11-8-2021. ಬುಧವಾರ.

E-ಯಲ್ಲಾಪುರ.
ನ್ಯುಮೋಕಾಕಲ್ ನ್ಯುಮೇನಿಯಾ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಲಸಿಕೆಯೊಂದನ್ನು ಪರಿಚಯಿಸಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರವು ಪಟ್ಟಣದ ಅಡಕೆ ಭವನದಲ್ಲಿ ನಡೆಯಿತು.

–ADVT–

ಈ ಕಾರ್ಯಾಗಾರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರದ್ ನಾಯಕ ಉಧ್ಘಾಟಿಸಿ ಮಾತನಾಡಿ, ಐದು ವರ್ಷದೊಳಗಿನ ಮಕ್ಕಳನ್ನು ಮಕ್ಕಳನ್ನು ನ್ಯುಮೋಕಾಕಲ್ ಖಾಯಿಲೆಯಿಂದ ರಕ್ಷಿಸಲು ಹಾಗೂ ಈ ರೋಗಾಣುವು ಸಮುದಾಯದಲ್ಲಿ ಹರಡುವುದನ್ನು ತಡೆಗಟ್ಟಲು ಈ ಲಸಿಕೆ ನೀಡಲಾಗುತ್ತಿದೆ ಎಂದರು.

–ADVT–

ಈ ಲಸಿಕೆಯ ಕುರಿತು ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ ರಮೇಶ ರಾವ್ ವಿವರಣೆ ನೀಡಿದರು. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಮಹಾಬಲೇಶ್ವರ ಹೆಗಡೆ, ಡಾ.ಅನ್ನಪೂರ್ಣಾ ವಸ್ತ್ರದ್ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ್,ಸಾಂಖ್ಯಕ ಅಧಿಕಾರಿ ರಾಘವೇಂದ್ರ ಹೆಗಡೆ ಉಪಸ್ಥಿತರಿದ್ದರು.

–ADVT–

ಯಲ್ಲಾಪುರ,ಶಿರಸಿ,ಸಿದ್ಧಾಪುರ,ಮುಂಡಗೋಡ,ಹಳಿಯಾಳ,ಜೋಯ್ಡಾ ತಾಲೂಕಿನ ಆರೋಗ್ಯಾಧಿಕಾರಿಗಳು,ವೈದ್ಯರು,ಆರೋಗ್ಯ ಶಿಕ್ಷಣಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಇದ್ದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಸೂರ್ಯನಾರಾಯಣ ಭಟ್ಟ ಸ್ವಾಗತಿಸಿ, ನಿರ್ವಹಿಸಿದರು.

–ADVT–

ಯಲ್ಲಾಪುರ ನಗರದ ಉದ್ಯಮನಗರದಲ್ಲಿ ನೂತನವಾಗಿ ನಿರ್ಮಿಸಲಾದ, ಸುಸಜ್ಜಿತ ಆರ್.ಸಿ.ಸಿ. ಮನೆ ಬಾಡಿಗೆಗೆ ಕೊಡುವುದಿದೆ. ( ಸಸ್ಯಾಹಾರಿಗಳಿಗೆ ಮಾತ್ರ )
ಸಂಪರ್ಕಿಸಿ ; ಫೋನ್ ನಂ ; 9481781038

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/BrL0e7zB8Qo1yeFemCvdus

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading