27-3-2022. ರವಿವಾರ.

ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.

ತಾಲೂಕಿನ ಹೊನ್ನಗದ್ದೆಯ ವೀರಭದ್ರ ದೇವರ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ರವಿವಾರ ಸಂಜೆ ಡಾ.ವಿದ್ಯಾಭೂಷಣ ಅವರು ದಾಸ ಸಾಹಿತ್ಯದ ಪದಗಳನ್ನು ಸುಶ್ರಾವ್ಯವಾಗಿ ಹಾಡಿ ನೆರೆದ ಭಕ್ತರನ್ನು ಮಂತ್ರಮುಗ್ಧ ಗೊಳಿಸಿದರು.

ADVT

ಡಾ.ವಿದ್ಯಾಭೂಷಣರು ಪ್ರಸ್ತುತಪಡಿಸಿದ ಪಾಲಿಸೋ ಪಾರ್ವತಿ ರಮಣ, ಕಂಡೆ ಕರುಣಾ ನಿಧಿಯಾ , ಹೂವ ತರುವರ ಮನೆಗೆ ಹುಲ್ಲ ತರುವ, ಅವ್ವೆ ಲಕುಮಿ ರಮಣ, ಇವಗಿಲ್ಲಾ ಗರ್ವ,

ADVT

ಒಂದು ದಳ ಶ್ರೀತುಳಸಿ ಗಂಧ ಪುಷ್ಪವ ತಂದು ಇಂದಿರಾಕಾಂತನಿಗೆ ಅರ್ಪಿಸಿದೆನು ಮುಂತಾದ ಭಕ್ತಿ ಸಂಗೀತ ಕೇಳುಗರನ್ನು ರಂಜಿಸಿದವು. ತಬಲಾ ಸಾಥ್ ನಲ್ಲಿ ಪ್ರವೀಣ, ಗೀಟಾರಿನಲ್ಲಿ ಅರುಣ ಸಹಕರಿಸಿದರು.

ADVT

ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ದೇವಾಲಯ.

ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ಹೊನ್ನಗದ್ದೆಯ ವೀರಭದ್ರ ದೇವಾಲಯಕ್ಕೆ ಆಕರ್ಷಕ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಇದು ನೋಡುಗರ ಕಣ್ಮನ ಸೆಳೆಯುತ್ತಿದೆ.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading