4-8-2022. ಗುರುವಾರ.

ಪ್ರಸಕ್ತ ಸಾಲಿನ ವಲಯ ಮಟ್ಟದ ಶೈಕ್ಷಣಿಕ ಕ್ರೀಡಾಕೂಟದಲ್ಲಿ ಯಲ್ಲಾಪುರ ತಾಲೂಕಿನ ಇಡಗುಂದಿಯ ಸ್ನೇಹಸಾಗರ ಶಾಲೆಯು ಕ್ರೀಡಾರಂಗದಲ್ಲಿ ಉತ್ಕೃಷ್ಟ ಸಾಧನೆಯನ್ನು ಮಾಡುವುದರ ಮೂಲಕ ಸಮಗ್ರ ವೀರಾಗ್ರಣಿ ಸ್ಥಾನವನ್ನು ಪಡೆದುಕೊಂಡಿದೆ. ಶೈಕ್ಷಣಿಕ ವರ್ಷದ ಇಡಗುಂದಿ ವಲಯದ 7 ಪ್ರೌಡಶಾಲಾ ವಿಭಾಗದ ಕ್ರೀಡಾಕೂಟವು ತಾಲೂಕಿನ ಮಲವಳ್ಳಿಯಲ್ಲಿ ಜರುಗಿತು. ಅಥ್ಲೇಟಿಕ್ ಮತ್ತು ಇತರೆ ವಿಭಾಗದ ಕ್ರೀಡೆಗಳಲ್ಲಿ ಸುಮಾರು30 ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಪ್ರಮುಖ ಸುದ್ದಿಗಳ ವಿಡಿಯೋ ವೀಕ್ಷಿಸಲು ಕೆಳಗಿನ E-YELLAPUR DIGITAL NEWS YOTUBE ಲಿಂಕ್ ಅನ್ನು ಕ್ಲಿಕ್ ಮಾಡಿ. SUBSCRIBE ಮಾಡಿ.

https://youtube.com/channel/UCl9HLpwN7rGV0dyzYruwkFw

ಈ ಶಾಲೆಯ ವಿದ್ಯಾರ್ಥಿಗಳು ಸಾಮೂಹಿಕ ವಿಭಾಗಗಳಾದ ಬಾಲಕರ ಥ್ರೋ ಬಾಲ್, ಕೋಕೋ, ರೀಲೆ, ಯೋಗಸ್ಪರ್ಧೆಗಳಲ್ಲಿ, ಹಾಗೂ ಅಥ್ಲೇಟಿಕ್ ವಿಭಾಗಗಳಾದ ವಾಕ್, ಹರ್ಡಲ್ಸ್, ತ್ರಿಬಲ್ ಜಂಪ್, ನೂರು ಮೀಟರ್ ರಿಲೇ, ಮೂರು ಸಾವಿರ ಮೀಟರ್ ರೀಲೆ, ಗುಂಡು, ಸುತ್ತಿಗೆ ಎಸೆತದಂತಹ ಎಲ್ಲಾ ಕ್ರೀಡಾ ಚಟುವಟಟಿಕೆಗಳಲ್ಲಿ ಭಾಗವಹಿಸಿ ಪ್ರಥಮ ದ್ವೀತಿ, ತೃತಿಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

ಈ ಶಾಲೆಯ ವಿದ್ಯಾರ್ಥಿ ನಿಖಿಲ್ ಆಯ್ದ ವಿಭಾಗಗಳಲ್ಲಿ ಭಾಗವಹಿಸಿ 154 ಅಂಕಗಳನ್ನು ಪಡೆದು ಸಮಗ್ರ ವೀರಾಗ್ರಣೀ ಸಾಧನೆ ಮಾಡಿದ್ದಾರೆ. ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ಕೃಷ್ಟ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ ಹಾಗೂ ಮುಖ್ಯಾಧ್ಯಾಪಕರು, ಶಿಕ್ಷಕರು, ಶಿಕ್ಷಕೇತರವರ್ಗ, ವಿದ್ಯಾರ್ಥಿ ಸಮೂಹದವರು ಶುಭಕೋರಿ ಅಭಿನಂದಿಸಿದ್ದಾರೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://w

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading