4-8-2022. ಗುರುವಾರ.

ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಪಲ್ಟಿ.

ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿ ಯಲ್ಲಾಪುರ ತಾಲೂಕಿನ ಅರಬೈಲ್ ಮಾರುತಿ ದೇವಾಲಯದ ಸಮೀಪ, ರಾಷ್ಟ್ರೀಯ ಹೆದ್ದಾರಿ63ರಲ್ಲಿ ಗುರುವಾರ ಪಲ್ಟಿಯಾಗಿದೆ. ಲಾರಿಯಲ್ಲಿ ಸಾಗಿಸುತ್ತಿದ್ದ ಕಲ್ಲಿದ್ದಲು ಹೆದ್ದಾರಿಯಲ್ಲಿ ಬಿದ್ದಿದೆ. ಲಾರಿ ಜಕಂಗೊಂಡಿದೆ.

ಪತಂಜಲಿ ಯೋಗ ಸಮಿತಿಯಿಂದ ಜಡಿ-ಬೂಟಿ ದಿನಾಚರಣೆ.

ಯಲ್ಲಾಪುರ ಪತಂಜಲಿ ಯೋಗ ಸಮಿತಿ ವತಿಯಿಂದ ವಿವಿಧ ಗಿಡಗಳನ್ನು ನೆಡುವ ಹಾಗೂ ಔಷಧಿ ಸಸ್ಯಗಳ ವಿತರಣೆ ಕಾರ್ಯಕ್ರಮವು ಎಪಿಎಂಸಿ ಆವಾರದ ಅಡಕೆ ಭವನದಲ್ಲಿ ಗುರುವಾರ ನಡೆಯಿತು. ಪತಂಜಲಿಯ ಜಿಲ್ಲಾ ಸಮಿತಿ ಸದಸ್ಯ ಜಿ.ಎಸ್ ಭಟ್ ಹಳವಳ್ಳಿ, ತಾಲೂಕಾ ಅಧ್ಯಕ್ಷ ವಿ.ಕೆ. ಭಟ್ಟ, ಸಮಿತಿಯ ಆರ್. ವಿ. ಹೆಗಡೆ, ಜಿಲ್ಲಾ ಯುವ ಪ್ರಭಾರಿ, ಶಿಕ್ಷಕ ದಿವಾಕರ ಮರಾಠಿ, ಕನಕಪ್ಪ, ಸುಬ್ರಾಯ ಭಟ್ಟ, ನಾಗೇಶ ರಾಯ್ಕರ್, ಸತೀಶ್ ಹೆಗಡೆ, ಗಂಗಾ ವಿ ಭಟ್ಟ, ಕಾವೇರಿ ಹೆಗಡೆ, ವೀಣಾ ರಾಯ್ಕರ್ ಮುಂತಾದವರಿದ್ದರು.

ಪ್ರಮುಖ ಸುದ್ದಿಗಳ ವಿಡಿಯೋ ವೀಕ್ಷಿಸಲು ಕೆಳಗಿನ E-YELLAPUR DIGITAL NEWS YOTUBE ಲಿಂಕ್ ಅನ್ನು ಕ್ಲಿಕ್ ಮಾಡಿ. SUBSCRIBE ಮಾಡಿ.

https://youtube.com/channel/UCl9HLpwN7rGV0dyzYruwkFw

ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ಹಾನಿ.

ಮಳೆ ಹಾಗೂ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಮುರಿದ ಘಟನೆ ಯಲ್ಲಾಪುರ ಪಟ್ಟಣದ ಜಮೇನಜಡ್ಡಿಯಲ್ಲಿ ನಡೆದಿದೆ.

ಮೋಹರಂ ಶಾಂತಿ ಸಭೆ.

ಯಲ್ಲಾಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಮೊಹರಂ ಶಾಂತಿ ಸಭೆ ನಡೆಯಿತು. ಸಿಪಿಐ ಸುರೇಶ ಯಳ್ಳೂರು ವಿವಿಧ ಸಲಹೆ-ಸೂಚನೆಗಳನ್ನು ನೀಡಿದರು.

ನಾಳೆ ಜೀವರಕ್ಷಣಾ ಕೌಶಲ್ಯ ತರಬೇತಿ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶೌರ್ಯ ವಿಪತ್ತು ನಿರ್ವಹಣಾ ಸಂಯೋಜಕರು ಮತ್ತು ಸ್ವಯಂ ಸೇವಕರಿಗೆ ಜೀವರಕ್ಷಣಾ ಕೌಶಲ್ಯ ತರಬೇತಿಯು ಶುಕ್ರವಾರ ಅಡಕೆಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ತಿಳಿಸಿದ್ದಾರೆ.

ಶನಿವಾರ ವಿದ್ಯುತ್ ಅದಾಲತ್.

ಯಲ್ಲಾಪುರ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಆ.6 ಶನಿವಾರದಂದು ವಿದ್ಯುತ್ ಅದಾಲತ್ ನಡೆಯಲಿದೆ. ವಿದ್ಯುತ್ ಗ್ರಾಹಕರು ವಿವಿಧ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೋರಲಾಗಿದೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP –

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading