28-3-2022. ಸೋಮವಾರ.
ಇ-ಯಲ್ಲಾಪುರ ಡಾಟ್ ಕಾಂ ನ್ಯೂಸ್.
ಭಾನುವಾರ ರಾತ್ರಿ ಸುರಿದ ಮಳೆ ಹಾಗೂ ರಭಸದ ಗಾಳಿಗೆ ತಾಲೂಕಿನ ಕುಂದರ್ಗಿ ಪಂಚಾಯತ ವ್ಯಾಪ್ತಿಯ ಭರತನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಊಟದ ಕೋಣೆ, ಸಭಾಭವನ, ಶೌಚಾಲಯಗಳು ತೀವೃ ಹಾನಿಗೊಳಗಾಗಿವೆ.
ADVT
ಶಾಲಾ ಕೈತೋಟದ ಅಡಿಕೆ, ತೆಂಗಿನ ಮರಗಳು ಗಾಳಿಯ ರಭಸಕ್ಕೆ ಮುರಿದು ಬಿದ್ದಿವೆ. ಹಾನಿಯಾದ ಸ್ಥಳಕ್ಕೆ ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪ ತಹಸೀಲ್ದಾರ ಫರ್ನಾಂಡೀಸ್, ವಿಲೇಜ್ ಅಕೌಂಟೆಂಟ್ ಗಜೇಂದ್ರ ಪಟಗಾರ ಮುಂತಾದವರು ಇದ್ದರು. ಸುಮನಾ ಮಂಜುನಾಥ ಗೌಡ ಕುಂದರಗಿ,
ADVT
ಸುರೇಶ ಮಾಬ್ಲೇಶ್ವರ ಶೇಟ್ ಭರತನಹಳ್ಳಿ, ಸುಶೀಲಾ ನಾರಾಯಣ ನಾಯ್ಕ ಮಾವಿನಕಟ್ಟಾ, ಲಕ್ಷ್ಮಿ ನಾಗೇಶ ಸಿದ್ದಿ ಮಾವಿನಕಟ್ಟಾ, ಲಕ್ಷ್ಮಿ ಯಲ್ಲಪ್ಪ ಬೋವಿವಡ್ಡರ್, ಸರಿತಾ ರವೀಂದ್ರ ಜೋಗೇರ್ ಮಾವಿನಕಟ್ಟಾ,
ADVT
ನರಸಿಂಹ ಬೋವಿವಡ್ಡರ್ ಮಾವಿನಕಟ್ಟಾ ಮುಂತಾದವರ ಮನೆಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳಾದ ಪ್ರಕಾಶ ನಾಯ್ಕ, ರಾಮು ಹೆಗಡೆ ಕುಂದರಗಿ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿದ್ದರು.
ADVT
ಸೋಮವಾರ ನಡೆದ ಎಸ್.ಎಸ್.ಎಲ್.ಸಿ. ಮೊದಲ ದಿನದ ಪರೀಕ್ಷೆಯಲ್ಲಿ ಯಲ್ಲಾಪುರ ತಾಲೂಕಿನಲ್ಲಿ 1150 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 9 ವಿಧ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ತಿಳಿಸಿದ್ದಾರೆ.
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebo ok.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation