
1-7-2022. ಶುಕ್ರವಾರ.

ಜೀವನದಲ್ಲಿ ನಾವು ಆಗಾಗ ನಮ್ಮ ಜೀವನಪಥವನ್ನು ಹಿಂದಿರುಗಿ ನೋಡಬೇಕು. ಹಿಂದಿರುಗಿ ನೋಡುವುದರಿಂದ ಮುಂದಿನ ದಾರಿಯಲ್ಲಿ ಸರಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಸೇವಾ ನಿಋತ್ತಿಹೊಂದಿದ ಯಲ್ಲಾಪುರ ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ಕಿರಿಯ ಇಂಜನೀಯರ್ ಅಬ್ದುಲ್ ಅಜೀಜ್ ಹೇಳಿದರು. ತಮ್ಮ ಸುಮಾರು ನಲವತ್ತು ವರ್ಷಗಳ ಸುದೀರ್ಘ ಸರಕಾರಿ ವೃತ್ತಿಯಿಂದ, ಪ್ರಸ್ತುತ ಪಂಚಾಯತ್ ರಾಜ್ ಉಪ ವಿಭಾಗ ಯಲ್ಲಾಪುರದಲ್ಲಿ ಕಿರಿಯ ಇಂಜಿನಿಯರ್ ಆಗಿ ವೃತ್ತಿಯಿಂದ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಾ ಸಿವಿಲ್ ಗುತ್ತಿಗೆದಾರರ ಸಂಘದಿಂದ ಸನ್ಮಾನ ಸ್ವೀಕರಿಸಿ, ಬೀಳಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಶೋಕ ಬಂಟ್, ಗುತ್ತಿಗೆದಾರ ಕುಪ್ಪಯ್ಯ ಪೂಜಾರಿ, ಯಲ್ಲಾಪುರ ಸಿವಿಲ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ನಾಗರಾಜ ಗೊಂದಳಿ, ಖಜಾಂಚಿ ವಿನಯ ಹೆಗಡೆ, ಗುತ್ತಿಗೆ ದಾರರಾದ ಎಸ್.ವಿ.ಭಟ್ಟ, ಸಂತೋಷ ನಾಯ್ಕ, ಮೊದಲಾದವರು ವೇದಿಕೆಯಲ್ಲಿ ಇದ್ದರು.
ಸುಬ್ರಹ್ಮಣ್ಯ ಎಂ.ಭಟ್ಟ ಸ್ವಾಗತಿಸಿ,ಮಂಜುನಾಥ ಮೊಗೇರ ಪ್ರಾಸ್ತಾವಿಕ ಮಾತನಾಡಿ, ರಾಘವೇಂದ್ರ ಮೊಗೇರ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆ ಸಲ್ಲಿಸಿದರು.


ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/





