15-7-2022. ಶುಕ್ರವಾರ.

E-YELLAPUR DIGITAL NEWS.

ಮಳೆ ಹಾಗೂ ಗಾಳಿಯಿಂದ ಕುಸಿತವಾಗುತ್ತಿರುವ ಯಲ್ಲಾಪುರ ತಾಲೂಕಿನ ಕವಡಿಕೆರೆಯ ಕೆರೆ ದಡದ ರಸ್ತೆ ಪ್ರದೇಶಕ್ಕೆ ಶುಕ್ರವಾರ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಾಯವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಪಿಎಸ್ಸೈ ಮಂಜುನಾಥ ಗೌಡರ್ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ಬಾಳೆಹಳ್ಳಿಯಲ್ಲಿ ಮನೆ ಬಿದ್ದು ಅಪಾರ ಹಾನಿ.

ಜೋರಾಗಿ ಸುರಿದ ಮಳೆಯಿಂದಾಗಿ ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಬಾಳೆಹಳ್ಳಿಯಲ್ಲಿ ಜಾನು ಬುದ್ದು ಕುಣಬಿ ಎನ್ನುವವರಿಗೆ ಸೇರಿದ ಮನೆಯು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮೊದಲೇ ಮನೆ ಬೀಳಬಹುದೆಂಬ ಸಂಶಯದಲ್ಲಿದ್ದ ಮನೆಯವರು ಕೆಲವು ಬೆಲೆ ಬಾಳುವ ವಸ್ತುಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾದರೂ ಉಳಿದೆಲ್ಲ ದಿನ ಬಳಕೆಯ ವಸ್ತುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ಸೋಗೆ ಹೊಚ್ಚಿಗೆಯ ಬಹಳ ಹಳೆಯ ಕಾಲದ ಮನೆ ಇದಾಗಿದ್ದು, ಮನೆ ಕುಸಿತಕ್ಕೊಳಗಾದ ಸುದ್ದಿ ತಿಳಿದ ತಕ್ಷಣ ಉಮ್ಮಚ್ಗಿ ಪಂಚಾಯತದ ಅಧ್ಯಕ್ಷೆ ರೂಪಾ ಪೂಜಾರಿ, ಪಿ.ಡಿ.ಒ. ಜಿ.ಜಿ.ಶೆಟ್ಟಿ, ವಿಲೇಜ್ ಅಕೌಂಟೆಂಟ್ ಸವಿತಾ ಭಜಂತ್ರಿ, ಗ್ರಾ.ಪಂ.ಉಪಾಧ್ಯಕ್ಷ ಶಿವರಾಯ ಪೂಜಾರಿ, ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ, ಗಂಗಾ ಕಿರಣ ಹೆಗಡೆ,ಖೈತಾನ್ ಡಿಸೋಜ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading