advt



13-8-2022. ಶನಿವಾರ.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಅನುಷ್ಠಾನದ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಸಮಾಲೋಚನಾ ಸಭೆಯು ಪಟ್ಟಣದ ಅಡಕೆ ಭವನದಲ್ಲಿ ಶನಿವಾರ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ವಹಿಸಿದ್ದರು.
advt

ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw

ಕಾರವಾರದ ರೈಲ್ವೆ ಸೇವಾ ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಕಾರ್ಯದರ್ಶಿ ರಾಜೀವ ಗಾಂವ್ಕಾರ್, ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿದರು. ಕೃಷ್ಣಾನಂದ ದೇವನಳ್ಳಿ, ವೆಂಕ್ಟು ಮಾಸ್ತರ್, ಡಿ.ಎನ್.ಗಾಂವ್ಕಾರ್, ಬೀರಣ್ಣ ನಾಯಕ ಮೊಗಟಾ, ಟಿ.ಶಂಕರ ಭಟ್ಟ ಮುಂತಾದವರು ಇದ್ದರು. ಎಂ.ಆರ್.ಹೆಗಡೆ ಸ್ವಾಗತಿಸಿದರು. ಕೇಬಲ್ ನಾಗೇಶ ನಿರ್ವಹಿಸಿದರು.








