20-4-2022. ಬುಧವಾರ.

E-YELLAPUR.COM NEWS ಯಲ್ಲಾಪುರ.

108 ಆಂಬ್ಯುಲೆನ್ಸ್ ಸಿಬ್ಬಂದಿಗಳ ತುರ್ತು ಸ್ಪಂದನೆಯಿಂದಾಗಿ ಆಂಬುಲೆನ್ಸ್ ನಲ್ಲಿಯೇ ಸುರಕ್ಷಿತವಾಗಿ ಹೆರಿಗೆಯಾದ ಎರಡು ಪ್ರತ್ಯೇಕ ಘಟನೆಗಳು ಬುಧವಾರ ಬೆಳಗಿನ ಜಾವ ನಡೆದಿವೆ.
ಯಲ್ಲಾಪುರ ತಾಲೂಕಿನ ಸಣ್ಣಯಲವಳ್ಳಿ ಗ್ರಾಮದ 27 ವರ್ಷದ ಮಹಿಳೆಯೋರ್ವಳು ಹೆಣ್ಣು ಮಗುವಿಗೆ ಆಂಬುಲೆನ್ಸ್ ಅಲ್ಲಿ ಜನ್ಮ ನೀಡಿದ್ದಾಳೆ.

ADVT

ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬದವರು ಗ್ರಾಮದ ಅಶಾ ಕಾರ್ಯಕರ್ತೆ ಸೀಮಾ ನಾಯ್ಕ್ ಅವರಿಗೆ ದೂರವಾಣಿ ಮುಖಾಂತರ ತಿಳಿಸುತ್ತಾರೆ.ಆಶಾಕಾರ್ಯಕರ್ತೆ 108ಕ್ಕೆ ಕರೆಮಾಡಿದ್ದಾರೆ ಕರೆಬಂದ ನಂತರ 108 ಸಿಬ್ಬಂದಿಯು ಸಣ್ಣಯಳವಳ್ಳಿ ಗ್ರಾಮಕ್ಕೆ ಭೇಟಿಕೊಟ್ಟು ಗರ್ಭಿಣಿ ಮಹಿಳೆಯನ್ನು 108 ವಾಹನದ ಮೂಲಕ ಯಲ್ಲಾಪುರ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತದೊತ್ತಡ ಹೆಚ್ಚಿದ್ದ ಕಾರಣ ಹೆರಿಗೆ ಮಾಡಿಸುವದು ಕಷ್ಟ ಎಂದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗಬೇಕೆಂದು ವೈದ್ಯರು ಸೂಚಿಸಿದ್ದಾರೆ.

ADVT

ಆಂಬುಲೆನ್ಸ್ ಸಿಬ್ಬಂದಿಗಳು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ, ಮಾರ್ಗಮದ್ಯದಲ್ಲಿ ಗರ್ಭಿಣಿಗೆ ಹೆರಿಗೆ ನೋವು ಜಾಸ್ತಿಯಾದಾಗ ಮಹಿಳೆಯ ತಾಯಿಯ ಸಹಕಾರದೊಂದಿಗೆ ಆಂಬ್ಯಲೆನ್ಸ್ ನಲ್ಲಿದ್ದ ಆರೋಗ್ಯ ತಂತ್ರಜ್ಞ ಶಿವಕುಮಾರ್ ಇಟಗಿ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.

ADVT

ಮಹಿಳೆಗೆ ಇದು 3ನೇ ಹೆರಿಗೆ ಆಗಿದ್ದು ಹೆರಿಗೆ ತುಂಬಾ ಕಷ್ಟಕರವಾಗಿತ್ತು. ಹೆರಿಗೆಯ ನಂತರ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಚಾಲಕ ಶ್ರೀಶೈಲ್ ಮಾದರ್, ಅಶಾಕಾರ್ಯಕರ್ತೆ ಸೀಮಾ ನಾಯ್ಕ್ ಸಹಕರಿಸಿದ್ದಾರೆ. ಸುರಕ್ಷಿತ ಹೆರಿಗೆ ಮಾಡಿಸಿದ ಆಂಬುಲೆನ್ಸ್ ಸಿಬ್ಬಂದಿಗೆ ಮಹಿಳೆಯ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪದ ಮಹಿಳೆಯೋರ್ವಳನ್ನು ಹೆರಿಗೆಗೆಂದು ಬುಧವಾರ ಬೆಳಗಿನ ಜಾವ ತಾಲೂಕಾ ಆಸ್ಪತ್ರೆಗೆ ಅಂಬ್ಯಲೆನ್ಸ್ ನಲ್ಲಿ ತರುತ್ತಿರುವಾಗ,ಮಹಿಳೆಯು ಆಂಬ್ಯುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆರೋಗ್ಯ ಸಿಬ್ಬಂದಿ ಕುಸುಮಾ ವಿಜಯ ನಾಯ್ಕ, ಚಾಲಕ ತಬ್ರೇಜ್ ಶೇಖ್ ಅವರು ಸುರಕ್ಷಿತ ಹೆರಿಗೆಗೆ ಸಹಕರಿಸಿದ್ದಾರೆ. ಮಹಿಳೆಗೆ ಇದು ಮೂರನೇ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯದಿಂದ ಇದ್ದು, ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading