20-5-2022. ಶುಕ್ರವಾರ.

E-YELLAPUR.COM NEWS ಯಲ್ಲಾಪುರ.

ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಳೆಗದ್ದೆ ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು.

ADVT

ಬಾಳೆಗದ್ದೆಯಿಂದ ತೋಟದಕಲ್ಲಳ್ಳಿ ವರೆಗೆ ವಿದ್ಯುತ್ ಮಾರ್ಗದ ಮೇಲೆ ಬೀಳಬಹುದಾದ ಮರದ ಟೊಂಗೆಗಳನ್ನು ತೆರವುಗೊಳಿಸಿದರು. ಮಳೆ ಹಾಗೂ ಗಾಳಿಯಿಂದ ರಸ್ತೆಯ ಮೇಲೆ ಮುರಿದು ಬಿದ್ದಿದ್ದ ಮರದ ಟೊಂಗೆಗಳನ್ನು ತೆರವುಗೊಳಿಸಲಾಯಿತು.

ADVT

ಶ್ರಮದಾನದಲ್ಲಿ ಊರಿನ ಮೂವತ್ತಿಕ್ಕಿಂತ ಹೆಚ್ಚು ಜನರು ಭಾಗಿಯಾಗಿದ್ದರು. ಎರಡು ಗುಂಪುಗಳಾಗಿ ವಿಂಗಡಿಸಿಕೊಂಡು ವಿದ್ಯುತ್ ಲೈನ್ ಹಾಗೂ ರಸ್ತೆಯ ಎರಡೂ ಬದಿ ಸ್ವಚ್ಛಗೊಳಿಸುವ ಕೆಲಸ ಮಾಡಿದರು.

ADVT

ಎಲ್ಲವನ್ನೂ ಸರಕಾರವೇ ಮಾಡಬೇಕೆಂದು ಬಯಸುವ ಈ ದಿನಗಳಲ್ಲಿ ಜನರೇ ಸೇರಿ ಮಾಡಿರುವ ಈ ಕಾರ್ಯ ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು.

ADVT

ಉಮ್ಮಚಗಿ ಗ್ರಾಮ ಪಂಚಾಯತಿ ಸದಸ್ಯ ಗ.ರಾ.ಭಟ್ಟ, ಗ್ರಾಮಸ್ಥರಾದ ಸಹದೇವ ಮಾಬ್ಲೇಶ್ವರ ಪಟಗಾರ, ಲಿಂಗಪ್ಪ ಸೂಲಪ್ಪ ಪಟಗಾರ, ಮಹೇಶ್ ಗಣಪತಿ ಮೊಗೇರ,

ADVT

ಚಿದಂಬರ ಜಟ್ಟಪ್ಪ ನಾಯ್ಕ, ದತ್ತಾತ್ರೇಯ ಮಂಜು ಪಟಗಾರ, ಮಾದೇವ ಮಾಬ್ಲೇಶ್ವರ ಪಟಗಾರ, ವಿನಾಯಕ ಚೌಡು ಪಟಗಾರ,ಸಂತೋಷ ಶ್ರೀಧರ ಪಟಗಾರ,ಮಣಿಕಂಠ ಮೊಗೇರ,

ADVT

ಸಂತೋಷ ಮೊಗೇರ, ದಾಮೋದರ ನಾಯ್ಕ, ನಾಗರಾಜ ಮೊಗೇರ, ಕೀರ್ತಿ ಮೊಗೇರ, ಮಂಜುನಾಥ ಪಟಗಾರ, ನಾಗೇಂದ್ರ ಪಟಗಾರ ಮುಂತಾದವರು ಈ ಶ್ರಮದಾನದಲ್ಲಿ ಭಾಗಿಯಾಗಿದ್ದರು.

ADVT

ಎಸ್.ಎಸ್.ಎಲ್.ಸಿ.ಫಲಿತಾಂಶ; ಭರತನಹಳ್ಳಿ ಪ್ರಗತಿ ವಿದ್ಯಾಲಯದಲ್ಲಿ ಅಪ್ರಮೇಯ ಪ್ರಥಮ.

ಎಸ್.ಎಸ್.ಎಲ್.ಸಿ.ಫಲಿತಾಂಶದಲ್ಲಿ ಯಲ್ಲಾಪುರ ತಾಲೂಕಿನ ಭರತನಹಳ್ಳಿಯ ಪ್ರಗತಿ ವಿದ್ಯಾಲಯದ ಫಲಿತಾಂಶ ಶೆ.97.8 ಆಗಿದೆ.

ADVT

ಈ ಶಾಲೆಯ ಅಪ್ರಮೇಯ-96.16 ಪ್ರಥಮ ಸ್ಥಾನ, ಭಾರ್ಗವಿ-94.56 ದ್ವಿತೀಯ, ಶ್ರೇಯಸ್-93.28 ತೃತೀಯ ಸ್ಥಾನ ಪಡೆದಿದ್ದಾರೆ.

ADVT

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

ನಮ್ಮ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading