26-2-2022. ಶನಿವಾರ.
E-YELLAPUR.COM NEWS ಯಲ್ಲಾಪುರ.
ಬೆಳವಡಿ ಮಲ್ಲಮ್ಮ ಉತ್ಸವ-2022 ಅಂಗವಾಗಿ ಸಂಚರಿಸುತ್ತಿರುವ ಜ್ಯೋತಿ ಯಾತ್ರೆಯು ಶನಿವಾರ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ತಾಲೂಕಾ ಆಡಳಿತದ ಪರವಾಗಿ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಅವರು ಪೂಜೆ ಸಲ್ಲಿಸುವ ಮೂಲಕ ಜ್ಯೋತಿಯನ್ನು ಬರಮಾಡಿಕೊಂಡರು. ಗ್ರೇಡ್-2 ತಹಸೀಲ್ದಾರ್ ಸಿ.ಜಿ.ನಾಯ್ಕ ಹಾಗೂ ಸಿಬ್ಬಂದಿಗಳು ಇದ್ದರು.
ಕ್ಲಸ್ಟರ್ ಮಟ್ಟದ ಎಸ್.ಡಿ.ಎಂ.ಸಿ. ಅಧ್ಯಕ್ಷ-ಉಪಾಧ್ಯಕ್ಷರ ತರಬೇತಿ ಕಾರ್ಯಾಗಾರ.
E-YELLAPUR.COM NEWS ; ಪಟ್ಟಣದ ಮಾದರಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಸ್.ಡಿ.ಎಂ.ಸಿ. ಅಧ್ಯಕ್ಷ-ಉಪಾಧ್ಯಕ್ಷರ ತರಬೇತಿ ಕಾರ್ಯಾಗಾರವು ಶನಿವಾರ ನಡೆಯಿತು. ಈ ಕಾರ್ಯಾಗಾರವನ್ನು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ ಅವರು ಉಧ್ಘಾಟಿಸಿ ಮಾತನಾಡಿದರು. ಈ ಕಾರ್ಯಾಗಾರದಲ್ಲಿ ವಿವಿಧ ಶಾಲೆಗಳ ಎಸ್.ಡಿ.ಎಂ.ಸಿ. ಅಧ್ಯಕ್ಷ-ಉಪಾಧ್ಯಕ್ಷರು, ಶಿಕ್ಷಕರು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು. ಪ್ರಶಾಂತ ಜಿ. ಅಧ್ಯಕ್ಷತೆ ವಹಿಸಿದ್ದರು
ADVT
ಯಲ್ಲಾಪುರ. ಶಿಕ್ಷಕರಿಗಾಗಿ ಕಲಾ ಅಂತರ್ಗತ ವರ್ಚುಯಲ್ ಸಭೆ.
E-YELLAPUR.COM NEWS ; ಇಂಡಿಯಾ ಪೌಂಡೇಶನ್ ಫಾರ್ ದಿ ಆಟ್ರ್ಸ್ ಬೆಂಗಳೂರು ಇದರ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಆಯ್ದ ಶಿಕ್ಷಕರಿಗೆ ಕಲಾ ಅಂತರ್ಗತ ಕಲಿಕೆಯ ಕುರಿತು ವರ್ಚುವಲ್ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಐ.ಎಫ್.ಎ. ಪ್ರಮುಖರಾದ ಅರುಂಧತಿ ಘೋಷ್ ಅವರು ಮಾತನಾಡಿ, ಜಿಲ್ಲೆಯ, ಪರಿಸರ, ಸಂಸ್ಕೃತಿ, ಸಾಹಿತ್ಯದ ಕುರಿತು ಮಾತನಾಡಿದರು.
ಕಲಾ ವಿಭಾಗದ ಪ್ರಮುಖರಾದ ರಾಧಿಕಾ ಪಂಡಿತ್ ಐ.ಎಫ್.ಎ.ಯ ಉದ್ದೇಶ, ಕಲಾ ಅಂತರ್ಗತ ಕಲಿಕೆಯಲ್ಲಿ ಪಾತ್ರ, ನೀಡುತ್ತಿರುವ ಸಹಾಯದ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಿದರು
ಸಂಪನ್ಮೂಲ ವ್ಯಕ್ತಿಗಳಾಗಿ ಸುಬ್ಬುಲಕ್ಷ್ಮಿ ಮತ್ತು ಸಂತೋಷ ದಿಂಡಿಗೂರ ಭಾಗವಹಿಸಿ ತಮ್ಮ ಪ್ರೊಜೆಕ್ಟ್ ಬಗ್ಗೆ ಶಿಕ್ಷಕರಿಗೆ ತಿಳಿಸಿದರು.
ಶಿಕ್ಷಕರಾದ ನಾಗರಾಜ ಹುಡೆದ ಮತ್ತು ಗಂಗಾಧರ ಎಸ್‍ಎಲ್ ಕಾರ್ಯಕ್ರಮವನ್ನು ಸಂಘಟಿಸಿದ್ದರು.
ನಾಳೆ ಪಟ್ಟಣದ ತಾಲೂಕು ಆಸ್ಪತ್ರೆ ಆವಾರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಲಿದ್ದಾರೆ.
ಶನಿವಾರ ಯಲ್ಲಾಪುರ ತಾಲೂಕಿನಲ್ಲಿ ಯಾರಿಗೂ ಕೋವಿಡ್ ಸೋಂಕು ಧೃಢಪಟ್ಟಿಲ್ಲ. ತಾಲೂಕಿನಲ್ಲಿ 4 ಸಕ್ರೀಯ ಕೋವಿಡ್ ಪ್ರಕರಣಗಳು ಇವೆ
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ
FACEBOOK GROUP – https://www.facebook.com/groups/593852164946589/
group ಗೆ join ಆಗಿ.
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related