14-4-2022. ಗುರುವಾರ.

E-YELLAPUR.COM NEWS ಯಲ್ಲಾಪುರ.

ಉತ್ತಮ ರಂಗ ಸಜ್ಜಿಕೆಯೊಂದಿಗೆ ಮನೋಜ್ಞ ಅಭಿನಯಕ್ಕೆ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಹೆಸರಾದ ನಂದೊಳ್ಳಿ ನಾಟಕವು ಎ.15 ಶುಕ್ರವಾರ ರಾತ್ರಿ ನಡೆಯಲಿದೆ. ನಂದೊಳ್ಳಿಯ ಶ್ರೀರಾಮಲಿಂಗೇಶ್ವರ ನಾಟಕ ನಾಟ್ಯ ಕಲಾ ಬಳಗದಿಂದ ಆಯೋಜನೆಗೊಂಡ ಈ ನಾಟಕ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮವು ರಾತ್ರಿ 9.30 ಕ್ಕೆ ನಡೆಯಲಿದೆ.

ADVT

ಕಾರ್ಯಕ್ರಮವನ್ನು ಹಿರಿಯರಾದ ಗಣಪತಿ ಭಟ್ಟ ಗೇರಗದ್ದೆ ಉದ್ಘಾಟಿಸಲಿದ್ದಾರೆ. ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಎಂ.ಎಲ್.ಸಿ ಶಾಂತಾರಾಮ ಸಿದ್ದಿ, ಉದ್ಯಮಿ ಪ್ರಶಾಂತ ದೇಶಪಾಂಡೆ, ಪ್ರಮುಖರಾದ ವಿ.ಎಸ್.ಪಾಟೀಲ, ಪ್ರಮೋದ ಹೆಗಡೆ, ಶ್ರೀನಿವಾಸ ಭಟ್ಟ,

ADVT

ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಹಿರಿಯ ನಾಟಕ ಕಲಾವಿದರಾದ ವೇ.ಮಹಾಬಲೇಶ್ವರ ಭಟ್ಟ ನೇರಲಮನೆ, ಮಾದೇವ ನಾಯ್ಕ ಕೊಲ್ಲಕ್ಕಿಪಾಲ, ನಿವೃತ್ತ ಯೋಧ ಸುಬ್ರಹ್ಮಣ್ಯ ಭಟ್ಟ ಕರಡಿಪಾಲ, ಸಮಾಜ ಸೇವಕ ವೆಂಕಟರಮಣ ಕೊಡಿಯಾ ಅವರನ್ನು ಸನ್ಮಾನಿಸಲಾಗುವುದು.

ನಂತರ ಬಳಗದ ಕಲಾವಿದರಿಂದ ತಂಗಿಯ ಕಣ್ಣೀರು ( ರಕ್ತ ಕಂಡ ರಣಧೀರ ) ನಾಟಕ ಪ್ರದರ್ಶನ ನಡೆಯಲಿದೆ. ದತ್ತಾತ್ರೇಯ ಹೆಗಡೆ, ಮಂಜುನಾಥ ನಾಯ್ಕ, ನರಸಿಂಹ ಭಟ್ಟ ಕುಂಕಿಮನೆ, ಗಣಪತಿ ಭಟ್ಟ ಕರಡಿಪಾಲ,

ADVT

ಶಿವಾನಂದ ನಾಯ್ಕ, ಸುಬ್ಬಣ್ಣ ಕಂಚಗಲ್, ಸುದರ್ಶನ ಭಾಗ್ವತ, ಮಾದೇವ ನಾಯ್ಕ, ಸುಬ್ರಾಯ ಕೋಡ್ನಗುಡ್ಡೆ, ಶ್ರೀಧರ ಅಣಲಗಾರ, ಗಣಪತಿ ಪಟಗಾರ, ಸುದರ್ಶನ ದೇವಿತಗ್ಗು, ಶಿವಾ ಸಿದ್ದಿ ಪಾತ್ರ ನಿರ್ವಹಿಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ನಾಗರಾಜ ಕವಡಿಕೆರೆ ತಿಳಿಸಿದ್ದಾರೆ.

=============

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

,

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading