
24-7-2022. ರವಿವಾರ.


ಭಾರತದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರತಿಭಾವಂತ ಯುವ ಭಾಗವತರಾದ ಕು.ಚಿಂತನಾ ಹೆಗಡೆ ಮಾಳ್ಕೋಡು ಅವರು ಬಡಗುತಿಟ್ಟಿನ ಯಕ್ಷಗಾನಶೈಲಿಯಲ್ಲಿ ಹಾಡಿರುವ ಹೆಜ್ಜೆ ಇಟ್ಟಿಹಳು ದ್ರೌಪದಿ ಎಂಬ ಇಂಪಾದ ಪದ್ಯವು ಈಗ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.
SEE VIDEO

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರೂ ಸಹ ಈ ಪದ್ಯದ ಕುರಿತು ತಮ್ಮ ಟ್ವೀಟರ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ, ಪದ್ಯದ ಸಾಹಿತ್ಯ ಹಾಗೂ ಧ್ವನಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


ಅನೇಕ ಯಕ್ಷಗಾನ ಪ್ರೀಯರೂ ಸಹ whats app, ಫೇಸ್‍ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆಈ ಪದ್ಯದಲ್ಲಿ ಚಿಂತನಾ ಅವರು, ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಆಗದಿರಲಿ, ಉಗ್ರರ, ಭಯೋತ್ಪಾದಕರ ಶಕ್ತಿ ಅಡಗಲಿ, ಭಾರತವು ಮಹಾಭಾರತ ಆಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.







