14-4-2022. ಗುರುವಾರ.
E-YELLAPUR.COM NEWS ಯಲ್ಲಾಪುರ.
ಯಲ್ಲಾಪುರ ತಾಲೂಕಿನ ಕೃಷಿಕರ ಜೀವನಾಡಿ ಸಂಸ್ಥೆಯಾದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿ(ಟಿ.ಎಂ.ಎಸ್.) ವತಿಯಿಂದ ಇದೇ ಮೊದಲಬಾರಿಗೆ ಆಯೋಜನೆಗೊಂಡಿದ್ದ ಆಲೆಮನೆ ಹಬ್ಬವು ಗುರುವಾರ ಯಶಸ್ವಿಯಾಗಿ ನಡೆಯಿತು.
ADVT
ಈ ಆಲೆಮನೆ ಹಬ್ಬಕ್ಕೆ ಚಾಲನೆ ನೀಡಿದ ರಾಜ್ಯ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಕೃಷಿಕರಿಗೆ ನಾನಾ ರೀತಿಯಲ್ಲಿ ಹತ್ತು,ಹಲವು ಸೌಲಭ್ಯಗಳನ್ನು ಒದಗಿಸುತ್ತಾ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಟಿ.ಎಂ.ಎಸ್.ಸಂಸ್ಥೆಯು ಹೊಸ,ಹೊಸ ಆಲೋಚನೆ ಹಾಗೂ ಜನಸ್ನೇಹಿ ಆಡಳಿತದ ಮೂಲಕ ಜನರಿಗೆ ನೆರವಾಗುತ್ತಿದೆ. ಈಗ ಸಹಕಾರಿ ಸಂಸ್ಥೆಯೊಂದು ಮೊದಲಬಾರಿಗೆ ಆಲೆಮನೆ ಹಬ್ಬ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಟಿ.ಎಂ.ಎಸ್.ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಜನರ ವಿಶ್ವಾಸ, ಸಹಕಾರದೊಂದಿಗೆ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಒಂದೇ ಸೂರಿನ ಅಡಿಯಲ್ಲಿ ವಿವಿಧ ಸೇವೆಗಳನ್ನು ನೀಡುತ್ತಿದೆ. ಸಂಸ್ಥೆಯ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಸಂಸ್ಥೆಯ ನಿರ್ದೇಶಕರಾದ ಟಿ.ಎನ್.ಭಟ್ಟ ನಡಿಗೆಮನೆ,ವೆಂಕಟ್ರಮಣ ಭಟ್ಟ ಕಿರುಕುಂಭತ್ತಿ ಹಾಗೂ ಸಂಸ್ಥೆಯ ಇತರ ನಿರ್ದೇಶಕರು,ಸಿಬ್ಬಂದಿಗಳು ಇದ್ದರು. ಸಾವಿರಾರು ಜನರು ಆಗಮಿಸಿ,ಕಬ್ಬಿನಹಾಲನ್ನು ಸವಿದರು. ಆಗಮಿಸಿದ ಎಲ್ಲರಿಗೂ ಉಚಿತವಾಗಿ ಕಬ್ಬಿನಹಾಲನ್ನು ವಿತರಿಸಲಾಯಿತು. ಕಬ್ಬಿನಹಾಲನ್ನು ಖರೀದಿಸಿ ಮನೆಗೆ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತು.
ADVT
ಆಲೆಮನೆ ಹಬ್ಬದಲ್ಲಿ ಒಟ್ಟೂ 16 ಟನ್ ಕಬ್ಬನ್ನು ಬಳಸಲಾಯಿತು. ಇದೇ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ಗೃಹೋಪಯೋಗಿ ವಸ್ತುಗಳ ಮಾರಾಟ ನಡೆಯಿತು. ಮುಖ್ಯ ಕಾರ್ಯನಿರ್ವಾಹಕ ಸಿ.ಎಸ್.ಹೆಗಡೆ ಸ್ವಾಗತಿಸಿದರು. ನಿರ್ದೇಶಕ ವೆಂಕಟ್ರಮಣ ಬೆಳ್ಳಿ ವಂದಿಸಿದರು.
==============
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebo ok.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation