3-6-2022. ರವಿವಾರ.

ಕಾಳುಮೆಣಸು ತೋಟಗಾರಿಕೆಯ ಮಹತ್ವದ ಆದಾಯ ತರುವ ಬೆಳೆಯಾಗಿದ್ದು ರೈತರು ಪ್ರಮುಖವಾಗಿ ಬೆಳೆಯಬಹುದು. ಕೃಷಿಯಲ್ಲಿ ಸುಲಭವಾಗಿ ಮತ್ತು ಸಹಜವಾಗಿ ಬೆಳೆಯುತ್ತಾ ಆಧುನಿಕತೆಯ ತಂತ್ರಜ್ಞಾನವನ್ನು ಬಳಸಿಕೊಂಡರೆ ಕಾಳುಮಣಸು ಲಾಭದಾಯಕ ಬೆಳೆಯಾಗಿದೆ. ಎಂದು ಪ್ರಗತಿಪರ ಕೃಷಿಕ ಎನ್ ಡಿ ಹೆಗಡೆ ಅಂತ್ರವಳ್ಳಿ, ಅಭಿಪ್ರಾಯಪಟ್ಟರು.
ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಸರ್ವೋದಯ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ, ಶ್ರೀದೇವಿ ರೈತ ಉತ್ಪಾದಕ ಕಂಪನಿ ಮತ್ತು ಕರ್ನಾಟಕ ಸಾಂಬಾರು ಪದಾರ್ಥ ಬೆಳೆಗಳ ಅಭಿವೃದ್ಧಿ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಸಾಂಬಾರು ಬೆಳೆಗಳ ಕುರಿತಾದ ಒಂದು ದಿನದ ವಿಚಾರ ಸಂಕಿರಣದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಚಾರ ಸಂಕಿರಣದಲ್ಲಿ ಸಾಂಬಾರ್ ಬೆಳೆಗಳಲ್ಲಿ ಕೀಟನಿರ್ವಹಣೆಯ ಕುರಿತು ಕೃಷಿ ತಜ್ಞರಾದ ವಿ.ಎಂ. ಹೆಗಡೆ ,ವೈಜ್ಞಾನಿಕ ಬೇಸಾಯದ ಕುರಿತು ಬೆಳಗಾವಿಯ ರಾಹುಲ್ ಪಾಠಕ್ , ಗುಣಮಟ್ಟದ ಕಾಳು ಮೆಣಸು ಕುರಿತು ಶ್ರೀಧರ ಭಟ್ಟ , ಚವತ್ತಿ,ಸುಜಯ ಭಟ್ಟ,ಹೊಸಳ್ಳಿ, ಕದಂಬ ಸಂಸ್ಥೆಯ ವಿಶ್ವೇಶ್ವರ ಭಟ್ಟ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ. ಬಿ.ಪಿ ಸತೀಶ, ಯಲ್ಲಾಪುರ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಸುಭಾಸ ಹೆಗಡೆ, ಕೀರ್ತಿ ಬಿ.ಎಂ, ತೋಟಗಾರಿಕೆ ಸಹಾಯಕರಾದ ಹೀನಾ, ವೇದಾವತಿ ನಾಯ್ಕ, ಶ್ರೀದೇವಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸುಬ್ರಹ್ಮಣ್ಯ ಗಾಂವ್ಕಾರ ಬಾಗಿನಕಟ್ಟಾ, ನಿರ್ದೇಶಕರಾದ ಗಜಾನನ ಭಟ್ಟ, ರತ್ನಾ ಬಾಂದೇಕರ್, ಭಗೀರಥ ನಾಯ್ಕ, ನವೀನ ಕಿರಗಾರೆ, ಗೋಪಾಲ ಭಟ್ಟ ಚಿಮ್ನಳ್ಳಿ, ಜಿ ಎನ್ ಭಟ್ಟ, ವ್ಯವಸ್ಥಾಪಕ ಪ್ರಕಾಶ ಭಟ್ಟ ವೇದಿಕೆಯಲ್ಲಿ ಇದ್ದರು. ಸಣ್ಣಪ್ಪ ಭಾಗ್ವತ, ವಿಚಾರ ಸಂಕಿರಣವನ್ನು ನಿರ್ವಹಿಸಿ ಅತಿಥಿಗಳನ್ನು ಪರಿಚಯಿಸಿದರು

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading