ. ಈ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಒಟ್ಟು 49 ವಿದ್ಯಾರ್ಥಿಗಳಲ್ಲಿ ಕುಮಾರ ಪ್ರಣೀತ ಕಡ್ಲೆ ಹಾಗೂ ಕುಮಾರ ಎಚ್.ಎಮ್. ಶ್ರೀಮುಖ 600 ಕ್ಕೆ 600 ಅಂಕ, ಕುಮಾರಿ ಸುದಿತಿ ಕಾಮತ್ 99.83%, ಕುಮಾರಿ ಅನಿತಾ ಭಂಡಿವಾಡ 99.50% ಅಂಕಗಳನ್ನು ಪಡೆದಿದ್ದಾರೆ. 15 ಜನ ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು, 23 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಮತ್ತು 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸುದಿತಿ ಕಾಮತ್ , ಪ್ರಣೀತ ಕಡ್ಲೆ , ಅನಿತಾ ಭಂಡಿವಾಡ , ಎಚ್.ಎಮ್. ಶ್ರೀಮುಖ

ಪ್ರಸ್ತುತ ಸಾಲಿನಲ್ಲಿ ಇಲ್ಲಿ ಕೋಚಿಂಗ್ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿದ್ದು ಉಲ್ಲೇಖನೀಯ. 2021ನೇ ಸಾಲಿನಲ್ಲಿ JEE Mains   ಪರೀಕ್ಷೆಯಲ್ಲಿ ಶಶಾಂಕ ಡಿ.ಕೆ 97%, ಪ್ರಣೀತ ಕಡ್ಲೆ 95%, ಸುದೀಪ ನಾಯ್ಕ 90% ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಇದಲ್ಲದೆ ಆರ್ಕಿಟೆಕ್ಚರ್ ಪರೀಕ್ಷೆಗಳಾದ UCEED ನಲ್ಲಿ ಸುದಿತಿ ಕಾಮತ್ AIR 1060, ವೆಂಕಟೇಶ ಕಾಂಬ್ಲೆ AIR CAT 282  RANK  ಗಳಿಸಿದ್ದಾರೆ. ಹಾಗೂ JEE MAINS 2 (ARCHITECTURE ) ನಲ್ಲಿ ಸುದಿತಿ ಕಾಮತ್ 96.08%, ವೆಂಕಟೇಶ ಕಾಂಬ್ಲೆ 91% ಗಳಿಸಿ ಸಂಸ್ಥೆಯ ಕೀರ್ತಿಗೆ ಕಳಶಪ್ರಾಯರಾಗಿದ್ದಾರೆ. 2020ನೇ ಸಾಲಿನಲ್ಲಿ JEE Mains  ಪರೀಕ್ಷೆಯ ಮೂಲಕ ಕರಣ ದೊಡ್ಡಮನಿ NITK Rourekela  ಕಾಲೇಜಿಗೆ ಆಯ್ಕೆಯಾಗಿದ್ದು, NEET UG EXAMINATION  ಮೂಲಕ ಅಪೂರ್ವಾ ಹೂಗಾರ್ ಜೆ.ಎನ್.ಎಮ್.ಸಿ ಬೆಳಗಾವಿ ಮೆಡಿಕಲ್ ಕಾಲೇಜಿಗೆ ಹಾಗೂ ಕಾರ್ತಿಕ ಜಿ, ನವೋದಯ ರಾಯಚೂರು ಮೆಡಿಕಲ್ ಕಾಲೇಜಿಗೆ ಆಯ್ಕೆಯಾಗಿದ್ದು ಇದು ಅರ್ಜುನ್ ಕಾಲೇಜಿನ ಪ್ರಯತ್ನಕ್ಕೆ ಸಂದ ಫಲವಾಗಿದೆ.

ಕಾಲೇಜಿನ ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಬೋಧಕವರ್ಗ, ಪಾಲಕ-ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಸಂಕೇತವಾಗಿರುವ ಧಾರವಾಡದ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.

ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜು, ಧಾರವಾಡ, ಶ್ಯಾನಭಾಗ ಬಿಲ್ಡಿಂಗ್,     ಟೋಲ್ ನಾಕಾ ಸಮೀಪ, ಪಿ ಬಿ ರಸ್ತೆ, ಸರಸ್ವತೀಪುರ ಧಾರವಾಡ. Gmail: arjunpucdwd@gmail.com . ದೂರವಾಣಿ ಸಂಪರ್ಕ: 8310143601 , 9845845796, 8073371598

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/BrL0e7zB8Qo1yeFemCvdus

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading