
14-7-2022. ಗುರುವಾರ.
E-YELLAPUR.COM NEWS ಯಲ್ಲಾಪುರ.
ಗುರುವಾರ ಸುರದ ಭಾರಿ ಮಳೆ, ಗಾಳಿಯಿಂದಾಗಿ ಯಲ್ಲಾಪುರ ತಾಲೂಕಿನ ಮದನೂರು ಗ್ರಾಮದ ಇಂತ್ರೋಜ ಪ್ರಾನಸಿಸ್ ಸಿದ್ದಿಯವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಕುಸಿದಿದ್ದು, ಮನೆಯ ಗೋಡೆಗೆ ಹಾನಿಯಾಗಿದೆ.

ಇನ್ನೊಂದು ಘಟನೆಯಲ್ಲಿ ತಾಲೂಕಿನ ಮದನೂರಿನ ಬೆಳಕೊಪ್ಪದ ಅನಿತಾ ಸಿಲಾಸ ಸಿದ್ದಿಯವರ ಮನೆಯ ವಾಸ್ತವ್ಯದ ಮನೆಯ ಗೋಡೆಯು ಕುಸಿತಗೊಂಡು ಭಾಗಶಃ ಹಾನಿಯಾಗಿದೆ. ಮಳೆಯಿಂದ ಹಾನಿ ಸಂಭವಿಸಿದ ಈ ಎರಡೂ ಸ್ಥಳಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೆಟ್ಟಿ ನೀಡಿ ಪರಿಶಿಲಿಸಿ, ಹಾನಿಯನ್ನು ಅಂದಾಜಿಸಿ ವರದಿ ಸಲ್ಲಿಸಿದ್ದಾರೆ.

ಅಪ್ರಾಪ್ತ ಬಾಲಕನಿಗೆ ದ್ವಿಚಕ್ರವಾಹನ ಚಲಾಯಿಸಲು ನೀಡಿದ ಮಾಲೀಕರಿಗೆ 25,500 ರೂ ದಂಡ.
E-YELLAPUR.COM NEWS ಕಾರವಾರ.
ಅಪ್ರಾಪ್ತ ಬಾಲಕನಿಗೆ ದ್ವಿಚಕ್ರವಾಹನ ಚಲಾಯಿಸಲು ನೀಡಿದ ಮಾಲೀಕರಿಗೆ 25,500 ರೂ ದಂಡ ವಿಧಿಸಿದ ಘಟನೆ ಕಾರವಾರದಲ್ಲಿ ಗುರುವಾರ ನಡೆದಿದೆ. ಜು.7ರಂದು ಕಾರವಾರ ಸಂಚಾರ ಠಾಣೆಯ ಪಿಎಸೈ ನಾಗಪ್ಪ ಮತ್ತು ಸಿಬ್ಬಂದಿಗಳು ಭಾರತೀಯ ಮೋಟಾರು ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನವನ್ನು ಜಪ್ತಿಪಡಿಸಿಕೊಂಡು ಆರೋಪಿತರ ವಿರುದ್ಧ ಕಾರವಾರದ ಹಿರಿಯ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಗುರುವಾರ ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರೇಷ್ಮಾ ರೋಡ್ರಿಗಸ್ ಅವರು, ಅಪ್ರಾಪ್ತ ಬಾಲಕನಿಗೆ ವಾಹನ ಚಲಾವಣೆ ಮಾಡಲು ವಾಹನ ನೀಡಿದ್ದ ಕಾರವಾರದ ನಂದಗದ್ದಾದ ರೇಷ್ಮಾ ಅಲಿ ಶೇಕ್ ಅವರಿಗೆ 25,500 ರೂ ದಂಡ ವಿಧಿಸಿದ್ದಾರೆ.

ಕೊಚ್ಚಿಹೋದ ಫೂಟ್ ಬ್ರಿಜ್.
ನಿರಂತರವಾಗಿ ಸುರಿದ ಮಳೆಯಿಂದಾಗಿ ಗುರುವಾರ ಯಲ್ಲಾಪುರ ತಾಲೂಕಿನ ತಾರಗಾರ ಗ್ರಾಮದಲ್ಲಿ ಫೂಟ್ ಬ್ರಿಜ್ ಕೊಚ್ಚಿಹೋಗಿದೆ. ಅಧಿಕಾರಿಗಳು ಪರಿಶಿಲನೆ ನಡೆಸಿದ್ದಾರೆ.

ಮಳೆ ಹಾಗೂ ಗಾಳಿಯಿಂದ ಬೃಹತ್ ಮರವೊಂದು ಮುರಿದು ಬಿದ್ದು ವಿದ್ಯುತ್ ಲೈನ್ ಗೆ ಹಾನಿಯಾದ ಘಟನೆ ಯಲ್ಲಾಪುರ ಪಟ್ಟಣದ ಗೋಪಾಲಕೃಷ್ಣಗಲ್ಲಿಯಲ್ಲಿ ಗುರುವಾರ ನಡೆದಿದೆ.


ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q
E YELLAPUR -FACE BOOK PAGE LIKE ಮಾಡಿ – https://www.facebook.com/eyellapur
ನಮ್ಮ FACEBOOK GROUP – https://www.facebook.com/groups/593852164946589/





