19-5-2022. ಗುರುವಾರ.

E-YELLAPUR.COM NEWS ಯಲ್ಲಾಪುರ.

ಗೋಮಾಂತಕ ಫೆಡರೇಶನ್ ಗೆ ಉತ್ತರ ಕನ್ನಡ ಜಿಲ್ಲೆಯ ಸಂಚಾಲಕರಾಗಿ ಉತ್ತರ ಕನ್ನಡದಿಂದ ಯಲ್ಲಾಪುರ ಗೋಮಾಂತಕ ಸಮಾಜದ ಅಧ್ಯಕ್ಷ ನಾಗೇಶ ಯಲ್ಲಾಪುರಕರ, ಅಂಕೋಲಾದ ದಿನಕರ ಅಂಕೋಲೆಕರ ಹಾಗೂ ಕಾರವಾರದ ಸಂಜಯ ಬಾಡಕರ ಇವರನ್ನು ಆಯ್ಕೆ ಮಾಡಲಾಗಿದೆ.

ADVT

ಕರ್ನಾಟಕ ರಾಜ್ಯದ ಸಂಚಾಲಕರಾಗಿ ಹುಬ್ಬಳ್ಳಿಯ ನರೇಂದ್ರ ನಾಯ್ಕ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಗೋವಾದ ಪಣಜಿಯ ಶ್ರೀ ದಯಾನಂದ ಸ್ಮøತಿ ಸಭಾ ಭವನದಲ್ಲಿ ನಡೆದ ಗೋಮಾಂತಕ ಮರಾಠಾ ಸಮಾಜದ ಕರ್ನಾಟಕ,ಗೋವಾ,ಮಹಾರಾಷ್ಟ್ರ ರಾಜ್ಯದ ಪ್ರಮುಖರ ಸಮ್ಮೇಳನದಲ್ಲಿ ಈ ಆಯ್ಕೆ ನಡೆಯಿತು.

ADVT

ಸಮಾಜದ ಗೋವಾದ ರಾಜ್ಯಾಧ್ಯಕ್ಷರಾದ ಆನಂದ ವಾಗುರಮೇಕರ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಸಮಾಜದ ಚಟುವಟಿಕೆಗಳನ್ನು ಚುರುಕುಗೂಳಿಸಲು ಮತ್ತು ಸಂಘಟಿಸಲು ರಾಷ್ಟ್ರಮಟ್ಟದ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಿ,

ADVT

ಸಮಾಜದ ಸಂಘಟನೆಯನ್ನು ಬಲಗೊಳಿಸಲು ಕರ್ನಾಟಕ ಗೋವಾ ಮಹಾರಾಷ್ಟ್ರ ಮೂರು ರಾಜ್ಯಗಳ ಗೋಮಾಂತಕ ಫೆಡರೇಶನ್ ಅನ್ನು ಸ್ಥಾಪಿಸಲಾಯಿತು.

ADVT

ಸಮ್ಮೇಳನದಲ್ಲಿ ಜಿಲ್ಲೆಯ ಸಮಾಜದ ಪ್ರಮುಖರಾದ ಹೇಮಂತ ದುರಂಧರ, ರಾಮದಾಸ ಕುಮಟಾಕರ, ಕೃಷ್ಣಾನಂದ ಬಾಂದೇಕರ, ಮಾಧವ ಕಡವಾಡಕರ ನಾಗರಾಜ ಗಡಕರ ಮಹೇಶ ತೋಡೂರಕರ, ಬಾಬು ಬಾಂದೇಕರ, ಶ್ರೀಧರ ಮುರಡೇಶ್ವರ, ನಾಗೇಂದ್ರ ಬಾನಾವಳಿ ಮುಂತಾದವರು ಭಾಗವಹಿಸಿದ್ದರು.

ADVT

ತಾಂತ್ರಿಕ ಶಿಕ್ಷಣದಲ್ಲಿ ಎಮ್. ಇ. ಎಸ್. ಆರ್. ಎನ್. ಶೆಟ್ಟಿ, ಪಾಲೆಟೆಕ್ನಿಕ್ ವಿದ್ಯಾರ್ಥಿಗಳ ಸಾಧನೆ.

ಶಿರಸಿಯ ಪ್ರತಿಷ್ಠಿತ ಸಂಸ್ಥೆಯಾದ ಎಮ್. ಇ. ಎಸ್. ಆರ್. ಎನ್. ಶೆಟ್ಟಿ, ಪಾಲೆಟೆಕ್ನಿಕ್‍ನ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗದ 5ನೇ ಸೆಮೆಸ್ಟರ್‍ನ ವಿದ್ಯಾರ್ಥಿಯಾದ ಸೈಯದ್ ಇಬ್ರಾಹಿಂ

ADVT

ಪವರ್ ಇಲೆಕ್ಟ್ರಾನಿಕ್ಸ್ ‘ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು , ಅಮೋಘ ಸಾಧನೆ ಮಾಡಿದ್ದಾನೆ. 4ನೇ ಸೆಮೆಸ್ಟರ್‍ನ ಡಿಜಿಟಲ್ ಇಲೆಕ್ಟ್ರಾನಿಕ್ಸ್ ವಿಷಯದಲ್ಲಿಯೂ ಈ ವಿದ್ಯಾರ್ಥಿ ಸಾಧನೆ ಮಾಡಿದ್ದು, ಅನಲಾಗ್ ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಇನ್ನೋರ್ವ ವಿದ್ಯಾರ್ಥಿ ದರ್ಶನ ದೇಶಭಂಡಾರಿ 100ಕ್ಕೆ 100 ಅಂಕ ಪಡೆದು ಸಾಧನೆ

ADVT

ಮಾಡಿದ್ದಾನೆ. ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯವರು , ಪ್ರಾಂಶುಪಾಲರು ಹಾಗು ಸಂಸ್ಥೆಯ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading