22-4-2022. ಶುಕ್ರವಾರ.
E-YELLAPUR.COM NEWS ಯಲ್ಲಾಪುರ
ಪಟ್ಟಣದ ನಾಯಕನಕೆರೆ ಆಂಜನೇಯ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವವು ಶುಕ್ರವಾರ ನಡೆಯಿತು. ಈ ನಿಮಿತ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಲೋಕ ಕಲ್ಯಾಣಾರ್ಥವಾಗಿ ಆಂಜನೇಯನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ರುದ್ರಹವನ, ಆಂಜನೇಯ ಮೂಲಮಂತ್ರಹವನ, ಅಧಿವಾಸ ಹವನ, ಕಲಾವೃದ್ಧಿಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಆಂಜನೇಯನಿಗೆ ಮಹಾಭಿಷೇಕ, ಕಲ್ಪೋಕ್ತಪೂಜೆ ಹಾಗೂ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಿತು. ವೇ.ಶಂಕರ ಭಟ್ಟ ಕಟ್ಟೆಯವರ ಮಾರ್ಗದರ್ಶನದಲ್ಲಿ ನಡೆದ ದಾರ್ಮಿಕ ಕಾರ್ಯಕ್ರಮಗಳ ಆಚಾರ್ಯತ್ವವನ್ನು ವೇ.ರಾಮಕೃಷ್ಣ ಭಟ್ಟ ಮಾಗೋಡು ವಹಿಸಿದ್ದರು.
ADVT
ಅರ್ಚಕ ಗೋಪಾಲಕೃಷ್ಣ ಭಟ್ಟ ಕುಂಕಿಪಾಲ ಯಜಮಾನತ್ವದಲ್ಲಿ ಈ ಕಾರ್ಯಕ್ರಮಗಳು ನಡೆದವು.
ಶಾರದಾಂಬಾ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್, ವ್ಯವಸ್ಥಾಪಕ ಶಿವರಾಮ ಭಟ್ಟ, ಕಾರ್ಯದರ್ಶಿಗಳಾದ ನಾಗೇಂದ್ರ ಕವಾಳೆ,ನರಸಿಂಹ ಭಟ್ಟ ಗೇರಗದ್ದೆ, ಪ್ರಮುಖರಾದ ಜಿ.ಎನ್.ಭಟ್ ತಟ್ಟಿಗದ್ದೆ, ವಾಸುದೇವ ಹೆಗಡೆ, ವಿಶ್ವನಾಥ ಭಟ್ಟ ಶೀರ್ಲೆ, ಮಾತೃಮಂಡಳಿಯ ಅಧ್ಯಕ್ಷೆ ರಮಾ ದೀಕ್ಷೀತ್, ಡಾ.ಶಿವರಾಮ ಭಾಗ್ವತ್ ಮಣ್ಕುಳಿ,ಶಿವರಾಮ ಭಟ್ಟ ಮೊಟ್ಟೆಗದ್ದೆ ಮುಂತಾದವರು ಇದ್ದರು.
ನಾಳೆ ಶಾರದಾಂಬಾ ದೇವಾಲಯದಲ್ಲಿ ವರ್ಧಂತಿ ಉತ್ಸವ.
ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶಾಖಾ ಮಠವಾದ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವವು ನಾಳೆ ಶನಿವಾರ ನಡೆಯಲಿದೆ. ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ADVT
ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಚಂಡಿಹವನ ನಡೆಯಲಿದ್ದು, ವೇ.ಶಂಕರ ಭಟ್ಟ ಕಟ್ಟೆಯವರ ನೇತ್ರತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವೇ.ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ ಆಚಾರ್ಯತ್ವ ವಹಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಮಾತೆಯರಿಂದ ಭಗವದ್ಗೀತಾ ಪಠಣ, ಶಾಂಕರಸ್ತೋತ್ರ ಪಠಣ ನಡೆಯಲಿದೆ.
ಮಧ್ಯಾಹ್ನ ಮೂರು ಗಂಟೆಗೆ ಋತು ಶ್ರೀಧರ ಬಳಗಾರ ಅವರಿಂದ ಸಂಗೀತ ಸೇವಾ ಕಾರ್ಯಕ್ರಮ ನಡೆಯಲಿದೆ. ಹಾರ್ಮೋನಿಯಂ ವಾದನದಲ್ಲಿ ಸತೀಶ ಹೆಗ್ಗಾರ, ತಬಲಾ ವಾದನದಲ್ಲಿ ರಾಜೇಶ ಭಟ್ಟ ಕುಮಟಾ ಪಾಲ್ಗೊಳಲಿದ್ದಾರೆ.
=========
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebo ok.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related
Post navigation