ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಮತದಾನವು ಶಾಂತಿಯುತವಾಗಿ ಮುಕ್ತಾಯಗೊಂಡಿರುತ್ತದೆ. ಮತದಾನದ ವಿವರ ಈ ಕೆಳಗಿನಂತಿರುತ್ತದೆ.

ಕ್ರ.ಸಂ, ಜಿಲ್ಲೆ, ಹೆಸರು, ಗಂಡು, ಹೆಣ್ಣು, ಇತರೆ, ಒಟ್ಟು ಶೇಕಡಾವಾರು ವಿವರ ಹೀಗಿದೆ.


01 ಧಾರವಾಡ 15025, 10215, 0, 25240, 71.87

02 ಗದಗ 11036, 5742, 0, 16778, 77.70

03 ಹಾವೇರಿ 12748, 6653, 0, 19401, 78.71

04 ಉತ್ತರ ಕನ್ನಡ 6352, 5921, 0, 12273, 76.52

ಮೊಹರಾದ ಮತಪೆಟ್ಟಿಗೆಗಳನ್ನು ಹಾಗೂ ಸಂಬಂಧಿಸಿದ ಶಾಸನ ಬದ್ದ ಹಾಗೂ ಶಾಸನ ಬದ್ದವಲ್ಲದ ಲಕೋಟೆಗಳನ್ನು ಹಾಗೂ ಇತರೆ ಸಂಬಂಧಿಸಿದ ದಾಖಲೆಗಳನ್ನು ಮತಕೇಂದ್ರವಾದ ಕೃಷಿ ವಿಶ್ವ ವಿದ್ಯಾಲಯ, ಎತ್ತಿನಗುಡ್ಡ, ಧಾರವಾಡದಲ್ಲಿ ಸ್ಥಾಪಿಸಿದ ಭದ್ರತಾ ಕೊಠಡಿಯಲ್ಲಿ ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಇರಿಸಲಾಗಿರುತ್ತದೆ. ಸದರಿ ಭದ್ರತಾ ಕೊಠಡಿಗೆ ಹಾಗೂ ಮತ ಎಣಿಕಾ ಕೇಂದ್ರಕ್ಕೆ 03 ಹಂತದಲ್ಲಿ ಒಟ್ಟು 212 ಪೆÇಲೀಸ್ ಅಧಿಕಾರಿಗಳನ್ನೊಳಗೊಂಡಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಮಾನ್ಯ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ಮತ ಎಣಿಕೆಯನ್ನು ಕೃಷಿ ವಿಶ್ವ ವಿದ್ಯಾಲಯ, ಎತ್ತಿನಗುಡ್ಡ, ಧಾರವಾಡದಲ್ಲಿ ದಿನಾಂಕ:27.10.2026(ಮಂಗಳವಾರ) ರಂದು ಮುಂಜಾನೆ 08.00 ಗಂಟೆಗೆ ಪ್ರಾರಂಭಿಸಲಾಗುವುದು. ಮತ ಎಣಿಕೆ ಪ್ರಕ್ರಿಯೆಗಾಗಿ 14 ಟೇಬಲ್‍ಗಳನ್ನು ಅಳವಡಿಸಲಾಗಿದ್ದು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಉಸ್ತುವಾರಿಯೊಂದಿಗೆ ಪ್ರತಿ ಟೇಬಲ್‍ಗೆ ಒಬ್ಬ ಮತ ಎಣಿಕೆ ಮೇಲ್ವಿಚಾರಕರು ಹಾಗೂ 02 ಮತ ಎಣಿಕೆ ಸಹಾಯಕರನ್ನು ನೇಮಿಸಲಾಗಿರುತ್ತದೆ. ಸದರಿ ಅಧಿಕಾರಿ/ಸಿಬ್ಬಂದಿಗಳಿಗೆ ಸೈದ್ಧಾಂತಿಕ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮೂರು ಹಂತದಲ್ಲಿ ತರಬೇತಿಯನ್ನು ನೀಡಲಾಗಿರುತ್ತದೆ.

ಸದರಿ ಮತ ಎಣಿಕೆ ದಿನದಂದು ಜಿಲ್ಲಾಧಿಕಾರಿಗಳು ಧಾರವಾಡ ಇವರು ಮತ ಎಣಿಕೆಯ ಕಟ್ಟಡದ ಸುತ್ತಮುತ್ತ ಬಿಎನ್‍ಎಸ್ ಕಾಯ್ದೆ ಕಲಂ-163ರಡಿ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಆದೇಶಿಸಿರುತ್ತಾರೆ.

ದಿನಾಂಕ:26.10.2026 ರ ಸಾಯಾಂಕಾಲ 04.00 ಗಂಟೆಯಿಂದ ದಿನಾಂಕ:27.10.2026ರ ರಾತ್ರಿ 12.00 ಗಂಟೆಯವರೆಗೆ ಧಾರವಾಡ ಜಿಲ್ಲೆಯಾದ್ಯಂತ ಮಧ್ಯ ಮಾರಾಟ, ಮಧ್ಯಪಾನ ಮತ್ತು ಮಧ್ಯ ಸಾಗಾಣಿಕೆಯನ್ನು ನಿಷೇಧಿಸಿ ಈ ದಿನಗಳಂದು ಶುಷ್ಕ ದಿನಗಳೆಂದು ಘೋಷಿಸಿ ಜಿಲ್ಲಾಧಿಕಾರಿಗಳು ಧಾರವಾಡ ಇವರು ಆದೇಶ ಹೊರಡಿಸಿರುತ್ತಾರೆ.

ಮತ ಎಣಿಕಾ ಕಾರ್ಯವನ್ನು ಸಮರ್ಪಕವಾಗಿ ಜರುಗಿಸಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳು, ಕರ್ನಾಟಕ ಪಶ್ಚಿಮ ಪಧವೀಧರರ ಮತಕ್ಷೇತ್ರ ಹಾಗೂ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಅವರ ಪ್ರಕಟಣೆ ತಿಳಿಸಿದೆ.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading