advt


12-8-2022. ಶುಕ್ರವಾರ.


ಮಕ್ಕಳು ಮೊಬೈಲ್ ನಿಂದ ಆದಷ್ಟು ದೂರವಿರಬೇಕು. ಲೈಬ್ರರಿಗೆ ಬಂದು ಪುಸ್ತಕದ ಪುಟಗಳನ್ನು ತೆರೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಹಿರಿಯರೂ ತಮ್ಮ ಮಕ್ಕಳೊಂದಿಗೆ ಲೈಬ್ರರಿಗೆ ಬಂದು ಇಷ್ಟವಾದ ಪುಸ್ತಕಗಳನ್ನು ಓದುವುದರೊಂದಿಗೆ ಮಕ್ಕಳಿಗೂ ಓದುವುದನ್ನು ಕಲಿಸಿದರೆ ಶ್ರೇಷ್ಠವಾದ ಜ್ಞಾನವನ್ನು ಪಡೆಯಬಹುದು ಎಂದು ಉಮ್ಮಚಗಿ ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ ಹೇಳಿದರು.
advt

ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಗ್ರಂಥಾಲಯ ಕಾರವಾರ, ಗ್ರಾಮ ಪಂಚಾಯತ ಉಮ್ಮಚ್ಗಿ ಇವುಗಳ ಸಹಯೋಗದಲ್ಲಿ ಉಮ್ಮಚ್ಗಿ ಗ್ರಂಥಾಲಯದಲ್ಲಿ ಆಯೋಜಿಸಲಾಗಿದ್ದ ಗ್ರಾ.ಪಂ.ವ್ಯಾಪ್ತಿಯ ಪ್ರೌಢ ಮತ್ತು ಕನ್ನಡ ಶಾಲಾ ಮಕ್ಕಳ ಚೆಸ್ ಪಂದ್ಯಾವಳಿಯ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮ್ಮಚಗಿ ಗ್ರಾ.ಪಂ.ಅಧ್ಯಕ್ಷೆ ರೂಪಾ ಪೂಜಾರಿ ವಹಿಸಿದ್ದರು.

ವೇದಿಕೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕಿ ಕವಿತಾ ಕೆ.ಪೂಜಾರಿ, ಗ್ರಾ.ಪಂ. ಉಪಾಧ್ಯಕ್ಷ ಶಿವರಾಯ ಪೂಜಾರಿ, ಸದಸ್ಯರುಗಳಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ, ತಿಮ್ಮವ್ವ ಬಸಾಪುರ, ಲಲಿತಾ ವಾಲೀಕಾರ, ಸರಸ್ವತಿ ಪಟಗಾರ ಮೊದಲಾದವರು ಇದ್ದರು.
ಪಿ.ಡಿ.ಒ. ಗೋವಿಂದ ಜಿ.ಶೆಟ್ಟಿ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ನಂತರ ನಡೆದ ಚೆಸ್ ಪಂದ್ಯಾವಳಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಪ್ರೌಢ ಮತ್ತು ಹಿರಿ,ಕಿರಿಯ ಪ್ರಾಥಮಿಕ ಶಾಲೆಗಳಿಂದ ಇಪ್ಪತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರೌಢ ಶಾಲೆಯ ಎಂಟರಿಂದ ಹತ್ತನೆ ತರಗತಿಯ ಹಿರಿಯರ ವಿಭಾಗದಲ್ಲಿ ಅರವಿಂದ ಪೂಜಾರಿ, ನವ್ಯಾ ನಾಯ್ಕ್,ಮಾನ್ವಿ ಹೆಗಡೆ ಕ್ರಮವಾಗಿ ಪ್ರಥಮ,ದ್ವಿತೀಯ, ತೃತೀಯ ಬಹುಮಾನ ಪಡೆದರೆ, ಒಂದರಿಂದ ಏಳನೇ ತರಗತಿ ವರೆಗಿನ ಕಿರಿಯರ ವಿಭಾಗದಲ್ಲಿ ಅರವಿಂದ ದೇವಾಡಿಗ,ಇಂದ್ರಾಣಿ ಭಟ್ಟ, ರಜತ ಪಟಗಾರ ಕ್ರಮವಾಗಿ ಪ್ರಥಮ,ದ್ವಿತೀಯ, ತೃತೀಯ ಬಹುಮಾನ ಪಡೆದರು. ಬಹುಮಾನದ ನಗದು ಪ್ರಾಯೋಜಕತ್ವವನ್ನು ಗ್ರಾ.ಪಂ.ಉಮ್ಮಚ್ಗಿ, ಪುಸ್ತಕ ಪ್ರಾಯೋಜಕತ್ವವನ್ನು ಕಾರ್ತಿಕ ಹಬ್ಬು ವಹಿಸಿದ್ದರು. ಆಟದ ನಿರ್ಣಾಯಕರಾಗಿ ಉಮ್ಮಚ್ಗಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾ ಗಾಂವ್ಕಾರ್, ಮೇಘರಾಜ್ ಮತ್ತು ಗಣಪತಿ ಪೂಜಾರಿ ಗ್ರಾ.ಪಂ.ಉಮ್ಮಚ್ಗಿ ಪಾಲ್ಗೊಂಡರು.








