28-3-2022. ಸೋಮವಾರ.

ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.

ಯುಗಾದಿ ಉತ್ಸವದ ನಿಮಿತ್ತ ಎ.2ರಂದು ಪಟ್ಟಣದಲ್ಲಿ ಭವ್ಯ ಶೋಭಾ ಯಾತ್ರೆ, ಪಂಚಾಂಗ ಪಠಣ ನಡೆಯಲಿದೆ. ಎ.3ರಂದು ಧರ್ಮಜಾಗೃತಿ ಉಪನ್ಯಾಸ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ್ ಹೇಳಿದರು.

ADVT

ಅವರು ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಸೋಮವಾರ ಮಾತನಾಡಿ,ಈ ವರ್ಷ ಯುಗಾದಿ ಉತ್ಸವವನ್ನು ವಿಜ್ರಂಬಣೆಯಿಂದ ನಡೆಸಲಾಗುತ್ತಿದೆ. ಕಳೆದ ಎರಡು ವರ್ಷ ಯುಗಾದಿ ಉತ್ಸವ ಆಚರಣೆಗೆ ಕೋವಿಡ್ ಕಾರಣದಿಂದ ಅಡ್ಡಿಯಾಗಿತ್ತು. ಈ ವರ್ಷ ಶೋಭಾ ಯಾತ್ರೆಯಲ್ಲಿ 25ಕ್ಕೂ ಹೆಚ್ಚು ಟ್ಯಾಬ್ಲೋಗಳು, ಝಾಂಜ್ ಪತಾಕ್,ಚಂಡೆ ವಾದ್ಯ,ವಿವಿಧ ವಾದ್ಯ ತಂಡಗಳು, ಬುಡಕಟ್ಟು ಸಮುದಾಯದವರ ಸಾಂಪ್ರದಾಯಿಕ ನೃತ್ಯ ಮುಂತಾದವು ಇರಲಿವೆ.

ADVT

ವೇ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಪಂಚಾಂಗ ಪಠಣ ಮಾಡಲಿದ್ದಾರೆ. ಎ.3ರಂದು ಸಂಜೆ 5 ಗಂಟೆಗೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರು ಧರ್ಮಜಾಗೃತಿ ಉಪನ್ಯಾಸ ನೀಡಲಿದ್ದಾರೆ.

ADVT

ನಂತರ ಪುತ್ತೂರು ನರಸಿಂಹ ನಾಯಕ ಅವರಿಂದ ಭಕ್ತಿ ಸಂಗೀತ ನಡೆಯಲಿದೆ. ಯುಗಾದಿ ಉತ್ಸವದ ಜಾಗೃತಿಗಾಗಿ ಮಾ.30ರಂದು ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ ಎಂದರು.

ADVT

ಈ ಸಂದರ್ಭದಲ್ಲಿ ಸಮಿತಿಯ ಖಜಾಂಚಿ ಪ್ರದೀಪ ಯಲ್ಲಾಪುರಕರ್, ಪ್ರಮುಖರಾದ ನಮಿತಾ ಬೀಡಿಕರ್,ಆದಿತ್ಯ ಗುಡಿಗಾರ್, ಶ್ರೀನಿವಾಸ ಗಾಂವ್ಕಾರ್, ಜಗದೀಶ ಪೂಜಾರಿ, ಸುಧಿರ್ ಆಚಾರ್ಯ ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading