


ಯಶಸ್ವಿಯಾಗಿ ನಡೆದ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸೇವಾ ದೀಕ್ಷೆ ಸಮಾರಂಭವು ಪಟ್ಟಣದ ಅಡಿಕೆ ಭವನದಲ್ಲಿ ನಡೆಯಿತು.

ಲಯನ್ಸ್ ಕ್ಲಬ್ ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗೌವರ್ನರ್ MJF ಸುದೇಶ ಬೋರ್ಕರ್ ಮಾತನಾಡಿ, ಲಯನ್ಸ್ ಕ್ಲಬ್ ಸೇವಾ ಚಟುವಟಿಕೆಗಳು ಪ್ರತಿ ಊರಿಗೂ ತಲುಪುವಂತಾಗಬೇಕು, ಲಯನ್ಸ್ ಸಂಸ್ಥೆಯು ಮಾನವೀಯತೆಗೆ ಮಿಡಿಯುವ ಸಂಸ್ಥೆಯಾಗಿದೆ. ಜಗತ್ತಿನಾದ್ಯಂತ ತನ್ನ ಸೇವಾ ಕೈಂಕರ್ಯಗಳ ಮೂಲಕ ಸಮಾಜ ಸೇವೆ ಮಾಡುತ್ತಿರುವ ಲಯನ್ಸ್ ಕ್ಲಬ್ ಸಂಸ್ಥೆಯು ಹೆಮ್ಮೆಯ ಸಂಸ್ಥೆಯಾಗಿದೆ ಎಂದರು.

ಟೌನ್ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾದ MJF ಶೇಷಗಿರಿ ಪ್ರಭು ಮಾತನಾಡಿ, ಲಯನ್ಸ್ ಸಂಸ್ಥೆಯ ನಿರ್ದೇಶನದಂತೆ ಯಲ್ಲಾಪುರ ತಾಲೂಕಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಕ್ಯಾನ್ಸರ್ ರೋಗದ ಕುರಿತು ಜಾಗೃತಿ, ವೃಕ್ಷಾರೋಪಣ ಮುಂತಾದ ಅನೇಕ ಸೇವಾ ಚಟುವಟಿಕೆಗಳನ್ನು, ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಿಸ್ಟ್ರಿಕ್ಟ್ ಕೋಆರ್ಡಿನೇಟರ್ PMJF ಡಾ.ಅಶೋಕ ಹೆಗಡೆ ಮಾತನಾಡಿದರು. ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಸೇವಾದೀಕ್ಷೆ ನೀಡಲಾಯಿತು. ನೂತನ ಸದಸ್ಯರು ಸಂಸ್ಥೆಗೆ ಸೇರ್ಪಡೆಗೊಂಡರು. ಎಸ್.ಎಲ್.ಭಟ್ಟ ನಿರ್ವಹಿಸಿದರು.

ಖಜಾಂಚಿ ರವಿರಾಜ ಪ್ರಭು ಪರಿಚಯಿಸಿದರು. ಕಾರ್ಯದರ್ಶಿ ಮೋಹನ ರೇವಣ್ಕರ್ ವಂದಿಸಿದರು. ಜೋನಲ್ ಚೇರ್ ಪರ್ಸನ್ ಸುರೇಶ ಬೋರ್ಕರ್, ಲಯನ್ಸ್ ಕ್ಲಬ್ ನ ನಂದನ ಬಾಳಗಿ, ಮಂಜುನಾಥ ನಾಯ್ಕ, ಎಸ್.ಎನ್.ನಾಯ್ಕ, ಗೋಪಾಲ ನೇತ್ರೇಕರ್, ಶಾಂತಾರಾಮ ಹೆಗಡೆ, ವೀಣಾ ಭಟ್ಟ, ವಿನಯಾ ಪ್ರಭು, ಸುನಂದಾ ಪಾಟಣಕರ್ ಹಾಗೂ ಶಿರಸಿ ಮತ್ತು ದಾಂಡೇಲಿಯಿಂದ ಆಗಮಿಸಿದ ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಇದ್ದರು.

=====================

