
25-7-2021.
ಯಲ್ಲಾಪುರ.
ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ತಾಲೂಕಿನ ತಳಕೆಬೈಲ್, ಅರಬೈಲ್‍ಘಟ್ಟ, ಕೊಚ್ಚಿಹೋದ ಗುಳ್ಳಾಪುರ ಸೇತುವೆ ಮುಂತಾದ ಪ್ರದೇಶಗಳಿಗೆ ರಾಜ್ಯ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿ ಗೋವಿಂದ ರಾಜ್ ಮತ್ತು ಲೋಕೋಪಯೋಗಿ ಇಲಾಖೆಯ ಹಿರಿಯ ಇಂಜಿನೀಯರ್ ಗಳು ಭೇಟಿ ನೀಡಿ ಮಳೆಯಿಂದ ಆದ ಅನಾಹುತವನ್ನು ವೀಕ್ಷಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಪಿಡ್ಲ್ಯುಡಿ ಮುಖ್ಯ ಇಂಜಿನೀಯರ್ ಎಸ್.ಎಫ್.ಪಾಟೀಲ್, ಎಂಜನೀಯರ್ ದೇವಿದಾಸ್ ಚೌಹಾಣ, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್, ಎಇಇ ವಿ.ಎಂ.ಭಟ್ ಹಾಗೂ ಪ್ರಮುಖರು ಇದ್ದರು.

—–ADVT—



——————————————————————————————— ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt *****************************************************
ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur ————————————————————————————————
