10-7-2022. ರವಿವಾರ.

e-yellapur.com news ಯಲ್ಲಾಪುರ.

ಆಷಾಢ ಶುದ್ಧ ಏಕಾದಶಿಯ ನಿಮಿತ್ತ ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ರವಿವಾರ ತುಳಸಿ ಅರ್ಚನೆ ನಡೆಯಿತು. ಈ ನಿಮಿತ್ತ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಗೋಪಾಲಕೃಷ್ಣ ದೇವರಿಗೆ ವಿಷ್ಣು ಸಹಸೃನಾಮಪೂರ್ವಕವಾಗಿ ತುಳಸಿ ಅರ್ಚನೆಯನ್ನು ನೆರವೇರಿಸಲಾಯಿತು.

ಪ್ರಸಾದ ವಿತರಣೆ ನಡೆಯಿತು. ವಿ.ಶಂಕರ ಭಟ್ಟ ಬಾಲಿಗದ್ದೆಯವರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮಾಡಿದರು. ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ಟ ಬಿದ್ರೇಪಾಲ, ಮೊಕ್ತೇಸರರಾದ ಗೋಪಾಲಕೃಷ್ಣ ಭಟ್ಟ ವೈದಿಕರಮನೆ, ಪ್ರಮುಖರಾದ ರಾಮಕೃಷ್ಣ ಭಟ್ಟ ಬಿದ್ರೇಪಾಲ, ರಾಜ್ಯ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಟಿ.ಕೆ.ಭಾಗ್ವತ್, ಮಹಾಬಲೇಶ್ವರ ಭಾಗ್ವತ್ ಗುಡ್ನಮನೆ, ವಿನಾಯಕ ಭಾಗ್ವತ್ ಗುಡ್ನಮನೆ, ಜಿ.ಎನ್.ಭಟ್ ತಟ್ಟಿಗದ್ದೆ ಮುಂತಾದವರು ಪಾಲ್ಗೊಂಡಿದ್ದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜನ್ಮ ದಿನದ ನಿಮಿತ್ತ ರವಿವಾರ ಯಲ್ಲಾಪುರ ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ಬಿಜೆಪಿ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖರಾದ ರಾಮು ನಾಯ್ಕ, ಆದಿತ್ಯ ಗುಡಿಗಾರ, ಲಕ್ಷ್ಮೀನಾರಾಯಣ ತೋಟಮನೆ, ವಿನೋದ ತಳೇಕರ್ ಮುಂತಾದವರು ಇದ್ದರು.

ನಿಖರ, ನಿರಂತರ, ವಿಶ್ವಾಸಾರ್ಹ ಸುದ್ದಿಗಳಿಗಾಗಿ e-yellapur.com digital news ಓದಿ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading