4-8-2021. ಬುಧವಾರ.
E- ಯಲ್ಲಾಪುರ.
ಇತ್ತೀಚೆಗೆ ಸುರಿದ ಮಹಾಮಳೆಯಿಂದಾಗಿ ತಾಲೂಕಿನ ಮಾಗೋಡ ಗ್ರಾಮದ ಕುಳಿಮಾಗೋಡು ಮತ್ತು ತಾರಿಮನೆ ಮಜರೆಗಳಲ್ಲಿ ಭೂಕುಸಿತ ಉಂಟಾಗಿ ವಾಸ್ತವ್ಯದ ಮನೆಗಳಿಗೆ ಹಾಗೂ ಅಡಕೆ ತೋಟ, ಬಾಳೆತೋಟ,ಭತ್ತದ ಗದ್ದೆಗಳಿಗೆ ಅಪಾರ ಹಾನಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಗ್ರಾಮಸ್ಥರು, ಕುಳಿಮಾಗೋಡಿನ ರಾಮಕೃಷ್ಣ ಗೋಪಾಲ ಭಟ್ಟ, ಕೃಷ್ಣ ವೆಂ.ಹೆಗಡೆ ಇವರ ವಾಸ್ತವ್ಯದ ಮನೆ ಮತ್ತು ತೋಟ,ಗದ್ದೆಗಳಿಗೆ ತೀವೃ ಹಾನಿಯಾಗಿದೆ. ನೂರಾರು ಅಡಕೆ ಮರಗಳು, ಬಾಳೆಮರಗಳು ಧರಾಶಾಯಿಯಾಗಿವೆ.

ತಾರಿಮನೆಯ ನಾರಾಯಣ ಗೋಪಾಲ ಭಟ್ಟ, ಅನಂತ ಗೋಪಾಲ ಭಟ್ಟ,ಗಣಪತಿ ಗೋಪಾಲ ಭಟ್ಟ, ವಿನಾಯಕ ಗೋಪಾಲ ಭಟ್ಟ ಅವರ ತೋಟಗಳಿಗೆ ಹಾನಿಯಾಗಿದೆ. ಇದೇ ಪ್ರದೇಶದಲ್ಲಿ ಹಲವೆಡೆ ಭೂಮಿ ಬಿರುಕು ಬಿಟ್ಟಿದ್ದು ಕುಸಿಯುವ ಆತಂಕ ಎದುರಾಗಿದೆ.

ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾನಿಯಾದ ಸ್ಥಳಕ್ಕೆ ಭೆಟ್ಟಿ ನೀಡಿ ಸಮೀಕ್ಷೆ ಮಾಡಬೇಕು. ಆಗಿರುವ ಹಾನಿಗೆ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಗ್ರಾಮಸ್ಥರಾದ ರಾಮಚಂದ್ರ ಭಟ್ಟ ಕಿರುಕುಂಬತ್ತಿ, ಕೃಷ್ಣ ಹೆಗಡೆ ಕುಳಿಮಾಗೋಡು, ರಾಮಕೃಷ್ಣ ಭಟ್ಟ ಕುಳಿಮಾಗೋಡು, ನಾರಾಯಣ ಭಟ್ಟ ತಾರಿಮನೆ ಮುಂತಾದವರು ಮನವಿ ಮಾಡಿದ್ದಾರೆ.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/BrL0e7zB8Qo1yeFemCvdus

ನಮ್ಮ E YELLAPUR -FACE BOOK PAGE LIKE ಮಾಡಿ – https://www.facebook.com/eyellapur

FACEBOOK GROUP – https://www.facebook.com/groups/593852164946589

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading