14-8-2022. ರವಿವಾರ.

ಈ ಸುದ್ದಿಯ ವಿಡಿಯೋ ದೃಶ್ಯಾವಳಿಯನ್ನು ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಸ್ವಾತಂತ್ರ್ಯದ ಅಮೃತಮಹೋತ್ಸವದ ನಿಮಿತ್ತ ಯಲ್ಲಾಪುರ ಪಟ್ಟಣದಲ್ಲಿರುವ ನಾನಾ ಇಲಾಖೆಗಳ ಕಟ್ಟಡಗಳಿಗೆ ಆಕರ್ಷಕ ವಿದ್ಯುದ್ದೀಪಾಲಂಕಾರವನ್ನು ಮಾಡಲಾಗಿದೆ. ತಹಸೀಲ್ದಾರ್ ಕಚೇರಿ, ತಾಲೂಕಾ ಪಂಚಾಯತಿ, ಪಟ್ಟಣ ಪಂಚಾಯತಿ, ಪೊಲೀಸ್ ಠಾಣೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆಯ ಕಟ್ಟಡ, ಹೆಸ್ಕಾಂ ಕಚೇರಿ ಕಟ್ಟಡಗಳಿಗೆ ಕಣ್ಮನ ಸೆಳೆಯುವ ವಿದ್ಯುದ್ದೀಪಾಲಂಕಾರವನ್ನು ಮಾಡಲಾಗಿದೆ.

ಪೊಲೀಸ್ ಇಲಾಖೆಯ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಬೈಕ್ ರ‍್ಯಾಲಿ.

ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ರವಿವಾರ ವಿವಿಧ ಕ್ಷೇತ್ರಗಳ 18 ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಿಪಿಐ ಸುರೇಶ ಯಳ್ಳೂರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ರವಿವಾರ ಮಧ್ಯಾಹ್ನ ಯಲ್ಲಾಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ದೇಶಭಕ್ತಿಯ ಜಾಗೃತಿಗಾಗಿ ಬೈಕ್ ರ‍್ಯಾಲಿ ನಡೆಸಿದರು.

ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw

advt

ಹಿಂದೂಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನ.

ಯಲ್ಲಾಪುರದಲ್ಲಿ ರವಿವಾರ ಸಂಜೆ ಹಿಂದೂಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಲಾಯಿತು. ಈ ನಿಮಿತ್ತ ಪಂಜಿನ ಮೆರವಣಿಗೆ ನಡೆಯಿತು. ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು,

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಳೀಯ ವಕ್ತಾರರಾದ ಶ್ರೀಪಾದ ಉಪಾಧ್ಯ ಅವರು ವಿಶೇಷ ಉಪನ್ಯಾಸವನ್ನು ನೀಡಿದರು. ಹಿಂದೂಜಾಗರಣಾ ವೇದಿಕೆಯ ಪ್ರಮುಖರಾದ ಗೋಪಾಲಕೃಷ್ಣ ಗಾಂವ್ಕಾರ್, ಪ್ರದೀಪ ಯಲ್ಲಾಪುರಕರ್ ಮುಂತಾದವರು ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮwhats app group ಗೆ join ಆಗಿ. https://chat.whatsapp.com/L2CReGIOXdX7UXCxXicb4Q

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.co

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading