advt

18-7-2022. ಸೋಮವಾರ.

E-YELLAPUR DIGITAL NEWS

ICSE ಪರೀಕ್ಷಾ ಫಲಿತಾಂಶದಲ್ಲಿ ಯಲ್ಲಾಪುರ ತಾಲೂಕಿನ ಬೀಗಾರಿನ ದಿಶಿತಾ ಕೋಮಾರ ಇವಳು ಗುಜರಾತ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ದೇಶಕ್ಕೆ ಮೂರನೇ ಸ್ಥಾನ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ. ಇವಳು ಬೀಗಾರಿನ ಕೋಮಾರ ಮನೆತನದ ನರಸಿಂಹ ಕೋಮಾರ ಹಾಗೂ ಶಾರದಾ ಕೋಮಾರ ಇವರ ಪುತ್ರಿಯಾಗಿದ್ದಾಳೆ.

ಪ್ರಸ್ತುತ ನರಸಿಂಹ ಕೋಮಾರ ಅವರು ಗುಜರಾತಿನ ಗಾಂಧೀನಗರದಲ್ಲಿ ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಿಶಿತಾ ಅವಳು ಗುಜರಾತಿನ ಅಹಮದಾಬಾದ್ ನಗರದ ಆನಂದ ನಿಕೇತನ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ICSE ಪರೀಕ್ಷಾ ಫಲಿತಾಂಶದಲ್ಲಿ ಶೇ. 99.4 ಅಂಕ ಪಡೆದಿದ್ದಾಳೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾವಂತೆಯಾದ ಇವಳು ಕ್ರೀಡಾವಿಭಾಗದಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾಳೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/593852164946589

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading