11-5-2022. ಬುಧವಾರ.

E-YELLAPUR.COM NEWS ಯಲ್ಲಾಪುರ.

ನಿರ್ಮಲ ಮನಸ್ಸುಳ್ಳವರು ಸಾತ್ವಿಕರಾಗಿದ್ದು, ಸದ್ಭಕ್ತರು ಎನಿಸಿಕೊಳ್ಳಲು ಸಾಧ್ಯ. ಶ್ರದ್ದಾ ಕೇಂದ್ರಗಳಾದ ದೇವಾಲಯಗಳು ಇಡೀ ಊರಿನ ಆಧ್ಯಾತ್ಮದ ಧ್ಯಾನದ ಸ್ಥಳವಾಗಿದೆ ಎಂದು ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸ್ವಾಮೀಜಿ ಹೇಳಿದರು.

ADVT

ಅವರು ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಸಮೀಪದ ಹೊನ್ನಗದ್ದೆ ವೀರಭದ್ರ ದೇವಾಲಯದಲ್ಲಿ ನಡೆದ ಸಂಪ್ರೋಕ್ಷಣಾ ಕಾರ್ಯಕ್ರಮದ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ADVT

ಹೊನ್ನಗದ್ದೆಯ ವೀರಭದ್ರ ದೇವರಲ್ಲಿಯೂ ಮಹತ್ವವಾದ ಶಕ್ತಿ ಇದೆ .ಅದನ್ನು ಅರಿತು ನಾವು ನಡೆದುಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಹೈಕೋರ್ಟ್ ವಕೀಲರಾದ

ADVT

ಜಿ ಎನ್ ಭಟ್ಟ ನಡಿಗೆಮನೆ, ಎಸ್.ಎನ್.ಗಾಂವ್ಕಾರ ಬೆಳ್ಳಿಪಾಲ ಉಪಸ್ಥಿತರಿದ್ದರು. ಡಿ.ಜಿ.ಭಟ್ಟ, ದುಂಢಿ ಸ್ವಾಗತಿಸಿದರು.ಬಾಲಸುಬ್ರಹ್ಮಣ್ಯ ಭಟ್ಟ,ಆರ್ ಜಿ ಭಟ್ಟ, ದುಂಢಿ ನಿರೂಪಿಸಿದರು. ಸತೀಶ ಭಟ್ಟ ವಂದಿಸಿದರು.

ನಂತರ ಪದ್ಮಶ್ರೀ ಡಾ. ವೆಂಕಟೇಶ ಕುಮಾರ ಧಾರವಾಡರಿಂದ ಗಾಯನ ಕಾರ್ಯಕ್ರಮ ಜರುಗಿತು. ಹಾರ್ಮೋನಿಯಂ ಸಾಥ್ ನಲ್ಲಿ ಸತೀಶ ಭಟ್ಟ ಹೆಗ್ಗಾರ, ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಭಾಗ, ಹಾಗೂ ಮಧುಕುಡಾಳಕರ್ ತಂಬೂರಿಯಲ್ಲಿ ಸುಧಾಮ ದಾನಗೇರಿ, ಶೇಷಗಿರಿ ಸಹಕರಿಸಿದರು.

ನಂತರ ರಾಜಾ ರುದ್ರಕೋಪ ಯಕ್ಷಗಾನ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ನರಸಿಂಹ ಭಟ್ಟ, ಹಂಡ್ರಮನೆ ಮದ್ದಳೆ, ಗಣೇಶ ಗಾಂವ್ಕಾರ ಚಂಡೆವಾದನದಲ್ಲಿ ಸಹಕರಿಸಿದರು.

ADVT

ರುದ್ರಕೋಪನಾಗಿ ಕಾರ್ತಿಕ ಚಿಟ್ಟಾಣಿ, ರಕ್ತಜಂಘನಾಗಿ ಸಂಜಯ ಬಿಳಿಯೂರು,ನಾರದನಾಗಿ ಅಶೋಕ ಭಟ್ಟ ಸಿದ್ದಾಪುರ, ಚಂದ್ರ ಸೇನನಾಗಿ ಮಂಜುನಾಥ ಗಾಂವ್ಕಾರ ಮೂಲೆಮನೆ,ಸತ್ಯ ಶೀಲೆಯಾಗಿ ಇಟಗಿ ಮಾಬ್ಲೇಶ್ವರ ಭಟ್ಟ,

ಅಜ್ಜಿಯ ಪಾತ್ರದಲ್ಲಿ ಮಾಹಾಬಲೇಶ್ವರ ಭಟ್ಟ ಕ್ಯಾದಗಿ, ಚಿತ್ರಾಕ್ಷಿಯಾಗಿ ನಾಗರಾಜ ಭಟ್ಟ ಕುಂಕಿಪಾಲ, ರಕ್ತ ಕೇಶಿಯಾಗಿ ಗಣಪತಿ ಕುಣಬಿ ಬಾರೆ,ಸಖಿಯ ಪಾತ್ರದಲ್ಲಿ ದೀಪಕ್ ಕುಂಕಿ ಪಾತ್ರ ನಿರ್ವಹಿಸಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading