15-7-2022. ಶುಕ್ರವಾರ.

E-YELLAPUR DIGITAL NEWS.

ಶುಕ್ರವಾರ ಸುರಿದ ಜೋರಾದ ಮಳೆ ಹಾಗೂ ರಭಸದಿಂದ ಬೀಸಿದ ಗಾಳಿಯಿಂದಾಗಿ ಯಲ್ಲಾಪುರ ತಾಲೂಕಿನ ವಿವಿದೆಡೆ ಹಾನಿ ಸಂಭವಿಸಿದೆ. ತಾಲೂಕಿನ ತಟಗಾರಿನಲ್ಲಿ ಬೀಬಿ ಆಯಿಷಾ ಅವರ ವಾಸ್ತವ್ಯದ ಮನೆ ಪಕ್ಕದ ಕೊಟ್ಟಿಗೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಂದಾಜು 20 ಸಾವಿರ ಹಾನಿ ಸಂಭವಿಸಿದೆ.

ಯಲ್ಲಾಪುರ ಪಟ್ಟಣದ ದೇವಿದೇವಸ್ಥಾನ ರಸ್ತೆಯ ಓಂಕಾರ ಗುರಿಶಾಂತಯ್ಯಾ ಅವರ ಮನೆಯ ಗೋಡೆ ಬಿದ್ದು, 3 ಸಾವಿರ ರೂ ಹಾನಿಯಾಗಿದೆ. ಪಟ್ಟಣದ ಮಂಜುನಾಥ ನಗರದ ಕೃಷ್ಣ ನಾರಾಯಣ ಮರಾಠಿ ಇವರ ಮನೆಯ ಅಡುಗೆ ಕೋಣೆಯ ಗೋಡೆಬಿದ್ದು ಹಾನಿಯಾಗಿದೆ. 8 ಸಾವಿರ ರೂ ಹಾನಿಯನ್ನು ಅಂದಾಜಿಸಲಾಗಿದೆ.

ಚಂದಗುಳಿ ಗ್ರಾಮದ ಶಿಲ್ಪಾ ಗಂಗಾಧರ ಚಿಂಚನಕರ್ ಅವರ ವಾಸ್ತವ್ಯದ ಮನೆಗೆ ಹಾನಿಯಾಗಿದೆ. ಘಟನಾ ಸ್ಥಳಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589/

group ಗೆ join ಆಗಿ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading