19-5-2022. ಗುರುವಾರ.
E-YELLAPUR.COM NEWS ಯಲ್ಲಾಪುರ
ಗುರುವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆ ಶೇ97.30% ಫಲಿತಾಂಶವನ್ನು ದಾಖಲಿಸಿದೆ.
ADVT
ಪರೀಕ್ಷೆಗೆ ಹಾಜರಾದ ಈ ಶಾಲೆಯ ಒಟ್ಟೂ 36ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 01ವಿದ್ಯಾರ್ಥಿ ದ್ವಿತೀಯ ಶ್ರೇಣಿಯನ್ನು ಪಡೆದಿದ್ದಾರೆ.
ADVT
616 ಅಂಕ ಪಡೆದ ಈ ಶಾಲೆಯ ವಿದ್ಯಾರ್ಥಿ ವೀರೇಂದ್ರ ಪಾಟೀಲ್(ಶೇ.98.56%), 612 ಅಂಕ ಪಡೆದ ನಮೃತ ಎಂ ಜಿ (ಶೇ. 97.92%), 611 ಅಂಕ ಪಡೆದ ಲಕ್ಷ್ಮಿ ಖಾನಗೌಡ (ಶೇ. 97.76%), 608 ಅಂಕ ಪಡೆದ
ADVT
ಅಚ್ಯುತ್ ಹೆಗಡೆ ಲಿಂಗದಬೈಲ್ (ಶೇ.97.28%), 602 ಅಂಕ ಪಡೆದ ಶರಣಪ್ಪ ಅವರಾದಿ (ಶೇ. 96.32%)ಅನುಕ್ರಮವಾಗಿ ಮೊದಲ 5 ಸ್ಥಾನವನ್ನು ಗಳಿಸಿದ್ದಾರೆ.
ADVT
ಈ ಮೂಲಕ ಶಾಲೆಯ ಶ್ರೇಯಸ್ಸನ್ನು ಹೆಚ್ಚಿಸಿದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಶುಭಕೋರಿ ಸಂತಸ ವ್ಯಕ್ತಪಡಿಸಿದ್ದಾರೆ.
ADVT
ರಾಜ್ಯಕ್ಕೆ 6 ನೇ ರ‍್ಯಾಂಕ್ ಪಡೆದ ವಾಣಿ ಭಟ್ಟ.
ಯಲ್ಲಾಪುರ ತಾಲೂಕಿನ ಕಳಚೆ ಕುಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿ ವಾಣಿ ಗಜಾನನ ಭಟ್ಟ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಆರನೇ ರ‍್ಯಾಂಕ್ ಬರುವ ಮೂಲಕ
ADVT
ಕನ್ನಡ ಮಾಧ್ಯಮವನ್ನೇ ಆಯ್ಕೆ ಮಾಡಿಕೊಂಡು, ಗ್ರಾಮೀಣ ಭಾಗದ ಮಾದರಿ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದಾಳೆ. ಕನ್ನಡ ಭಾಷೆಗೆ 125,ಇಂಗ್ಲೀಷ್ ಭಾಷೆಗೆ 99 ,ಹಿಂದಿ ಭಾಷೆಗೆ 100 ,ಗಣಿತ ವಿಷಯಕ್ಕೆ96,
ವಿಜ್ಞಾನ ವಿಷಯಕ್ಕೆ100, ಸಮಾಜ ವಿಜ್ಞಾನ ಕ್ಕೆ 100 ಗಳಿಸುವ ಮೂಲಕ ಕಳಚೆ ಸರ್ಕಾರಿ ಪ್ರೌಢಶಾಲೆಗೆ ಕೀರ್ತಿ ತಂದಿದ್ದಾಳೆ.
ADVT
ಕಳೆದ ಮಳೆಗಾಲದ ಅತಿವೃಷ್ಠಿಯಿಂದ ಕಳಚೆ ಗ್ರಾಮವು ಗುಡ್ಡ ಕುಸಿತವಾಗಿ ತಿಂಗಳುಗಟ್ಟಲೆಗಳ ಕಾಲ ಪ್ರೌಢಶಾಲೆಯು ಸ್ಥಗಿತವಾದರೂ ಎದೆಗುಂದದೇ ಆನ್ ಲೈನ್ ಕ್ಲಾಸನಲ್ಲಿ ಪರಿಶ್ರಮ ಪಟ್ಟು ಓದಿದ ಪರಿಣಾಮ ಈ ಫಲಿತಾಂಶ ನನಗೆ ಒಲಿದಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ ವಾಣಿ. ಈಕೆಯ ಸಾಧನೆಗೆ ಅಭಿನಂದನೆ ವ್ಯಕ್ತವಾಗಿದೆ.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related