10-5-2022. ಮಂಗಳವಾರ.
E-YELLAPUR.COM NEWS (ಪ್ರಾಯೋಜಿತ)
ಶಿಕ್ಷಣ ಕ್ಷೇತ್ರದಲ್ಲಿ 22 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಐ.ಸಿ.ಎಸ್. ಸಮೂಹ ಸಂಸ್ಥೆಗಳ ಹೆಮ್ಮೆಯ ಕೊಡುಗೆಯಾಗಿ 2012 ರಲ್ಲಿ ಪ್ರಾರಂಭವಾದ ಐ.ಸಿ.ಎಸ್. ಮಹೇಶ ಪಿ.ಯು. ಕಾಲೇಜು ತನ್ನದೇ ಆದ ವಿಭಿನ್ನ ಪ್ರಯತ್ನಗಳ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದೆ.
ಕೇವಲ ಕಲಿಯೊಂದನ್ನೇ ಗುರಿಯಾಗಿರಿಸದೇ ಕಲಿಕೆಗಾಗಿ ವಿದ್ಯಾರ್ಥಿ ವೃಂದದಲ್ಲಿ ಪ್ರೀತಿಯನ್ನು ಹುಟ್ಟಿಸುವ ಹಾಗೂ ತನ್ಮೂಲಕ ಗರಿಷ್ಠ ಸಾಮಥ್ರ್ಯ ತಲುಪಲು ಬೇಕಾದ ಪೂರಕ ವಾತಾವರಣ ನಿರ್ಮಾಣದ ಗುರಿ ಹೊಂದಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಭಿನ್ನ ಹಾಗೂ ವಿನೂತನ ಯೋಜನೆಗಳನ್ನು ಹೊಂದಿ ಪಠ್ಯ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿ ನಿರಂತರ ಯಶಸನ್ನು ಕಂಡುಕೊಳ್ಳುವಲ್ಲಿ ಅಗ್ರ ಸ್ಥಾನದಲ್ಲಿದೆ.
ತಂತ್ರಜ್ಞಾನ ಆಧಾರಿತ ಬೋಧನೆಗೆ ಯೊಗ್ಯವಾದ ತರಗತಿಗಳು, ಲೈಬ್ರರಿ, ಸುಸಜ್ಜಿತವಾದ ಲ್ಯಾಬ್ ಗಳು, ನುರಿತ ಬೋಧಕ ಸಿಬ್ಬಂದಿ, ಸುವ್ಯವಸ್ಥಿತ ವಿದ್ಯಾರ್ಥಿನಿಲಯಗಳು ಕಾಲೇಜಿನ ಯಶಸ್ಸಿನ ಗುಟ್ಟು. ವೈಯಕ್ತಿಕ ಕಾಳಜಿ, ಪ್ರಾದ್ಯಾಪಕರುಗಳ ಲಭ್ಯತೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಎಲ್ಲರಿಗೂ ಯಶಸನ್ನು ಗಳಿಸಲು ಅವಕಾಶ ಒದಗಿಸುತ್ತದೆ.
2022-23 ನೇಸಾಲಿನ ಪ್ರವೇಶಾತಿ ಆರಂಭವಾಗಿದೆ. ಆಸಕ್ತರು ತಕ್ಷಣ ಸಂಪರ್ಕಿಸಿ.
ಐ.ಸಿ.ಎಸ್. ಮಹೇಶ ಪಿ.ಯು. ಕಾಲೇಜು. ಜ್ಞಾನಸೌಧ. ಹಳಿಯಾಳ ಮೇನ್ ರೋಡ್. ಬಸವನಗರ. ಶ್ರೀನಗರ. ಧಾರವಾಡ.
ಸಂಪರ್ಕ ಸಂಖ್ಯೆ ; 9535127775, 9901837775, 6364528715
ಸ್ಪರ್ಧಾತ್ಮಕ ಪರೀಕ್ಷೆಗಳಾದ NEET, JEE ಮತ್ತು KCET ಪರೀಕ್ಷೆಗಳಿಗಾಗಿ ವಿನೂತನ ಮಾದರಿಯಲ್ಲಿ integrated methodology ಮೂಲಕ ತರಬೇತಿ ನೀಡಲಾಗುತ್ತದೆ. ಕೋವಿಡ್‍ನಂತಹ ಅನಿರೀಕ್ಷಿತ ಸನ್ನಿವೇಶಗಳು ಹಾಗೂ ಕಲಿಕಾರ್ಥಿ ಕೇಂದ್ರಿತ ಪದ್ಧತಿಗೆ ಅನುಗುಣವಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‍ಲೈನ್ ತರಗತಿಗಳು, ಕ್ವಿಜ್‍ಗಳು, ಅಧ್ಯಯನ ಸಾಮಗ್ರಿಗಳ ಲಭ್ಯತೆ ಕಾಲೇಜಿನ ವಿಶೇಷತೆಯಾಗಿದೆ.
ನಿರಂತರ ವ್ಯಕ್ತಿತ್ವ ವಿಕಸನ ಕಾರ್ಯಗಾರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿಗೆ ಪೂರಕವಾಗಿದೆ. ಧಾರವಾಡದ ಶ್ರೀನಗರದಲ್ಲಿ ತನ್ನದೇ ಸ್ವಂತ ಕ್ಯಾಂಪಸ್ ಹೊಂದಿರುವ ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ. ವಸತಿ ನಿಲಯಗಳ ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಪ್ರತಿದಿನದ ದಿನಚರಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಪ್ರತಿದಿನ ಅಧ್ಯಯನದ ಅವಧಿ ಜೊತೆಯಲ್ಲಿ ಅಧ್ಯಾಪಕರುಗಳ ಲಭ್ಯತೆ ವಿದ್ಯಾರ್ಥಿಗಳ ಡೌಟ್ ಕ್ಲಿಯರನ್ಸ್ ಸೌಲಭ್ಯ ಬಹಳ ವಿನೂತನ ಹೆಜ್ಜೆಯಾಗಿದೆ. ರುಚಿ ಮತ್ತು ಶುಚಿಯಾದ ಆಹಾರ, ಹಾಸ್ಟೇಲ್‍ಗಳ ನಿರ್ವಹಣೆ, ಬಿಸಿನೀರಿನ ಸೌಲಭ್ಯ ಹಾಗೂ ನಿಲಯ ಪಾಲಕರಿಂದ ಮೇಲ್ವಿಚಾರಣೆ ಕಾಲೇಜಿನ ವಿಶೇಷತೆಯಾಗಿದೆ.
ಕಲಿಕೆಯನ್ನು ಪರಿಣಾಮಕಾರಿಯಾಗಿಸುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳು ಹಾಗೂ ಅಡತಡೆಗಳಿಂದ ಮುಕ್ತವಾದ ವಾತಾವರಣ ನಿರ್ಮಿಸಲಾಗಿದೆ. ಪ್ರತಿಷ್ಠಿತ NEET,JEE,KCE T ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಸ್ಪೈರ್ ಅಕಾಡೆಮಿಯ ಸಹಯೋಗದಲ್ಲಿ ಹೆಚ್ಚುವರಿ ಮಾರ್ಗದರ್ಶನ ನೀಡಲಾಗುತ್ತಿದ್ದು,
ನಿರಂತರವಾಗಿ ಮಾಹಿತಿ ಕಾರ್ಯಾಗಾರಗಳು, ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲಾಗುತ್ತದೆ. ಉನ್ನತ ಮಟ್ಟದ ಅಧ್ಯಯನ ಸಾಮಗ್ರಿಗಳು ಮತ್ತು ಬೋಧನಾ ವಿಧಾನಗಳು, ನಿರಂತರ ಅಭಿಪ್ರೇರಣಾ ಕಾರ್ಯಕ್ರಮಗಳು ಮತ್ತು ಪಾಲಕರೊಂದಿಗೆ ಸಂಪರ್ಕ ಕಾಲೇಜನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿವೆ.ತತ್ಪರಿಣಾಮವಾಗಿ ಕಳೆದ ಒಂದು ದಶಕದಿಂದ ಕಾಲೇಜು ದಿನದಿಂದ ದಿನಕ್ಕೆ ಉನ್ನತಿಯನ್ನು ಸಾಧಿಸುತ್ತಿದ್ದು, ಪಾಲಕರು ಮತ್ತು ವಿದ್ಯಾರ್ಥಿಗಳ ಸಹಕಾರ ಹಾಗೂ ಭರವಸೆ ಮತ್ತು ಸಿಬ್ಬಂದಿ ವರ್ಗದ ಕಠಿಣ ಪರಿಶ್ರಮವೇ ಇದಕ್ಕೆ ಕಾರಣ ಎನ್ನುತ್ತದೆ ಆಡಳಿತ ಮಂಡಳಿ.
=============
ADVT
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
ನಮ್ಮ
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/
group ಗೆ join ಆಗಿ.
ಈ ಪೋಸ್ಟ್ ಅನ್ನು ನಿಮ್ಮವರೊಡನೆ ಹಂಚಿ......
Related