22-2-2022. ಮಂಗಳವಾರ.
ಯಲ್ಲಾಪುರ
E-YELLAPUR.COM NEWS
ಜಿಲ್ಲಾಡಳಿತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಯಲ್ಲಾಪುರ ಪಟ್ಟಣದಲ್ಲಿ ತಂಬಾಕು ಬಳಕೆ ನಿಯಂತ್ರಣ ಜಾಗ್ರತಿ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಗುಲಾಬಿ ಆಂದೋಲನ, ಬೀದಿ ನಾಟಕ ನಡೆಯಿತು.
ADVT
ತಂಬಾಕು ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಸಿದ್ಧಾಪುರದ ಕಡಕೇರಿಯ ಈಶ್ವರ ಕಲಾಬಳಗದವರು ಬೀದಿ ನಾಟಕ ಪ್ರದರ್ಶಿಸಿದರು. ನಂತರ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿಕಾರರಿಗೆ ಗುಲಾಬಿ ಹೂವು ನೀಡಿ ಜಾಗ್ರತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಮಾತನಾಡಿ, ಆರೋಗ್ಯಕ್ಕೆ ಮಾರಕವಾದ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡಬಾರದು. ಆರೋಗ್ಯಯುತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ, ಆರೋಗ್ಯ ನಿರೀಕ್ಷಕ ಮಹೇಶ ತಾಳಿಕೋಟಿ, ಆಶಾ ಕಾರ್ಯಕರ್ತೆಯರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ
FACEBOOK GROUP – https://www.facebook.com/groups/593852164946589/
group ಗೆ join ಆಗಿ.
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related