advt

7-7-2022. ಗುರುವಾರ.

e-yellapur.com news ಯಲ್ಲಾಪುರ

ಟಿ.ಎಸ್.ಎಸ್ ಸೂಪರ್ ಮಾರ್ಕೆಟ್ ಸಂಸ್ಥೆಯ ವತಿಯಿಂದ ಗುರುವಾರ ಯಲ್ಲಾಪುರ ಪೊಲೀಸ್ ಠಾಣೆಗೆ ಹತ್ತು ಬ್ಯಾರಿಕೇಡ್‍ಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಸುಗಮ ಸಂಚಾರ, ಚೆಕ್ ಪೋಸ್ಟ್ ಕರ್ತವ್ಯ ನಿರ್ವಹಣೆ, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಪಘಾತ ಮತ್ತು ಅಪರಾಧವನ್ನು ತಡೆಯಲು ಅವಶ್ಯವಾಗಿದ್ದ, ಅಂದಾಜು 80,000 ರೂ. ಮೌಲ್ಯದಲ್ಲಿ ತಯಾರಿಸಿದ ಈ ಬ್ಯಾರಿಕೇಡ್‍ಗಳನ್ನು ಸಂಸ್ಥೆಯ ಪ್ರಮುಖರು ಯಲ್ಲಾಪುರ ಪೊಲೀಸ್ ಠಾಣೆಗೆ ಕೊಡುಗೆಯಾಗಿ ಹಸ್ತಾಂತರಿಸಿದರು.

ಈ ಕೊಡಿಗೆಯನ್ನು ನೀಡಿದ ಟಿ.ಎಸ್.ಎಸ್.ಎಸ್. ಸೂಪರ್ ಮಾರ್ಕೆಟ್ ಸಂಸ್ಥೆಯರಿಗೆ ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರತಜ್ಞತೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಪಿಐ ಸುರೇಶ ಯಳ್ಳೂರು, ಪಿಎಸ್ಸೈಗಳಾದ ಮಂಜುನಾಥ ಗೌಡರ್, ಅಮೀನ್ ಸಾಬ್ ಅತ್ತಾರ್, ಟಿ.ಎಸ್.ಎಸ್.ಸಂಸ್ಥೆಯ ಸಲಹಾ ಸಮಿತಿಯ ಪ್ರಮುಖರಾದ ನರಸಿಂಹ ಭಟ್ಟ ಗುಂಡ್ಕಲ್, ಶಾಖಾ ವ್ಯವಸ್ಥಾಪಕ ವಸಂತ, ಪೊಲೀಸ್ ಸಿಬ್ಬಂದಿ ನಾಗಪ್ಪಾ ಲಮಾಣಿ ಇದ್ದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading