28-8-2022 . ರವಿವಾರ.

ಯಲ್ಲಾಪುರ ಪಟ್ಟಣದ ಹಾದಿಬಾವಿಗಲ್ಲಿಯಲ್ಲಿ ಮನೆಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾದಿಬಾವಿಗಲ್ಲಿಯ ನಿವೃತ್ತ ಶಿಕ್ಷಕ ತಮ್ಮಣ್ಣ ಸುಬ್ರಾಯ ಭಟ್ಟ ಅವರ ಮನೆಯಲ್ಲಿ ಆ.೨೫ರಂದು ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮನೆಕಳ್ಳತನ ಮಾಡಿದ್ದ ಪಟ್ಟಣದ ಉದ್ಯಮನಗರದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಶೋಹೇಬ್ ಮಹ್ಮದ್ ಗೌಸ್ ಚಿಗರಳ್ಳಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಕಳ್ಳತನ ಮಾಡಿದ್ದ ಬಂಗಾರದ ಚೈನ್, ಬಂಗಾರದ ಗಟ್ಟಿ, ನಗದು ಸೇರಿ ೧ಲಕ್ಷ ೩೦ ಸಾವಿರ ರೂ ಮೌಲ್ಯದ ಸೊತ್ತನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ಸಿಪಿಐ ಸುರೇಶ ಯಳ್ಳೂರು ನೇತ್ರದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಸೆ ಅಮೀನ್ ಸಾಬ್ ಅತ್ತಾರ್, ಉದಯ ಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading