26.7.2021. ಸೋಮವಾರ.
ಯಲ್ಲಾಪುರ.
ರಣಭೀಕರ ಮಳೆಯಿಂದಾಗಿ ಭೂಕುಸಿತಗೊಂಡು ಸಂಕಷ್ಟದಲ್ಲಿರುವ ತಾಲೂಕಿನ ಕಳಚೆ ಊರಿನ ವೃದ್ಧ ಮಹಿಳೆಯೊಬ್ಬರನ್ನು ಅಗ್ನಿಶಾಮಕ ದಳದವರು ಜೋಲಿಯಲ್ಲಿ ಕುಳ್ಳಿರಿಸಿಕೊಂಡು ಸುಮಾರು ಐದು ಕಿ.ಮೀ. ವರೆಗೆ ಸುರಕ್ಷಿತವಾಗಿ ಹೊತ್ತು ತಂದಿದ್ದಾರೆ. ವೃದ್ಧ ಮಹಿಳೆಯು ಕಾಲು ನೋವಿನಿಂದ ಬಳಲುತ್ತಿದ್ದು, ಸರಾಗವಾಗಿ ನಡೆದಾಡಲು ಆಗುತ್ತಿರಲಿಲ್ಲ. ಮಹಿಳೆಯ ಮನೆಗೆ ತೆರಳಲು ಇದ್ದ ರಸ್ತೆಯು ಭೂಕುಸಿತದಿಂದಾಗಿ ಮುಚ್ಚಿಹೋಗಿತ್ತು.ಅಗ್ನಿಶಾಮಕ ದಳದವರ ಕಾರ್ಯಾಚರಣೆಗೆ ವೃದ್ಧ ಮಹಿಳೆಯ ಕುಟುಂಬದವರು ಹಾಗೂ ಮಹಿಳೆಯು ಕೃತಜ್ಞತೆ ಸಲ್ಲಿಸಿದರು. ಕಾರ್ಯಾಚರಣೆಯಲ್ಲಿ ಯಲ್ಲಾಪುರ ಅಗ್ನಿಶಾಮಕ ದಳದ ಠಾಣಾಧಿಕಾರಿ ಶಂಕರಪ್ಪ ಅಂಗಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

——————————————————————————————— ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt ***************************************************** ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur ————————————————————————————————

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading