24-7-2022. ರವಿವಾರ.

VIDEO

ಯಲ್ಲಾಪುರ ಪಟ್ಟಣದ ರವೀಂದ್ರನಗರದ ಶಕ್ತಿಗಣಪತಿ ದೇವಾಲಯದಲ್ಲಿ ಶ್ರಾವಣಮಾಸದ ನಿಮಿತ್ತ ಒಂದುತಿಂಗಳ ಕಾಲ ಪ್ರತಿದಿನ ಗಣಹವನ ಹಾಗೂ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಅನಂತ ಗಾಂವ್ಕಾರ್ ಕಂಚೀಪಾಲ ತಿಳಿಸಿದ್ದಾರೆ.

E-YELLAPUR DIGITAL NEWS YOUTUBE LINK

https://youtube.com/channel/UCl9HLpwN7rGV0dyzYruwkFw

ಈ ಕುರಿತು ರವಿವಾರ ಮಾಹಿತಿ ನೀಡಿದ ಅವರು, ಜು.29 ಶುಕ್ರವಾರದಿಂದ ಪ್ರತಿದಿನ ಶ್ರೀದೇವರ ಸನ್ನಿಧಿಯಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ಗಣಹವನ ನಡೆಯಲಿದೆ. ಪ್ರತಿದಿನ ಸಂಜೆ ಮಾತೆಯರಿಂದ ಭಕ್ತಿಗೀತೆ, ಭಜನೆ ನಡೆಯಲಿದೆ.

ಶ್ರಾವಣ ಮಾಸದಲ್ಲಿ ಬರುವ ನೂಲುಹುಣ್ಣಿಮೆ ಮುಂತಾದ ಹಬ್ಬಗಳ ಆಚರಣೆಯನ್ನು ದೇವಾಲಯದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಬೇಕು ಎಂದರು.
ಆಡಳಿತ ಸಮೀತಿಯ ಪ್ರಮುಖರಾದ ಸಿ.ಎಸ್.ಹೆಗಡೆ, ಸುಬ್ರಾಯ ಭಟ್ಟ ಹಂಡ್ರಮನೆ, ಬಿ.ಎನ್.ಹೆಗಡೆ ಮುಂತಾದವರು ಇದ್ದರು.

ಸಿಬಿಎಸ್‍ಇ ಫಲಿತಾಂಶದಲ್ಲಿ ಗಣೇಶ ಗಾಂವ್ಕಾರ್ ಸಾಧನೆ.
ಇತ್ತೀಚೆಗೆ ಪ್ರಕಟಗೊಂಡ 10 ನೇ ತರಗತಿಯ ಸಿಬಿಎಸ್‍ಇ ಪರೀಕ್ಷಾ ಫಲಿತಾಂಶದಲ್ಲಿ ಯಲ್ಲಾಪುರ ತಾಲೂಕಿನ ತಾರಗಾರ ಮೂಲದ ಗಣೇಶ ಗಾಂವ್ಕರ್ 500 ಅಂಕಗಳಿಗೆ 498 ಅಂಕ ಪಡೆದು ಶೇ. 99.6 ಸಾಧನೆ ಮಾಡಿದ್ದಾನೆ. ಈತನು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಎನ್.ಐ.ಟಿ.ಕೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ್ದಾನೆ.

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ.
https://chat.whatsapp.com/L2CReGIOXdX7UXCxXicb4Q group ಗೆ join ಆಗಿ

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.com/groups/59385

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading