
3-5-2022. ಮಂಗಳವಾರ.

E-YELLAPUR.COM NEWS ಬೆಂಗಳೂರು.
ಶ್ರೀಅಖಿಲ ಹವ್ಯಕ ಮಹಾಸಭಾದ ಸಂಸ್ಥಾಪನೋತ್ಸವ ಹಾಗೂ ವಿವಿಧ ಪ್ರಶಸ್ತಿ,ಪುರಸ್ಕಾರ ಪ್ರದಾನ ಸಮಾರಂಭವು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಹವ್ಯಕ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಹವ್ಯಕ ಮಹಾಸಭಾ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದಾಗಿದ್ದು,ಸಮಾಜದಲ್ಲಿ ಧನಾತ್ಮಕ ಪರಿಣಾಮ ಉಂಟಾಗಲಿ, ಎಲ್ಲರಿಗೂ ಪ್ರೇರಣೆಯಾಗಲಿ ಎಂಬ ಸದುದ್ದೇಶದಿಂದ ಸಾಧಕರಿಗೆ ಹವ್ಯಕ ವಿಭೂಷಣ, ಹವ್ಯಕ ಭೂಷಣ, ಹವ್ಯಕ ಶ್ರೀ ಹಾಗೂ ಹವ್ಯಕ ಸೇವಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದರು.

ADVT

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಮಾತನಾಡಿ, ಬ್ರಾಹ್ಮಣ ಸಮಾಜ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಈ ಸಮಾಜದ ಎಲ್ಲರೂ ಒಗ್ಗಟ್ಟಾಗಬೇಕಿದೆ. ಬ್ರಾಹ್ಮಣ ಸಮಾಜದ ಉಪಜಾತಿಗಳಲ್ಲಿನ ಬೇಧಗಳನ್ನು ಬದಿಗೊತ್ತಿ ನಾವೆಲ್ಲ ಬ್ರಾಹ್ಮಣರು ಒಂದಾಗ ಬೇಕಿದೆ ಎಂದರು. ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಮಾತನಾಡಿ, ಹಠಬಿಡದೇ ಋಷಿಗಳಂತೆ ಹವ್ಯಕರು ನಿರಂತರ ಪ್ರಯತ್ನ,ಶ್ರಮ ಹಾಗೂ ಶ್ರದ್ಧೆಯಿಂದ ವಿವಿಧಕ್ಷೇತ್ರಗಳಲ್ಲಿ ಸಾಧನೆಗೈದು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಈ ಸಭೆಯಲ್ಲಿ ಪುರಸ್ಕೃತರಾದ ಯಲ್ಲಾಪುರ ತಾಲೂಕಿನ ಹೆಮ್ಮೆಯ ಸಾಧಕರು ;
ಪವಿತ್ರಮಾತಾ ಭಟ್ ತಟ್ಟಿಗದ್ದೆ, ನಾಗರಾಜ ಭಟ್ ಮಲವಳ್ಳಿ, ಮಹೇಶ ಭಟ್, ಸಾನ್ವಿ ಜೋಷಿ.

ಹವ್ಯಕ ವಿಭೂಷಣ, ಹವ್ಯಕ ಭೂಷಣ, ಹವ್ಯಕ ಶ್ರೀ ಹಾಗೂ ಹವ್ಯಕ ಸೇವಾಶ್ರೀ ಪ್ರಶಸ್ತಿಯನ್ನು ಆಯ್ಕೆಯಾದ ಸಾಧಕರಿಗೆ ನೀಡಿ ಗೌರವಿಸಲಾಯಿತು.ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ಪಲ್ಲವಪುರಸ್ಕಾರ ನೀಡಿ ಗೌರವಿಸಲಾಯಿತು.ಪ್ರಶಸ್ತಿ ಪುರಸ್ಕೃತರಾದ ಡಾ.ಗಜಾನನ ಶರ್ಮ, ಬಳ್ಳೂರು ಕೃಷ್ಣ ಯಾಜಿ, ನಾರಾಯಣ ದಾಸರು, ಡಾ.ಉದಯಕುಮಾರ್, ಅಶ್ವಿನಿಕುಮಾರ್ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು.
ADVT


ಮೋಹನ ಭಾಸ್ಕರ ಹೆಗಡೆ ಹಾಗೂ ರಾಜಗೋಪಾಲ್ ಜೋಷಿ ಕಾರ್ಯಕ್ರಮವನ್ನು ನಿರ್ವಹಿಸಿದರು. ನಾರಾಯಣ ಭಟ್ ಹುಳೆಗಾರು ಹಾಗೂ ಸಂದೇಶ ತಲಕಾಲಕೊಪ್ಪ ಪ್ರಶಸ್ತಿ ಪತ್ರವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಸಭಾದ ಉಪಾಧ್ಯಕ್ಷ ಆರ್ ಎಂ ಹೆಗಡೆ, ಶ್ರೀಧರ ಜೆ ಭಟ್ಟ ಕೆಕ್ಕಾರು, ನಿರ್ದೆಶಕರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಪ್ರಶಾಂತ ಹೆಗಡೆ ಸಂಕಲ್ಪ ಕಾರ್ಯದರ್ಶಿಗಳಾದ ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕಾರ್ಯಕ್ರಮದ ಸಂಚಾಲಕರಾದ ರವಿನಾರಾಯಣ ಪಟ್ಟಾಜೆ, ಮುಗಲೋಡಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಪ್ರಕಾಶ ಹೆಗಡೆ ಕಲ್ಲಾರೆಮನೆ ಹಾಗೂ ಬಳಗದಿಂದ ‘ವೇಣು ನಿನಾದ’ ಕಾರ್ಯಕ್ರಮ ಜನಮನರಂಜಿಸಿತು. ಸಭೆಗೆ ಆಗಮಿಸಿದವರಿಗೆ ರುಚಿಕರವಾದ, ಅಪ್ಪಟ ಹವ್ಯಕ ಶೈಲಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಪ್ರಶಸ್ತಿ ಪುರಸ್ಕೃತರು;
ಹವ್ಯಕ ವಿಭೂಷಣ ; ಡಾ.ಗಜಾನನ ಶರ್ಮ- ಶಿವಮೊಗ್ಗಾ-ಸಾಹಿತ್ಯ.
ಹವ್ಯಕ ಭೂಷಣ-ಉದಯಕುಮಾರ ನೂಜಿ-ಕಾಸರಗೋಡು.
ಹವ್ಯಕ ಭೂಷಣ – ಬಳ್ಳೂರು ಕೃಷ್ಣ ಯಾಜಿ – ಉ.ಕ.- ಯಕ್ಷಗಾನ
ಹವ್ಯಕ ಭೂಷಣ – ನಾರಾಯಣ ದಾಸರು – ಉ. ಕ. – ಹರಿಕಥೆ
ಹವ್ಯಕ ಶ್ರೀ – ಅಶ್ವಿನೀ ಭಟ್ – ದ. ಕ. – ಕ್ರೀಡೆ
ಹವ್ಯಕ ಶ್ರೀ – ರಾಜಾರಾಮ ಸಿ. ಜಿ. – ದ. ಕ. – ಕೃಷಿ ಉದ್ಯಮ
ಹವ್ಯಕ ಶ್ರೀ – ಅಶ್ವಿನಿಕುಮಾರ್ ಭಟ್ – ಉ. ಕ. – ಪರಿಸರ
ಹವ್ಯಕ ಸೇವಾಶ್ರೀ – ತ್ರಿಯಂಬಕ ಗಣೇಶ ಹೆಗಡೆ

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/





