

3-8-2021. ಮಂಗಳವಾರ.
E-ಯಲ್ಲಾಪುರ.
ತಾಲೂಕಿನ ಕಳಚೆ ಪ್ರದೇಶದಲ್ಲಿ ಹಾಗೂ ಜಿಲ್ಲೆಯ ವಿವಿದೆಡೆ ಸಂಭವಿಸಿದ ಭೂಕುಸಿತ ವಿದ್ಯಮಾನವು ಗಂಭೀರ ವಿಷಯವಾಗಿದ್ದು, ಇದು ದೇಶಮಟ್ಟದ ವಿಪತ್ತು. ರಾಜ್ಯದಲ್ಲಿಯೇ ಈ ವರ್ಷ ದೊಡ್ಡ ಮಟ್ಟದ ಭೂಕುಸಿತ ಯಲ್ಲಾಪುರ ತಾಲೂಕಿನಲ್ಲಿ ಸಂಭವಿಸಿದೆ ಎಂದು ಜೀವ ವೈವಿದ್ಯತಾ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
–ADVT–
ಯಲ್ಲಾಪುರ ನಗರದ ಉದ್ಯಮನಗರದಲ್ಲಿ ನೂತನವಾಗಿ ನಿರ್ಮಿಸಲಾದ, ಸುಸಜ್ಜಿತ ಆರ್.ಸಿ.ಸಿ. ಮನೆ ಬಾಡಿಗೆಗೆ ಕೊಡುವುದಿದೆ. ( ಸಸ್ಯಾಹಾರಿಗಳಿಗೆ ಮಾತ್ರ )
ಸಂಪರ್ಕಿಸಿ ; ಫೋನ್ ನಂ ; 7899588538



ಅವರು ಪಟ್ಟಣದ ತಾ.ಪಂ.ಸಭಾಭವನದಲ್ಲಿ ಮಂಗಳವಾರ ನಡೆದ ಜೀವವೈವಿದ್ಯತಾ ಜಾಗ್ರತಿ ಅಭಿಯಾನದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪರಿಸರ ವಿಜ್ಞಾನಿ ಕೇಶವ ಕೊರ್ಸೆ ಮಾತನಾಡಿ, 2009 ರಿಂದ ಪ್ರತಿ ವರ್ಷ ರಾಜ್ಯದಲ್ಲಿ ಭೂಕುಸಿತ ಪ್ರಮಾಣ ಜಾಸ್ತಿ ಅಗುತ್ತಿದೆ. ನೈಸರ್ಗಿಕ ಕಾಡು ಕಡಿಮೆ ಆಗಿರುವುದು ಹಾಗೂ ಪ್ರಕೃತಿಯ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪದಿಂದ ಇಂತಹ ವಿಕೋಪಗಳು, ದುರಂತಗಳು ಸಂಭವಿಸುತ್ತವೆ. ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪಾಂಪರಿಕ ಜೇನುತಜ್ಞ ರಾಮಾ ಮರಾಠಿ ಅವರಿಗೆ ಜೀವ ವೈವಿದ್ಯತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಏಸಿಎಫ್ ಅಶೋಕ ಭಟ್ಟ, ತಾ.ಪಂ. ಇ.ಒ. ಜಗದೀಶ ಕಮ್ಮಾರ್ ಇದ್ದರು. ವಿವಿಧ ಪಂಚಾಯತಿಗಳ ಪಿ.ಡಿ.ಒ.ಗಳು, ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/BrL0e7zB8Qo1yeFemCvdus
ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur
FACEBOOK GROUP – https://www.facebook.com/groups/593852164946589
