18-8-2022. ಗುರುವಾರ.

ಸುಜ್ಞಾನ ನೆಟ್‍ವರ್ಕ್ ಯಲ್ಲಾಪು ಅವರ ಇ-ಯಲ್ಲಾಪುರ ಡಿಜಿಟಲ್ ಮಾಧ್ಯಮದ ವತಿಯಿಂದ ಯಲ್ಲಾಪುರದ ರಂಗಸಹ್ಯಾದ್ರಿ ಹಾಗೂ ಗೌತಮ್ ಜುವೆಲ್ಲರ್ಸ್ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಏರ್ಪಡಿಸಲಾಗಿದ್ದ ಉತ್ತರಕನ್ನಡ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2022 ರ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದ ಪರ್ವಕಾಲದಲ್ಲಿ ಯಲ್ಲಾಪುರ ತಾಲೂಕಿನ ಪುರಾಣ ಪ್ರಸಿದ್ಧ ಅಣಲಗಾರ ಶ್ರೀಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಈ ಸ್ಪರ್ಧೆಯ ಫಲಿತಾಂಶವನ್ನು ಬಿಡುಗಡೆಗೊಳಿಸಲಾಯಿತು.

ಅಣಲಗಾರ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ವಕೀಲರಾದ ಎನ್.ಆರ್.ಭಟ್ ಬಿದ್ರೇಪಾಲ್, ದೇವಾಲಯದ ಮೊಕ್ತೇಸರರಾದ ಗೋಪಾಲಕೃಷ್ಣ ಭಟ್ ವೈದಿಕರಮನೆ, ಹಿರಿಯ ಪತ್ರಕರ್ತರಾದ ಜಿ.ಎನ್.ಭಟ್ ತಟ್ಟಿಗದ್ದೆ ಹಾಗೂ ಸ್ಥಳೀಯ ಪ್ರಮುಖರಾದ ಮಹಾಬಲೇಶ್ವರ ಭಾಗ್ವತ್ ಗುಡ್ನಮನೆ, ಇ-ಯಲ್ಲಾಪುರ ಡಿಜಿಟಲ್ ಮಾಧ್ಯಮದ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಈ ಫಲಿತಾಂಶವನ್ನು ಬಿಡುಗಡೆಗೊಳಿಸಿದರು.

ಸ್ಪರ್ಧಾ ಫಲಿತಾಂಶಗಳು.

ಪ್ರಥಮ ; ಆಯುಷ್ ಪ್ರಶಾಂತ ಹೆಗಡೆ. ಲಕ್ಕಿಜಡ್ಡಿ. ಸಿದ್ಧಾಪುರ.

ದ್ವಿತೀಯ ; ಸ್ತುತಿ ಅಕ್ಷಯ ಭಟ್ ಶಿರಸಿ.

ತೃತೀಯ ; ಹನೀಶ್ ಗೌಡ ಗುಳ್ಳಾಪುರ.

ಸಮಾಧಾನಕರ ಬಹುಮಾನಗಳು.

ಜತೀನ್ ಗೌಡ ಕಾರವಾರ. ಭುವನ್ಯಾ ಹೆಗಡೆ ಶಿರಸಿ. ತೇಜಸ್ ನಾಯ್ಕ ಯಲ್ಲಾಪುರ. ರಿಶಾ ಡಿಕೋಸ್ಟಾ ಶಿರಸಿ. ರಿಶಿ ದೇಸಾಯಿ ಜೋಯ್ಡಾ, ಚತುರ್ವಿಕೃಷ್ಣ ಭಟ್ ಶಿರಸಿ. ಅನ್ವಿ ಮಂಜುನಾಥ ಭಟ್ ಯಲ್ಲಾಪುರ. ಸುವಿನ್ ಹೆಗಡೆ ಬಿಸ್ಲಕೊಪ್ಪ. ಆರಾಧ್ಯಾ ಭೋವಿವಡ್ಡರ್ ಯಲ್ಲಾಪುರ. ಆಶಿಷ್ ಹೆಗಡೆ ಯಲ್ಲಾಪುರ.

ಈ ಸ್ಪರ್ಧೆಯ ನಿರ್ಣಾಯಕರಾಗಿ ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಉಪನ್ಯಾಸಕರಾದ ವಿದ್ವಾನ್ ಸುಬ್ರಹ್ಮಣ್ಯ ಭಟ್, ಭಾರತೀ ನೃತ್ಯ ಕಲಾಕೇಂದ್ರದ ಮುಖ್ಯಸ್ಥರಾದ ನೃತ್ಯಗುರು ವಿದುಷಿ ಸುಮಾ ಹೆಗಡೆ ತೊಂಡೆಕೆರೆ, ಯಲ್ಲಾಪುರದ ಪತ್ತಾರ್ ಫೋಟೋ ಸ್ಟುಡಿಯೋ ಮಾಲಿಕರಾದ ಗಣೇಶ ಪತ್ತಾರ್ ಕಾರ್ಯನಿರ್ವಹಿಸಿದರು.

ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸದ್ಯದಲ್ಲಿಯೇ ನಗದು ಬಹುಮಾನ, ಪಾರಿತೋಷಕ, ಪ್ರಮಾಣ ಪತ್ರವನ್ನು ವಿತರಿಸಿ, ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ, ಸಹಕರಿಸಿದ ಪಾಲಕರಿಗೆ, ಪೋಷಕರಿಗೆ ಹಾಗೂ ನಿರ್ಣಾಯಕರಿಗೆ ಇ-ಯಲ್ಲಾಪುರ ಮಾಧ್ಯಮದ ವತಿಯಿಂದ ಹಾರ್ದಿಕ ಧನ್ಯವಾದಗಳು. ಸ್ಪಧಾ ವಿಜೇತರಿಗೆ ಅಭಿನಂದನೆಗಳು. ಈ ಸ್ಪರ್ಧೆಗೆ ಬಂದ ಆಯ್ದ ಫೋಟೋಗಳನ್ನು E-YELLAPUR DIGITAL NEWS ನಲ್ಲಿ ಪ್ರಕಟಿಸಲಾಗುವುದು.

ಪ್ರಮುಖ ಸುದ್ದಿಗಳ ವೀಡಿಯೋ ದೃಶ್ಯಾವಳಿಗಳ ವೀಕ್ಷಣೆಗಾಗಿ ನಮ್ಮ e-yellapur digital news ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಮಾಡಿ. ಈ ಲಿಂಕ್ ಒತ್ತಿ.https://youtube.com/channel/UCl9HLpwN7rGV0dyzYruwkFw

ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮwhats app group ಗೆ join ಆಗಿ. https://chat.whatsapp.com/L2CReGIOXdX7UXCxXicb4Q

E YELLAPUR -FACE BOOK PAGE LIKE ಮಾಡಿ – https://www.facebook.com/eyellapur

ನಮ್ಮ FACEBOOK GROUP – https://www.facebook.co

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading