27-3-2022. ರವಿವಾರ.
ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.
ಕೋಲ್ಕತ್ತಾದ ರಾಮಕೃಷ್ಣ ಆಶ್ರಮದ ಬೇಲೂರು ಮಠದ ಅಕ್ಷಯಾನಂದ ಜೀಯವರು ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ದೇವಾಲಯದ ಆಡಳಿತ ಸಮಿತಿಯವರು ಅಕ್ಷಯಾನಂದ ಜೀಯವರನ್ನು ಸ್ವಾಗತಿಸಿ, ಗೌರವಿಸಿದರು.
ADVT
ಶಾರದಾಂಬಾ ದೇವಾಲಯದ ವರ್ಧಂತಿ ಉತ್ಸವದ ಪೂರ್ವಭಾವಿ ಸಭೆ.
ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ನಡೆಯಲಿರುವ ವಾರ್ಷಿಕ ವರ್ಧಂತಿ ಉತ್ಸವದ ನಿಮಿತ್ತ ಪೂರ್ವಭಾವಿ ಸಭೆಯು ದೇವಾಲಯದಲ್ಲಿ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ADVT
ವರ್ಧಂತಿ ಉತ್ಸವದ ತಯಾರಿ, ಧಾರ್ಮಿಕ ಕಾರ್ಯಕ್ರಮಗಳ ಸಿದ್ಧತೆ ಹಾಗೂ ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ದೇವಾಲಯದ ಆಡಳಿತ ಮಂಡಳಿಯ
ADVT
ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ, ಕಾರ್ಯದರ್ಶಿಗಳಾದ ನರಸಿಂಹ ಗೇರಗದ್ದೆ, ನಾಗೇಂದ್ರ ಕವಾಳೆ, ದೇವಾಲಯದ ವ್ಯವಸ್ಥಾಪಕ ಶಿವರಾಮ ಭಟ್ಟ, ಮಾತೃಮಂಡಳಿಯ ಅಧ್ಯಕ್ಷೆ ರಮಾ ದೀಕ್ಷಿತ, ಪಟ್ಟಣ ಪಂಚಾಯತಿ ಸದಸ್ಯ ಶ್ರೀನಿವಾಸ ಗಾಂವ್ಕಾರ್,
ADVT
ಪ್ರಮುಖರಾದ ಜಿ.ಎನ್.ಭಟ್ ತಟ್ಟಿಗದ್ದೆ, ವಿಶ್ವನಾಥ ಭಟ್ ಶೀರ್ಲೆ, ಶ್ರೀಪಾದ ಭಟ್ಟ, ಎಸ್.ವಿ.ಭಟ್ಟ ಹುಲಗಾನ, ಅರ್ಚಕ ಗೋಪಾಲಕೃಷ್ಣ ಭಟ್ಟ, ಡಿ.ಎನ್.ಹೆಗಡೆ, ಸಣ್ಣಪ್ಪ ಭಾಗ್ವತ್, ರಾಮಕೃಷ್ಣ ಭಟ್ಟ, ಕೃಷ್ಣಮೂರ್ತಿ ಹೆಗಡೆ, ಮಾಚಣ್ಣಾ ಗವೇಗುಳಿ, ರವಿ ಭಟ್ಟ, ಗಂಗಾ ಭಟ್ಟ, ಆಶಾ ಬಗನಗದ್ದೆ, ಪ್ರಭಾ ಹೆಗಡೆ, ಹಾಗೂ ಮಾತೃಮಂಡಳಿಯ ಪ್ರಮುಖರು, ಸಾರ್ವಜನಿಕರು, ಗ್ರಾಮಸ್ಥರು ಇದ್ದರು.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related